ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸೌಲಭ್ಯ ಬಳಕೆಗೆ ಕರೆ

Last Updated 7 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಹನುಮಸಾಗರ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಇಲ್ಲಿ ಕರೆ ನೀಡಿದರು.

ಸಮೀಪದ ಬಂಡರಗಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸರ್ವಶಿಕ್ಷಣ ಅಭಿಯಾನದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ, ಕ್ಷೇತ್ರಸಮನ್ವಯಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿದರು.

ಶಾಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಶರಣಪ್ಪ ಗೌಡರ, ಬಸನಗೌಡ ಪಾಟೀಲ, ರಂಗಪ್ಪ ವಣಗೇರಿ, ವೀರಭದ್ರಪ್ಪ ಕರಮೂಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಪ್ಪ ಆವಿನ, ಸಿಆರ್‌ಪಿ ಗಂಗಾಧರ, ಮಹಾಂತೇಶ ಮುಕ್ಕಣ್ಣವರ, ಸೋಮಪ್ಪ ಹಡಪದ ಇದ್ದರು. ಮಲ್ಲಮ್ಮ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಶಿಕ್ಷಕ ಸಂಗಪ್ಪ ಗದ್ದಿ ಸ್ವಾಗತಿಸಿದರು.

ಸೇಬಿನಕಟ್ಟಿ: ಸಮೀಪದ ಸೇಬಿನಟ್ಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಉದ್ಘಾಟಿಸಿದರು. ವೆಂಕನಗೌಡ ಪೊಲೀಸಪಾಟೀಲ ಮಾತನಾಡಿದರು. ಶಾಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಅಮರಪ್ಪ ಅಂಗಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಗ್ಯಾನಪ್ಪ, ತೇಜನಗೌಡ, ಗಂಗಮ್ಮ, ವೀರಭದ್ರಪ್ಪ ಇಟಗಿ, ಹನುಮಂತಪ್ಪ ಮೇಟಿ, ಶರಣಪ್ಪ ಹಾದಿಮನಿ ಇದ್ದರು. ಮುಖ್ಯಶಿಕ್ಷಕ ಗಿರಿಯಪ್ಪಗೌಡ ಸ್ವಾಗತಿಸಿದರು. ಬಸವರಾಜ ಹೊರಪ್ಯಾಟಿ ಕಾರ್ಯಕ್ರಮ ನಿರೂಪಿಸಿದರು. ವಿರುಪಾಕ್ಷಗೌಡ ವಂದಿಸಿದರು.

ಹೊಸಹಳ್ಳಿ: ಅರ್ಹ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಿದ ನಂತರ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಸಪ್ಪ ಧೂಳಣ್ಣವರ, ಕನಕಪ್ಪ ಅಡವಿಭಾವಿ, ಶಾಲಾ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಅಮರೇಶ ಬಡಕಪ್ಪ, ಮುಖ್ಯಶಿಕ್ಷಕಿ ಜಿ.ನಳಿನಾ ಮಾತನಾಡಿದರು. ಗ್ರಾಮದ ಮುಖಂಡರು, ಶಾಲಾ ಮೇಲ್ವಿಚಾರಣಾ ಸಮಿತಿ ಸದಸ್ಯರು, ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಜುಳಾ ಸಂಗಡಿಗರು ಪ್ರಾರ್ಥಿಸಿದರು. ಕೆ.ಶಾಂತಲಾ ಸ್ವಾಗತಿಸಿದರು. ಮಹಾದೇವಿ ಕರಕಂಟಿಮಠ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ನಾಯಕ ವಂದಿಸಿದರು.

ಕುಂಬಳಾವತಿ: ಸಮೀಪದ ಕುಂಬಳಾವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಮಾಡಲಾಯಿತು. ಮುಖ್ಯಶಿಕ್ಷಕ ಹೇಮಲೆಪ್ಪ ನಾಯಕ, ಶೇಖರ ಇಟಗಿ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡಿದ್ದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕಳಕಪ್ಪ ಹೊಸಮನಿ ಮಾತನಾಡಿದರು.

ಚನ್ನಪ್ಪ ಗುಡಿ, ಶೇಖಮ್ಮ ಹರಿಜನ, ಎಸ್.ಎಂ.ಕುಂಟೋಜಿ, ಸಿದ್ದಪ್ಪ, ಮರಿಯಪ್ಪ ಕೊಪ್ಪಳ, ಮಹಾಲಿಂಗಪ್ಪ ಹಳ್ಳೂರ, ಯಮನಪ್ಪ ಗುರಿಕಾರ, ಶರಣಪ್ಪ ಜಕ್ಲಿ, ಕಳಕಪ್ಪ ಸೂಡಿ, ಸುರೇಖಾ ಕುಲಕರ್ಣಿ, ಶೀಲಾ ಇದ್ದರು.
ಭರಮಪ್ಪ ಪರಸಪೂರ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT