ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ ಅಕ್ಟೋಬರ್ 15, 16 ಮತ್ತು 17

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಾಸ ಜಯಂತಿಯಲ್ಲಿ
ನಾಮಸ್ಮರಣ್: ಪುರಂದರ ದಾಸ ಜಯಂತಿ ಮತ್ತು ಶ್ರೀ ಗೋಪಾಲಕೃಷ್ಣ ಭಗವತ್ ಅಷ್ಟಮಿ ಜಯಂತಿ ಪ್ರಯುಕ್ತ ಶನಿವಾರ ಬೆಳಿಗ್ಗೆ 9ಕ್ಕೆ  ಮುಂಬೈಯ ಡಾ.ಆರ್.ಗಣೇಶ್ ಮತ್ತು ಆನಂದ್ ಭಾಗವತರ್ ಅವರಿಂದ ಭಜನೆ. ಸವಿತಾ  ಶ್ರೀ ರಾಮ್, ಮಂಜಪ್ಪ, ಮೋಹನ್ ಭಾಗವತರ್, ಜಯತೀರ್ಥ  ಭಾಗವತರ್ ಮತ್ತು ಪಡುಕಕೊಟೈ, ವಿಜ್ಞೇಶ್ ಮತ್ತು ಶಂಕರ್ ಅವರಿಂದ  ಭಜನೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ರಾಧಾಮಾಧವ ಕಲ್ಯಾಣ. ಮಧ್ಯಾಹ್ನ 2.30ಕ್ಕೆ ವಿದ್ಯಾ ಮತ್ತು ವಿಜಯಾ ಅವರಿಂದ ಭಜನೆ. ಸಂಜೆ 6ಕ್ಕೆ ಪೂಜ್ಯಶ್ರೀ ಗೋಪಾಲಕೃಷ್ಣ ಮತ್ತು ತಂಡದಿಂದ ಭಜನೆ, ರಾಧಾ ಮಾಧವರ ಮೆರವಣಿಗೆ. ಸೋಮವಾರ ಬೆಳಿಗ್ಗೆ 9ಕ್ಕೆ ಆಂಜನೇಯ ಉತ್ಸವ. 10ಕ್ಕೆ ಕಲ್ಯಾಣ ನಗರ ಭಜನ ಮಂಡಳಿಯಿಂದ ಭಜನೆ. ಸಂಜೆ 6ಕ್ಕೆ ಕಲ್ಯಾಣರಾಮನ್ ಭಾಗವತರ್ ಮತ್ತು ತಂಡದಿಂದ ಭಜನೆ.

ಸ್ಥಳ: ಮೊದಲಿಯಾರ್ ಸಂಗಮ್, ನಂ.57, ಒಸಬಾರ್ನ್ ರಸ್ತೆ, (ಲೇಕ್ ಸೈಡ್ ಹಿಂಭಾಗ, ಹಲಸೂರು ಕೆರೆ ಬಳಿ).

ನಾಟಕೋತ್ಸವ
ಬೆಂಗಳೂರು ಲಲಿತಕಲಾ ಪರಿಷತ್: ಭಾನುವಾರ ವಿವೇಕ ಶಾನಭಾಗ ಅವರ ಕಥೆ ಆಧಾರಿತ ರಂಗಪ್ರಯೋಗ (ವಿನ್ಯಾಸ ಮತ್ತು ನಿರ್ದೇಶನ: ಚೆನ್ನಕೇಶವ). ಸೋಮವಾರ ವೈಕಂ ಬಶೀರ್ ಅವರ ಕಥೆ ಆಧಾರಿತ `ನಮ್ಮಳಗಿನ ಬಶೀರ್~ ನಾಟಕ (ನಿರ್ದೇಶನ: ರಾಜೀವ್ ಕೃಷ್ಣನ್).

ಸ್ಥಳ: ನ್ಯಾಷನಲ್ ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್. ನಿತ್ಯ ಸಂಜೆ 6.30.

ದತ್ತಿ, ಸಿರಿ ಸಂಗೀತ
ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ: ಡಾ.ಎಂ.ಎ.ಜಯಚಂದ್ರ ದತ್ತಿ ಮತ್ತು ಡಾ.ಆ.ನೇ.ಉಪಾಧ್ಯೆ ದತ್ತಿ ಕಾರ್ಯಕ್ರಮ ಹಾಗೂ ಸಿರಿ ಸಂಗೀತದಲ್ಲಿ  ಶನಿವಾರ ಸಂಜೆ 5.30ಕ್ಕೆ ಡಾ. ಪದ್ಮಶೇಖರ್ ಅವರಿಂದ  `ಜೈನ ಧರ್ಮದಲ್ಲಿ ವ್ಯಕ್ತಿತ್ವ ವಿಕಾಸ~ ಕುರಿತು ಉಪನ್ಯಾಸ.  ಡಾ.ಎನ್.ಸುರೇಶ್ ಅವರಿಂದ `ಆ.ನೇ.ಉಪಾಧ್ಯೆಯವರ ಸಾಧನೆ~ ಕುರಿತು ಉಪನ್ಯಾಸ. ಸಿರಿ ಸಂಗೀತ-ವಚನ ಗಾಯನದಲ್ಲಿ ರಾಜಾಮಣಿ ಅವರಿಂದ ಗಾಯನ. ಆರ್.ನಾಗರಾಜ (ಮೃದಂಗ).

 ಭಾನುವಾರ ಬೆಳಿಗ್ಗೆ 11ಕ್ಕೆ ಹಸ್ತ ಪ್ರತಿ ತರಗತಿ ಉದ್ಘಾಟನೆ: ಡಾ.ಕೆ.ಆರ್.ಗಣೇಶ್. ಅರ್ಹತಾ ಪತ್ರ ವಿತರಣೆ:  ಡಾ.ದೇವರಕೊಂಡಾರೆಡ್ಡಿ. ಅಧ್ಯಕ್ಷತೆ: ಪ್ರೊ.ಡಿ.ಲಿಂಗಯ್ಯ.

ಸೋಮವಾರ ಸಂಜೆ 5.30ಕ್ಕೆ ಟಿ.ಎನ್. ಮಹದೇವಯ್ಯ ದತ್ತಿ ಮತ್ತು ಆಸ್ಥಾನ ವಿದ್ವಾನ್ ಎಂ.ಜಿ. ನಂಜುಂಡಾರಾಧ್ಯ ದತ್ತಿ ಕಾರ್ಯಕ್ರಮದಲ್ಲಿ ಹಾಗೂ ಸಿರಿ ಸಂಗೀತದಲ್ಲಿ  ಹೀ.ಚಿ.ಶಾಂತವೀರಯ್ಯ ಅವರಿಂದ `ಟಿ.ಎನ್. ಮಹದೇವಯ್ಯನವರ ಬರಹಗಳಲ್ಲಿ ಸಾಂಸ್ಕೃತಿಕ ಚಿತ್ರಣ~ ಮತ್ತು ಡಾ. ಎಂ.ಜಿ. ನಾಗರಾಜ್ ಅವರಿಂದ `ಎಂ.ಜಿ.ನಂಜುಂಡಾರಾಧ್ಯ ಬದುಕು-ಬರಹ~ ಕುರಿತು ಉಪನ್ಯಾಸ. ಸುಕನ್ಯ ವಿಜಯ ಕುಮಾರ್ ಅವರಿಂದ ದಾಸರ ಕೀರ್ತನೆಗಳ ಗಾಯನ. ಆರ್.ನಾಗರಾಜ್ (ಮೃದಂಗ), ರಾಘವೇಂದ್ರ (ವಯಲಿನ್). ಸ್ಥಳ: ಬಿಎಂಶ್ರೀ ಕಲಾಭವನ, 3ನೇ ಮುಖ್ಯ ರಸ್ತೆ, ನರಸಿಂಹರಾಜ ಬಡಾವಣೆ.

ಹರಿಕಥೆ
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ ಬಿ.ಎನ್.ಸುಬ್ಬರಾವ್ ಅವರಿಂದ ಹರಿಕಥೆ. ಭಾನುವಾರ ಬೆಳಿಗ್ಗೆ 9ಕ್ಕೆ ಲಲಿತಾ ಪಂತಲು ತಂಡದಿಂದ ಸಂಗೀತ. ಸ್ಥಳ: ಮಹಾಲಕ್ಷ್ಮಿಪುರಂ.

ಭೀಷ್ಮ ಪರ್ವ- ದ್ರೋಣಪರ್ವ
ವಿಜಯನಗರ ಶ್ರೀ ಮಧ್ವಮಹಾಪರಿಷತ್, ಉತ್ತರಾದಿಮಠ ಹಾಗೂ ವಿಜಯನಗರ ಮಾಧ್ವಸೇವಾ ಟ್ರಸ್ಟ್: ಶನಿವಾರ, ಭಾನುವಾರ ಮತ್ತು ಸೋಮವಾರ ಜಯತೀರ್ಥಾಚಾರ್ಯ ಮಳಗಿ ಅವರಿಂದ `ಭೀಷ್ಮ ಪರ್ವ- ದ್ರೋಣಪರ್ವ~ ಪ್ರವಚನ.
ಸ್ಥಳ: 37/2, ಗಂಗಾಧರ ಬಡಾವಣೆ, 8ನೇ ಮುಖ್ಯ ರಸ್ತೆ, 23ನೇ ಅಡ್ಡ ರಸ್ತೆ, ಎಂ.ಸಿ.ಬಡಾವಣೆ, ವಿಜಯನಗರ. ಸಂಜೆ 6.

ಹರಿವಂಶ ಪುರಾಣ
ಪಾರ್ಥಸಾರಥಿ ದೇವರ 25ನೇ ಪ್ರತಿಷ್ಠಾ ವರ್ಷಾಚರಣೆಯ ಅಂಗವಾಗಿ ಡಾ.ಮಾಳಗಿ ರಾಮಾಚಾರ್ ಅವರಿಂದ `ಶ್ರೀ ಹರಿವಂಶ ಮಹಾಪುರಾಣದ ಉಪನ್ಯಾಸ. ಸ್ಥಳ: ಕಾಶಿ ಮಠ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 6.30.

ಸಂಕೀರ್ತನಾ ಸಂದೇಶ
ಶ್ರೀರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಶನಿವಾರ ಸ್ವಾಮಿ ಚಂದ್ರೇಶಾನಂದಜಿ ಅವರಿಂದ  `ಸಂಕೀರ್ತನಾ ಸಂದೇಶ~ ಕುರಿತು ಉಪನ್ಯಾಸ. ಸ್ಥಳ: ಮಂಗಳಪತಿ ಸತ್ಯಸಾಯಿ ನಗರ, ದೇವಸಂದ್ರ. ಭಾನುವಾರ ಇವರಿಂದಲೇ `ಆಧ್ಯಾತ್ಮ ಸಾಧನೆ~. ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, ಮೂರನೇ ಹಂತ. ಯಲಹಂಕ ಉಪನಗರ. ನಿತ್ಯ ಸಂಜೆ 5.

ರಂಗವೈಭವೋತ್ಸವ
ಶ್ರೀ ಕಾಲಭೈರವ ಕಲಾನಿಕೇತನ ಸಂಸ್ಥೆ: ನಾಡಪ್ರಭು ಕೆಂಪೇಗೌಡರ 501ನೇ ಜಯಂತ್ಯುತ್ಸವ ಪ್ರಯುಕ್ತ ಶನಿವಾರದಿಂದ ಒಂದು ವಾರಗಳ ರಾಜ್ಯಮಟ್ಟದ ರಂಗವೈಭವೋತ್ಸವ. 

ಶನಿವಾರ ಬೆಳಿಗ್ಗೆ 9ಕ್ಕೆ ಭಜನೋತ್ಸವ, ಗೀತಗಾಯನ ಹಾಗೂ ನೃತ್ಯೋತ್ಸವ. ಸಂಜೆ 4.30ಕ್ಕೆ ಹಾಸನದ ಸೃಜನ ಮಹಿಳಾ ಕಲಾ ತಂಡದಿಂದ `ಹೋಳಿ ಹುಣ್ಣಿಮೆ~ ನಾಟಕ (ನಿರ್ದೇಶನ: ಚಂದ್ರಶೇಖರ್ ಪಡತೂರು). ಸಂಜೆ 5.30ಕ್ಕೆ ಉದ್ಘಾಟನೆ. ಸಂಜೆ 7ಕ್ಕೆ ಶನೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ `ರಾಜವಿಕ್ರಮ~ ನಾಟಕ. (ನಿರ್ದೇಶನ: ಹರೀಶ್ ಕುಮಾರ್.

ಭಾನುವಾರ ಬೆಳಿಗ್ಗೆ 9ಕ್ಕೆ ಗಾಯನ ಹಾಗೂ ನೃತ್ಯೋತ್ಸವ. ಸೋಮವಾರ 10ಕ್ಕೆ `ಆಂಜನೇಯ ಸ್ವಾಮಿ ನಾಟಕ ಮಂಡಳಿಯಿಂದ `ಧರ್ಮ ವಿಜಯ~ ನಾಟಕ (ನಿರ್ದೇಶನ: ಎ.ಬಸವರಾಜು). 12.30ಕ್ಕೆ ಹೊಸಬರು ರಂಗ ತಂಡದಿಂದ `ಕೋಮಲಗಾಂಧಾರ~ (ನಿರ್ದೇಶನ: ವಿ.ವಿ.ಅನಂತರಂಗಚಾರ್), 3ಕ್ಕೆ ಕೊರಟಗೆರೆ ತಾಲ್ಲೂಕಿನ ಕಲಾವಿದರಿಂದ `ರಾಮಾಂಜನೇಯ ಸಮಾಗಮ~ ನಾಟಕ (ನಿರ್ದೇಶನ: ಮೈಲಾರಿ), ಸಂಜೆ 5.30ಕ್ಕೆ ಕೂಟಗಲ್ ಜೈಭುವನೇಶ್ವರಿ ಕಲಾಬಳಗದಿಂದ `ಪ್ರಚಂಡ ರಾವಣ~ (ನಿರ್ದೇಶಕ: ಎಂ.ಎಸ್.ಗಂಗೂ). ಸಂಜೆ 7ಕ್ಕೆ ಬೆಂಗಳೂರಿನ ರಂಗ ಮಿತ್ರ ತಂಡದಿಂದ `ಕತ್ತಲೆ ಬೆಳಕು~ ನಾಟಕ. (ನಿರ್ದೇಶನ: ಗಿರೀಧರ್).
ಸ್ಥಳ: ರವೀಂದ್ರ ಕಲಾ ಕ್ಷೇತ್ರ ಮತ್ತು ಪುರಭವನ, ಜೆ.ಸಿ.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT