ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನೆಯಿಂದ ಓಡುವ ಕಾರು!

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಚಾಲಕನ ಮುಖದ ಭಾವನೆ ಮತ್ತು ಸನ್ನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಕಾರನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

ಚಾಲಕ ತಲೆ ಅಲ್ಲಾಡಿಸುವ ಅಥವಾ ಕಣ್ಸನ್ನೆ ಮೂಲಕ ಕಾರನ್ನು ನಿಯಂತ್ರಿಸಬಹುದು. ಇದಕ್ಕಾಗಿ ರಿಮೋಟ್ ರೀತಿಯ ಉಪಕರಣ ಸಿದ್ಧಪಡಿಸಲಾಗಿದೆ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸುವ `ಇನ್‌ಫ್ರಾ ರೆಡ್~ ಸಂವೇದಕ ಸಾಧನವು ಚಾಲಕನ ಮುಖಭಾವವನ್ನು ಗ್ರಹಿಸಿ ಕಾರನ್ನು ನಿಯಂತ್ರಿಸುತ್ತದೆ.

ಗ್ಲೋಬಲ್ ಇನ್ಫೋಟೇನ್‌ಮೆಂಟ್ ಕಂಪೆನಿಯ ಎಂಜಿನಿಯರ್‌ಗಳು ತಯಾರಿಸಿರುವ ಈ ಅತ್ಯಾಧುನಿಕ ಕಾರು ಎರಡು ವರ್ಷಗಳಲ್ಲಿ ರಸ್ತೆ ಮೇಲೆ ಓಡಲಿದೆಯಂತೆ!

ಚಾಲಕನ ಭಾವನೆ ಅಥವಾ ಸನ್ನೆಗಳನ್ನು ಕಂಪ್ಯೂಟರ್ ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯ ಕೂಡ ಇರುತ್ತದೆ. ಈ ಬಗ್ಗೆ ವಿಜ್ಞಾನಗಳು ತಲೆ ಕೆಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT