ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿಸವಿ ಈಚಲು

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಲೆನಾಡಿನ ಗುಡ್ಡ-ಬೆಟ್ಟಗಳಲ್ಲಿ ಇದೀಗ ಈಚಲು ಹಣ್ಣು ತನ್ನ ಹಳದಿ ಬಣ್ಣದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಸುಮಾರು ಐದು ಅಡಿ ಎತ್ತರದ ಈಚಲು ಗಿಡದಲ್ಲಿ ಹಸಿರೆಲೆಗಳ ಮಧ್ಯೆ ಹಣ್ಣು ಕಂಗೊಳಿಸುತ್ತಿದೆ.

ಇದು ಖರ್ಜೂರದಂತೆ ತಿನ್ನಲು ಬಲು ರುಚಿ. ಆದರೆ ಖರ್ಜೂರದ ಬೀಜಕ್ಕಿಂತ ದೊಡ್ಡದಾಗಿರುವುದರಿಂದ ಈ ಹಣ್ಣನ್ನು ಚೀಪುತ್ತ ರುಚಿ ಸವಿಯಬಹುದು. ಹಸಿರು ಬಣ್ಣದ ಕಾಯಿ ಹಣ್ಣಾದಂತೆ ಹಳದಿ ಬಣ್ಣಕ್ಕೆ ಪರಿವರ್ತನೆ ಆಗುತ್ತದೆ. ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ತಂತಾನೇ ಬೆಳೆದು ಗುಡ್ಡ-ಬೆಟ್ಟಗಳ ಸೌಂದರ್ಯ ಹೆಚ್ಚಿಸುವುದು ಒಂದೆಡೆಯಾದರೆ ಇದನ್ನು ಬೆಳೆಯುವತ್ತ ಕೂಡ ಅನೇಕ ರೈತರು ಮುಂದಾಗಿದ್ದಾರೆ. ಗಿಡ-ಮರಗಳಲ್ಲಿ ಹಾರಾಡುವ ಹಕ್ಕಿ-ಪಕ್ಷಿಗಳಿಗೆ ಆಹಾರವಾಗಿರುವ ಈ ಹಣ್ಣು ತನ್ನ ನೈಜ ಸೌಂದರ್ಯದಿಂದ ಗಮನ ಸೆಳೆಯುತ್ತದೆ. ಈ ಸುಂದರಿಯತ್ತ ಗಮನ ಹರಿಸುವವರೇ ಕಮ್ಮಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT