ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕೋಪಾ ಯುಗಾದಿ ಮೇಳ

Last Updated 25 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಹಿಳೆಯರ ಏಳಿಗೆ ಮತ್ತು ಒಳಿತಿಗೋಸ್ಕರ ಹುಟ್ಟಿಕೊಂಡ ಸಂಸ್ಥೆಗಳಲ್ಲಿ ಒಂದಾದ ‘ಸಿಕೋಪಾ’ (ಸೆಂಟರ್ ಫಾರ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ಸ್ ಆಫ್ ಪ್ರೊಡ್ಯೂಸರ್ಸ್ ಅಂಡ್ ಆರ್ಟಿಸನ್ಸ್) ಸಹಕಾರಿ ತತ್ವ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುತ್ತಿದೆ.

ಅದು ಮಹಿಳಾ ಸಹಕಾರಿ ಸಂಸ್ಥೆಗಳು, ಮಹಿಳಾ ಸ್ವ ಉದ್ಯೋಗಿಗಳು, ಸ್ವಸಹಾಯ ಗುಂಪಿನವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ. ಅಲ್ಲದೆ ಮಹಿಳಾ ಕೈಗಾರಿಕಾ ಮತ್ತು ಕುಶಲಕರ್ಮಿಗಳ ವೃತ್ತಿ ನೈಪುಣ್ಯ ಹೆಚ್ಚಿಸಲು ಅಗತ್ಯ ತರಬೇತಿ ನೀಡುವ ಮೂಲಕ ಮಾರಾಟ ಸಾಮರ್ಥ್ಯವನ್ನು ಬೆಳೆಸುತ್ತಿದೆ. ಮಾರುಕಟ್ಟೆ ಕಲ್ಪಿಸುತ್ತ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ.

ಪ್ರತಿಯೊಬ್ಬ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಸಾಮಾಜಿಕವಾಗಿ ಉತ್ಪಾದನ ಘಟಕಗಳಾಗಿ ಕೆಲಸ ಮಾಡುವ ಸಾಮರ್ಥ್ಯ ಪಡೆದುಕೊಳ್ಳುವಂತೆ ಆಗಬೇಕು ಎಂಬುದೇ ಸಿಕೋಪಾದ ಗುರಿ. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಯುಗಾದಿ’ ಆಚರಣೆಗೆ ಪೂರ್ವಭಾವಿ ಯಾಗಿ ಮಹಿಳೆಯರು ತಯಾರಿಸಿದ ವೈವಿಧ್ಯಮಯ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ನಡೆಸುತ್ತಿದೆ.

ಹಬ್ಬಕ್ಕೆ ಬೇಕಾದ ಸೀರೆ, ಡ್ರೆಸ್ ಮೆಟೀರಿಯಲ್‌ಗಳು, ಅಲಂಕಾರಿಕ ಒಡವೆಗಳು, ಹಪ್ಪಳ ಸಂಡಿಗೆ ಮತ್ತಿತರ ಆಹಾರೋತ್ಪನ್ನಗಳು, ಚಿತ್ತಾಕರ್ಷಕ ಅಲಂಕರಣ ಸಾಮಗ್ರಿಗಳು, ಬ್ಯಾಗ್‌ಗಳು, ಕಲಾಕೃತಿಗಳು ಹೀಗೆ ಬಗೆಬಗೆಯ ವಸ್ತುಗಳನ್ನು ಇಲ್ಲಿ ನೇರವಾಗಿ ತಯಾರಕರಿಂದ ಕೊಳ್ಳಬಹುದು. ಇದರಿಂದ ಮಹಿಳಾ ಕುಶಲಕರ್ಮಿಗಳು, ಉದ್ಯಮಿ ಗಳನ್ನು ಪ್ರೋತ್ಸಾಹಿಸಿ ದಂತಾಗುತ್ತದೆ.

 ಸ್ಥಳ: ಸಹಕಾರಿ ಆಡಳಿತ ನಿರ್ವಹಣಾ  ಸಂಸ್ಥೆ (ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ), ಪದ್ಮನಾಭ ನಗರ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11 ರಿಂದ ರಾತ್ರಿ 8. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT