ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಗ್ರೂಪ್‌ನಿಂದ ವಿಕ್ರಂ ಪಂಡಿತ್ ನಿರ್ಗಮನ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಬೃಹತ್ ಬ್ಯಾಂಕಿಂಗ್ ಸಮೂಹ ಸಂಸ್ಥೆ `ಸಿಟಿಗ್ರೂಪ್~ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ವಿಕ್ರಂ ಪಂಡಿತ್ (55) ಮಂಗಳವಾರ ನಿರ್ಗಮಿಸಿದರು. ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

`ಸಿಟಿಗ್ರೂಪ್~ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ನಿವ್ವಳ ಲಾಭ ಗಳಿಕೆಯಲ್ಲಿ ಶೇ 88ರಷ್ಟು ಕುಸಿತ ಕಂಡಿತ್ತು. ಅಂದರೆ ಲಾಭದ ಪ್ರಮಾಣ 46.80 ಕೋಟಿ ಡಾಲರ್‌ನಷ್ಟು (ರೂ.2480 ಕೋಟಿ) ಅಲ್ಪ ಪ್ರಮಾಣಕ್ಕೆ ಕುಸಿದಿದೆ. ಫಲಿತಾಂಶ ಪ್ರಕಟಣೆ ಮರುದಿನವೇ ವಿಕ್ರಂ ನಿರ್ಗಮನವಾಗಿದೆ.

ಈ ಮಧ್ಯೆ ಸಿಟಿಗ್ರೂಪ್ ನಿರ್ದೇಶಕ ಮಂಡಳಿ ಸಭೆ ಸೇರಿ, ಮೈಕೇಲ್ ಕೊರ್ಬ್ಯಾಟ್ ಅವರನ್ನು `ಸಿಇಒ~ ಮತ್ತು ನಿರ್ದೇಶಕ ಹುದ್ದೆಗೆ ಅವಿರೋಧವಾಗಿ ಆಯ್ಕೆ ಮಾಡಿದೆ.

`ಕೆಲವು ವರ್ಷಗಳಿಂದ ಕಂಪೆನಿ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದೆ. ನಿರ್ಗಮನಕ್ಕೆ ಇದು ಸಕಾಲ. ನನ್ನಿಂದ ತೆರವಾಗುತ್ತಿರುವ ಹುದ್ದೆಗೆ ಕೊರ್ಬ್ಯಾಟ್ ಉತ್ತಮ ಆಯ್ಕೆ~ ಎಂದು ವಿಕ್ರಂ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT