ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ ಡಿವಿಷನ್‌ಗೆ 43 ತಂಡಗಳು

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ `ಸಿ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಮೊದಲ ಹಂತದಲ್ಲಿ ಅಗ್ರಸ್ಥಾನಕ್ಕಾಗಿ 43 ತಂಡಗಳು ಹೋರಾಟ ನಡೆಸಲಿವೆ. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುವ ಲೀಗ್ ಚಾಂಪಿಯನ್‌ಷಿಪ್ ಜೂನ್ 10 ರಂದು ಆರಂಭವಾಗಲಿದೆ.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಲಭಿಸಲಿದೆ. ಗ್ರಾಮಾಂತರ ಪ್ರದೇಶದ ತಂಡಗಳಾದ ಚಿತ್ರದುರ್ಗ ಹಾಕಿ ಕ್ಲಬ್, ಬೆಳಗಾವಿ ಜಿಲ್ಲಾ ಹಾಕಿ ಸಂಸ್ಥೆ, ಬೀದರ್ ಜಿಲ್ಲಾ ಹಾಕಿ ಸಂಸ್ಥೆ, ತುಮಕೂರಿನ ಧ್ಯಾನ್‌ಚಂದ್ ಹಾಕಿ ಕ್ಲಬ್, ಬಾಗಲಕೋಟೆ ನಗರ ಹಾಕಿ ಕ್ಲಬ್, ವಿಜಾಪುರ ಹಾಕಿ ಕ್ಲಬ್, ಹಾವೇರಿ ಸ್ಪೋರ್ಟ್ಸ್ ಕ್ಲಬ್, ಹಂಪಿನಗರ ಹಾಕಿ ಕ್ಲಬ್, ಕೆ.ಜಿ.ಎಫ್.ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್, ಬಳ್ಳಾರಿ ಹಾಕಿ ಕ್ಲಬ್, ಶಿವಮೊಗ್ಗದ ಸಹ್ಯಾದ್ರಿ ಹಾಕಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ತಂಡಗಳು ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

43 ತಂಡಗಳನ್ನು ಹನ್ನೆರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಎರಡನೇ ಹಂತದಲ್ಲಿ ಆಡುವ ಅವಕಾಶ ಪಡೆಯಲಿವೆ.

`ಎ~ ಗುಂಪು: ಚಿತ್ರದುರ್ಗ ಹಾಕಿ ಕ್ಲಬ್, ಎ.ಬಿ.ಎಚ್.ಎ., ರೀಗಲ್ ಹಾಕಿ ಕ್ಲಬ್, ಧ್ಯಾನಚಂದ್ ಹಾಕಿ ಕ್ಲಬ್ ಬೆಂಗಳೂರು; `ಬಿ~ ಗುಂಪು: ಬೆಳಗಾವಿ ಜಿಲ್ಲಾ ಹಾಕಿ ಸಂಸ್ಥೆ, ಬಾಷ್ ಸ್ಪೋರ್ಟ್ಸ್ ಕ್ಲಬ್, ನ್ಯೂ ಅಶೋಕ ಹಾಕಿ ಕ್ಲಬ್, ಐ.ಟಿ.ಸಿ. ಸ್ಪೋರ್ಟ್ಸ್ ಕ್ಲಬ್.; `ಸಿ~ ಗುಂಪು: ಬೀದರ್ ಹಾಕಿ ಸಂಸ್ಥೆ, ಬಿ.ಸಿ.ವೈ.ಎ., ಬೆಂಗಳೂರು ಫ್ರೆಂಡ್ಸ್ ಹಾಕಿ ಕ್ಲಬ್.; `ಡಿ~ ಗುಂಪು: ಧ್ಯಾನಚಂದ್ ಹಾಕಿ ಕ್ಲಬ್ ತುಮಕೂರು, ವಾರಿಯರ್ ಸ್ಪೋರ್ಟ್ಸ್ ಕ್ಲಬ್, ಸಿ.ಸಿ.ಸಿ. ಸಂಸ್ಥೆ.; `ಇ~ ಗುಂಪು:  ಬಾಗಲಕೋಟೆ ಸಿಟಿ ಸ್ಪೋರ್ಟ್ಸ್ ಕ್ಲಬ್, ಸ್ಪೋರ್ಟ್ಸ್ ಪ್ರಮೋಟಿಂಗ್ ಗ್ರೂಪ್, ಫಾಲ್ಕನ್ ಹಾಕಿ ಕ್ಲಬ್.; `ಎಫ್~ ಗುಂಪು: ವಿಜಾಪುರ ಹಾಕಿ ಕ್ಲಬ್, ಬ್ಲೂಸ್ಟಾರ್ ಹಾಕಿ ಕ್ಲಬ್, ಈಸ್ಟ್ ಇಂಡಿಯಾ ಹಾಕಿ ಕ್ಲಬ್, ಯು.ಎ.ಎಸ್.; `ಜಿ~ ಗುಂಪು: ಗುಲ್ಬರ್ಗ ಹಾಕಿ ಸಂಸ್ಥೆ, ಜರ್ಮನೈಟ್ ಹಾಕಿ ಅಕಾಡೆಮಿ, ಡೈನಾಮೈಟ್ಸ್ ಯುನೈಟೆಡ್, ಜೂಡ್ ಫೆಲಿಕ್ಸ್ ಹಾಕಿ ಅಕಾಡೆಮಿ.; `ಎಚ್~ ಗುಂಪು: ಹಾವೇರಿ ಸ್ಪೋರ್ಟ್ಸ್ ಕ್ಲಬ್, ರೇಂಜರ್ಸ್‌ ಹಾಕಿ ಕ್ಲಬ್, ಹಂಪಿನಗರ ಹಾಕಿ ಕ್ಲಬ್, ನಾಗನಾಥಪುರ ಬಾಷ್ ಸ್ಪೋರ್ಟ್ಸ್ ಕ್ಲಬ್.; `ಐ~ ಗುಂಪು: ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ಕೆ.ಜಿ.ಎಫ್., ವಿಜಯ ಹಾಕಿ ಕ್ಲಬ್, ಸ್ಟಾರ್ ಟ್ರ್ಯಾಕ್ ಹಾಕಿ ಕ್ಲಬ್, ದಕ್ಷಿಣ ಕನ್ನಡ ಸಂಸ್ಥೆ.; `ಜೆ~ ಗುಂಪು: ಬಳ್ಳಾರಿ ಹಾಕಿ ಕ್ಲಬ್, ರಾಯಲ್ ಹಾಕಿ ಕ್ಲಬ್, ಜಾಯ್ಸ ಹಾಕಿ ಕ್ಲಬ್, ಬಾಪೂಜಿ ಹಾಕಿ ಕ್ಲಬ್.; `ಕೆ~ ಗುಂಪು: ಶ್ರೀ ಕುಮಾರೇಶ್ವರ ಹಾಕಿ ಕ್ಲಬ್, ಕಾವೇರಿ ಸ್ಪೋರ್ಟ್ಸ್ ಕ್ಲಬ್, ಲಿಯೋ ಸ್ಪೋರ್ಟ್ಸ್ ಕ್ಲಬ್.; `ಎಲ್~ ಗುಂಪು: ಸಹ್ಯಾದ್ರಿ ಹಾಕಿ ಕ್ಲಬ್, ಮೆಟ್ರೋ ಹಾಕಿ ಕ್ಲಬ್, ರೈಸಿಂಗ್ ಸ್ಟಾರ್ ಹಾಕಿ ಕ್ಲಬ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT