ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಗುಜ್ರಾಲ್ ಶ್ರದ್ಧಾಂಜಲಿ: ಕಲಾಪ ಮುಂದೂಡಿಕೆ

Last Updated 3 ಡಿಸೆಂಬರ್ 2012, 10:56 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನಾರೋಗ್ಯದ ಕಾರಣದಿಂದ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಮಂತ್ರಿ ಇಂದರ್ ಕುಮಾರ್ ಗುಜ್ರಾಲ್ ಅವರಿಗೆ ಸದನದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸುವುದರ ಮೂಲಕ ಸೋಮವಾರ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು.

ಬೆಳಿಗ್ಗೆ ಆರಂಭವಾದ ಉಭಯ ಸದನಗಳ ಕಲಾಪದಲ್ಲಿ ಮೊದಲಿಗೆ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಭೂಪಾಲ್ ಅನಿಲ ದುರಂತ ಸಂಭವಿಸಿ 28 ವರ್ಷಗಳಾದ ಹಿನ್ನೆಲೆಯಲ್ಲಿ ಆ ದುರಂತದಲ್ಲಿ ಮಡಿದವರಿಗೂ ಇದೇ ಸಂದರ್ಭದಲ್ಲಿ ಸಂತಾಪವನ್ನು ಸೂಚಿಸಲಾಯಿತು.

`ದಿ. ಐ.ಕೆ. ಗುಜ್ರಾಲ್ ಅವರು ವಿಶಿಷ್ಟ ಹಾಗೂ ವಿಭಿನ್ನ ಸಂಸದೀಯ ಪಟು ಮತ್ತು ಮಾದರಿ ನಾಯಕರಾಗಿದ್ದರು' ಎಂದು  ಹೇಳುವುದರ ಮೂಲಕ ಲೋಕಸಭೆಯ ಸ್ಪೀಕರ್ ಮೀರಾಕುಮಾರ್ ಅವರು ಅಗಲಿದ ನಾಯಕನನ್ನು ಬಣ್ಣಿಸಿದರು. ನಮ್ಮಿಂದ ದೂರವಾದ ಸ್ನೇಹಿತ ಗುಜ್ರಾಲ್ ಅವರಿಗೆ ಸಂತಾಪವನ್ನು ನಾವು ವ್ಯಕ್ತಪಡಿಸುವುದಾಗಿ ಸದನದಲ್ಲಿ ಸ್ಪೀಕರ್ ತಿಳಿಸಿದರು.

ರಾಜ್ಯಸಭೆಯಲ್ಲಿ ಗುಜ್ರಾಲ್ ಅವರಿಗೆ ಸಂತಾಪವನ್ನು ಸೂಚಿಸಿದ ಅಧ್ಯಕ್ಷ ಹಮೀದ್ ಅನ್ಸಾರಿ, `ಅವರೊಬ್ಬ ಪರಿಣತ, ಚತುರ ಆಡಳಿತಗಾರ, ವಿಭಿನ್ನ ಸಂಸದೀಯ ಪಟು ಹಾಗೂ ಪ್ರೌಢ ವಿದ್ವಾಂಸ ಜೊತೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಸಹ ಆಗಿದ್ದರು ಅವರು ಅಗಲಿರುವುದು ನಮಗೆ ದುಖಃ ತಂದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT