ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆ ಪ್ರಸ್ತಾವ

ಆರ್‌ಸಿಯುಡಿಎ ಹಗರಣ * ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ
Last Updated 24 ಸೆಪ್ಟೆಂಬರ್ 2013, 10:00 IST
ಅಕ್ಷರ ಗಾತ್ರ

ರಾಮನಗರ:  ರಾಮನಗರ–ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ (ಆರ್‌ಸಿಯುಡಿಎ) 16.90 ಕೋಟಿ ರೂಪಾಯಿ ಅವ್ಯವಹಾರದ ಹಗರಣ ವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಗರಾಭಿವೃದ್ಧಿ ಇಲಾಖೆಯಿಂದ ಗೃಹ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್‌ ಕುಮಾರ್‌ ಸೊರಕೆ ತಿಳಿಸಿದರು.

ಆರ್‌ಸಿಯುಡಿಎ ಕಚೇರಿಗೆ ಸೋಮ ವಾರ ಭೇಟಿ ನೀಡಿದ ಅವರು, ಅಧಿಕಾರಿ ಗಳ ಜತೆ ಸಮಾಲೋಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿಬಿಐ ತನಿಖೆ ನಡೆಸುವ ಕುರಿತು ಈಗಾಗಲೇ ನಾನು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದೇನೆ. ಅದಕ್ಕೆ ಬದ್ಧನಾಗಿ ಗೃಹ ಇಲಾಖೆಗೂ ಪತ್ರ ಬರೆದಿದ್ದೇನೆ. ಅವ್ಯವಹಾರ ಮತ್ತು ಹಗರಣದಲ್ಲಿ ಭಾಗಿ ಆಗಿರುವವರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗೂ ವಂಚನೆಯಾಗಿರುವ ಹಣ ಮರು ಪಾವತಿ ಆಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಂದಾಗಿ ರುವುದಾಗಿ ಅವರು ಪ್ರತಿಕ್ರಿಯಿಸಿದರು.

ಬ್ಯಾಂಕಿಂಗ್‌ ವಲಯದಲ್ಲಿ ಎರಡು ಕೋಟಿ ರೂಪಾಯಿಗೂ ಮಿಗಿಲಾಗಿ ವಂಚನೆ ಅಥವಾ ಅವ್ಯವಹಾರ ನಡೆ  ದಿದ್ದರೆ ಅದು ಸಿಬಿಐ ತನಿಖೆ ವ್ಯಾಪ್ತಿಗೆ ಬರುತ್ತದೆ. ಅದಕ್ಕೆ ರಾಜ್ಯ ಸರ್ಕಾರ ತನಿಖೆ ಕೈಗೊಳ್ಳುವಂತೆ ಸಿಬಿಐಗೆ ಪ್ರಸ್ತಾವನೆ ಕಳುಹಿಸಬೇಕಿದ್ದು, ಆ ಪ್ರಕ್ರಿಯೆ ಶೀಘ್ರ ದಲ್ಲಿಯೇ ನಡೆಯಲಿದೆ ಎಂದು ಅವರು ಹೇಳಿದರು.

ಸಿಬಿಐ ತನಿಖೆ ತೀವ್ರಗತಿಯಲ್ಲಿ ಸಾಗ ಬೇಕು. ಇಂತಹ ವಂಚನೆ ಪ್ರಕರಣಗಳು ಬೇರೆ ಎಲ್ಲೂ ನಡೆಯಬಾರದು. ಅದು ನಡೆದರೆ ಎಂತಹ ಕಠಿಣ ಶಿಕ್ಷೆ ದೊರೆ ಯುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಈ ತನಿಖೆ ಮಹತ್ವ ದ್ದಾಗಿದೆ. ಆರ್‌ಸಿಯುಡಿಎ ಹಗರಣದಲ್ಲಿ ಪ್ರಾಧಿಕಾರದ ಆಯುಕ್ತ ಮತ್ತು ಬ್ಯಾಂಕಿನ ಸಿಬ್ಬಂದಿ ಶಾಮೀಲಾಗಿ ಅವ್ಯವಹಾರ ನಡೆಸಿದ್ದಾರೆ. ಪ್ರಾಧಿಕಾರದ ಹಣ ವಿದೇಶದಲ್ಲಿ ಹೂಡಿಕೆಯಾಗಿದೆ ಎಂಬ ಮಾಹಿತಿ ಇಲ್ಲಿಯವರೆಗಿನ ತನಿಖೆಯಿಂದ ಗೊತ್ತಾಗಿದೆ. ಆ ಹಣವನ್ನು ವಾಪಸು ಪಡೆಯಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ನೆರವು ಬೇಕಿದ್ದು, ಸಿಬಿಐ ತನಿಖೆ ನಡೆದರೆ ಇದು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

ಆರ್‌ಸಿಯುಡಿಎ ಮತ್ತು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಗಿರುವ ಈ ಹಗರಣ ರಾಜ್ಯದ ಇತರ ಯಾವ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲೂ ಆಗಿಲ್ಲ. ಈ ಎರಡು ಪ್ರಾಧಿಕಾರ ಗಳ ಹಗರಣ ಹೊರ ಬಂದ ಕೂಡಲೇ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಇತರ ಪ್ರಾಧಿಕಾರಗಳಲ್ಲೂ ಪರಿಶೀಲನೆ ನಡೆಸಲಾಯಿತು. ಆದರೆ ಅಲ್ಲೆಲ್ಲೂ ಇಂತಹ ಹಗರಣ ಕಂಡು ಬಂದಿಲ್ಲ ಎಂದು ಅವರು ಉತ್ತರಿಸಿದರು.

ಹಗರಣಕ್ಕೆ ಸಂಬಂಧಿ ಸಿದಂತೆ ಇಲ್ಲಿ ಯವರೆಗೆ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿಲ್ಲ.  ತನಿಖೆ ಯಾವ ಹಂತದಲ್ಲಿ ಪ್ರಗತಿ ಯಲ್ಲಿದೆ ಎಂಬುದನ್ನು ಪೊಲೀಸ ರಿಂದ ಮಾಹಿತಿ ಪಡೆದು ವರದಿ ನೀಡು ವಂತೆ ಜಿಲ್ಲಾಧಿ ಕಾರಿಗೆ ಸೂಚಿಸಿ ರುವೆ. ಈ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಯಾರಿಗೂ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡು ತ್ತಿಲ್ಲ. ತನಿಖೆ ತೀವ್ರಗತಿಯಲ್ಲಿ ಸಾಗಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು, ಎಂಬುದೇ ಸರ್ಕಾರದ ಆಶಯವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT