ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸೌಲಭ್ಯ: ಕಾರ್ಮಿಕರಿಗಾಗಿ ಜಾಗೃತಿ ಕಾರ್ಯಕ್ರಮ

Last Updated 19 ಡಿಸೆಂಬರ್ 2012, 19:49 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ಇರುವ ಕರ ಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಮಿತಿಯು ಪೀಣ್ಯ ಕೈಗಾರಿಕಾ ಪ್ರದೇಶದ ಚೊಕ್ಕಸಂದ್ರದ ರಸ್ತೆಯಲ್ಲಿ ಹಮ್ಮಿಕೊಂಡಿತ್ತು.

ಕಾರ್ಮಿಕರನ್ನು ಭೇಟಿ ಮಾಡಿದ ಕಾರ್ಮಿಕರ ಕಲ್ಯಾಣ ಆಯುಕ್ತರಾದ ಡಾ.ಗಿರಿಜಾ ಎಚ್.ಕೊಂಗಿ ಅವರು, `ಮಧ್ಯವರ್ತಿಗಳು ನಿಮ್ಮನ್ನು ನಂಬಿಸಿ ಹಣ ಪಡೆದು ವಂಚಿಸುತ್ತಾರೆ. ಅವರ ತಂತ್ರಗಳಿಗೆ ಮಾರು ಹೋಗಬೇಡಿ.  ನಿಮಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀವೇ ನೇರವಾಗಿ ಬಂದು ಪಡೆದುಕೊಳ್ಳಿ. ಈ ಬಗ್ಗೆ ಸಮಿತಿಯಿಂದ ಮಾಹಿತಿ ಮತ್ತು ಮಾರ್ಗದರ್ಶನ ಪಡೆದುಕೊಳ್ಳಿ' ಎಂದರು.

ಸಮಿತಿ ಅಧ್ಯಕ್ಷ ಎಂ.ಸಿ.ಮುನಿರಾಜು ಮಾತನಾಡಿ, `ನಮ್ಮ ಕಚೇರಿಗೆ ಬಂದು ನಿಮ್ಮ ಸಮಸ್ಯೆಗಳನ್ನು ತಿಳಿಸಿದರೆ, ಪರಿಹಾರ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುವುದು' ಎಂದರು.

`ಸಮಿತಿಯ ಕಚೇರಿಯು ಸಂ. 10, ಮಹಿಮಾ ಆರ್ಕೆಡ್, 100 ಅಡಿ ಪೀಣ್ಯ ಕೈಗಾರಿಕಾ ರಸ್ತೆ, ಜಾಲಹಳ್ಳಿ ವೃತ್ತ- ಈ ವಿಳಾಸದಲ್ಲಿದೆ. ವಿವರಗಳಿಗೆ ಮೊಬೈಲ್: 9844236984, 9980819292 ಅನ್ನು  ಸಂರ್ಪಕಿಸಬಹುದು' ಎಂದರು. ಉಪಾಧ್ಯಕ್ಷ ಎಸ್.ಉಮೇಶ್, ಸಂಚಾಲಕ ಎಂ.ಕದರೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT