ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಥ್ಯ ವಹಿಸಲಿರುವ ಮನ್‌ಪ್ರೀತ್‌ ಸಿಂಗ್

ಹಾಕಿ: ಸುಲ್ತಾನ್‌ ಜೋಹರ್‌ ಕಪ್‌ಗೆ ಭಾರತ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮನ್‌ಪ್ರೀತ್‌ ಸಿಂಗ್‌ ಅವರು ಮುಂಬರುವ ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ಜೂನಿಯರ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಟೂರ್ನಿ ಮಲೇಷ್ಯಾದ ಜೋಹರ್‌ ಬಹ್ರುವಿನಲ್ಲಿ ಸೆಪ್ಟೆಂಬರ್‌ 22ರಿಂದ 29ರವರೆಗೆ ನಡೆಯಲಿದೆ. ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಒಟ್ಟು 18 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅಫಾನ್‌ ಯೂಸೆಫ್‌ ಅವರಿಗೆ ಉಪನಾಯಕ ಪಟ್ಟ ನೀಡಲಾಗಿದೆ.

ಕರ್ನಾಟಕದ ಎಸ್‌.ಕೆ.ಉತ್ತಪ್ಪ ಹಾಗೂ ಪಿ.ಎಲ್‌.ತಿಮ್ಮಯ್ಯ ಅವರು ಕಾಯ್ದಿರಿಸಿದ ಆಟಗಾರರು. ಮಲೇಷ್ಯಾಕ್ಕೆ ತೆರಳುವ ಮೊದಲು ಆಟಗಾರರು ಸೆ.7ರಿಂದ 17ರವರೆಗೆ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುಲ್ತಾನ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಭಾರತವಲ್ಲದೇ, ಅರ್ಜೇಂ­­­ಟಿನಾ, ಇಂಗ್ಲೆಂಡ್‌, ಕೊರಿಯಾ, ಮಲೇಷ್ಯಾ ಹಾಗೂ ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ.

ತಂಡ ಇಂತಿದೆ: ಗೋಲ್‌ ಕೀಪ­ರ್‌ಗಳು: ಹರ್‌ಜೋತ್‌ ಸಿಂಗ್‌, ಸುಶಾಂತ್‌ ಟರ್ಕಿ. ಡಿಫೆಂಡರ್ಸ್‌: ಅಮಿತ್‌ ರೋಹಿದಾಸ್‌, ಜಮನ್‌­ಪ್ರೀತ್‌ ಸಿಂಗ್‌, ಕೊಥಾಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಸುಖ್‌­ಮಂಜಿತ್‌ ಸಿಂಗ್‌, ಪ್ರದೀಪ್‌ ಮೋರ್‌. ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್‌ ಸಿಂಗ್‌ (ನಾಯಕ), ಪ್ರಭ್‌ದೀಪ್‌ ಸಿಂಗ್‌, ಹರ್ಜಿತ್‌ ಸಿಂಗ್‌, ಸತ್ಬಿರ್‌ ಸಿಂಗ್‌, ಇಮ್ರಾನ್‌ ಖಾನ್‌. ಫಾರ್ವರ್ಡ್‌ಸ್: ಮನ್‌ದೀಪ್‌ ಸಿಂಗ್‌, ಅಮೋನ್‌ ಮಿರಾಶ್‌ ಟರ್ಕಿ, ಮೊಹ­ಮ್ಮದ್‌ ಅಮಿರ್‌ ಖಾನ್‌, ತಲ್ವಿಂದರ್‌ ಸಿಂಗ್‌, ಅಫಾನ್‌ ಯೂಸೆಫ್‌ (ಉಪ ನಾಯಕ)

ಕಾಯ್ದಿ­­­ರಿ­­ಸಿದ ಆಟಗಾರರು: ಜಗದೀಪ್‌ ದಯಾಲ್‌ (ಗೋಲ್‌ ಕೀಪರ್‌), ದಿಪ್ಸನ್‌ ಟರ್ಕಿ (ಡಿಫೆಂಡರ್‌), ಗುರ್ಮೇಲ್‌ ಸಿಂಗ್‌ (ಡಿಫೆಂಡರ್‌), ಸ್ಟಾನ್ಲಿ ಮಿಂಜ್‌ (ಮಿಡ್‌ಫೀಲ್ಡರ್‌), ಲಲಿತ್‌ ಉಪಾಧ್ಯಾಯ (ಮಿಡ್‌­ಫೀಲ್ಡರ್‌), ಎಸ್‌.ಕೆ.ಉತ್ತಪ್ಪ (ಮಿಡ್‌ ಫೀಲ್ಡರ್‌), ಪಿ.ಎಲ್‌.ತಿಮ್ಮಯ್ಯ (ಫಾರ್ವರ್ಡ್), ರಮಣದೀಪ್‌ ಸಿಂಗ್‌ (ಫಾರ್ವರ್ಡ್‌) ಹಾಗೂ ಮಲಕ್‌ ಸಿಂಗ್‌ (ಫಾರ್ವರ್ಡ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT