ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಇಲ್ಲದ ತಂಡ ಊಹಿಸಿಕೊಳ್ಳುವುದೂ ಕಷ್ಟ: ಕುಂಬ್ಳೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 23 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಬಳಿಕ ಸಚಿನ್ ತೆಂಡೂಲ್ಕರ್ ವಿದಾಯದ ಬಗ್ಗೆ ಸಣ್ಣ ಸುಳಿವು ನೀಡಿರಬಹುದು. ಆದರೆ ಸಚಿನ್ ಇಲ್ಲದ ಭಾರತ ಕ್ರಿಕೆಟ್ ತಂಡವನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ನುಡಿದಿದ್ದಾರೆ.

`ಸಚಿನ್ ಮತ್ತಷ್ಟು ದಿನ ಆಡಬೇಕು. ಅವರಿಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳುವುದೂ ಕಷ್ಟ. ನಾನು ತೆಂಡೂಲ್ಕರ್ ಜೊತೆ ಹಲವು ವರ್ಷ ಆಡಿದ್ದೇನೆ. ಒಂದು ದಿನ ಅವರು ವಿದಾಯ ನಿರ್ಧಾರ ತೆಗೆದುಕೊಳ್ಳಲೇಬೇಕು. ಆದರೆ ಈ ವಿಷಯ ಸಂಪೂರ್ಣ ತೆಂಡೂಲ್ಕರ್‌ಗೆ ಬಿಟ್ಟ ವಿಚಾರ~ ಎಂದು ಮಾಜಿ ಲೆಗ್ ಸ್ಪಿನ್ನರ್ ಹೇಳಿದ್ದಾರೆ.
`ಯಾವುದೇ ಕ್ರೀಡಾಪಟುವಿರಲಿ. ಇಷ್ಟು ವರ್ಷ ಆಡಿದ ಮೇಲೆ ವಿದಾಯ ಹೇಳುವುದು ಕಷ್ಟದ ನಿರ್ಧಾರ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT