ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೇರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

Last Updated 16 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಕುರುಗೋಡು: ಗ್ರಾಮೀಣ ಜನರಿಗೆ ಸಾಹಿತ್ಯದ ಅರಿವು ಮೂಡಿಸಲು ಪರಿಷತ್ ಬದ್ದವಾಗಬೇಕಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಸಿರಿಗೇರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ ತೀರ್ಮಾನಿಸಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರ‌್ರಿಸ್ವಾಮಿ ತಿಳಿಸಿದರು.

ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಜನರ ಬದುಕಿನೊಂದಿಗೆ ಬೆರೆತರೆ ಮಾತ್ರ ಅದು ಜನರ ಸಾಹಿತ್ಯ ವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಸಾಹಿತ್ಯದ ಚಟುವಟಿಕೆ ನಗರಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶಗಳ ಜನರಲ್ಲಿ ಸಾಹಿ ತ್ಯಾಸಕ್ತಿ ಮೂಡಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸಾಹಿತಿ ಸಂಪಿಗೆ ನಾಗರಾಜ್, ಗ್ರಾಮೀಣ ಭಾಗದ ಜನರಲ್ಲಿಯೇ ನಿಜವಾದ ಸಾಹಿತ್ಯದ ಸೊಗಡು ಕಾಣಲು ಸಾಧ್ಯ. ಆದ್ದರಿಂದ ಕನ್ನಡ ತೇರನ್ನು ಸಿರಿಗೇರಿ ಗ್ರಾಮದಲ್ಲಿ ಎಳೆಯಲು ಪರಿಷತ್ ಮುಂದಾಗಿದೆ ಎಂದರು.
ಕಸಾಪ ಜಿಲ್ಲಾ ಘಟಕದ ಸಂಘ ಸಂಸ್ಥೆಗಳ ಪ್ರತಿನಿಧಿ ಎಸ್‌ಎಂ. ನಾಗರಾಜ ಸ್ವಾಮಿ, ಸಮ್ಮೇಳದ ರೂಪುರೇಷೆ ವಿವರಿಸಿದರು.

ಕಸಾಪ ಗಡಿನಾಡು ಅಧ್ಯಕ್ಷ ಸಿ.ಎಂ. ಚೆನ್ನಯ್ಯ, ಪರಿಷತ್, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾದಾಮಿ ಶಿವಲಿಂಗ, ಸಿದ್ಧರಾಮ ಕಲ್ಮಠ, ಮಾತನಾಡಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಅಮರೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಾದ್ಯಕ್ಷ  ಎಸ್.ಎಂ. ಅಡಿವೆಯ್ಯ ಸ್ವಾಮಿ, ತಾ.ಪಂ. ಮಾಜಿ ಸದಸ್ಯ ಬಕಾಟಿ ಈರಯ್ಯ, ಗ್ರಾಮದ ಮುಖಂಡರಾದ ಉಪ್ಪಾರ ತಿಮ್ಮಪ್ಪ, ರಾಮಚಂದ್ರಪ್ಪ, ಬಿ.ಸೋಮಶೇಖರಪ್ಪ, ಚೈತನ್ಯ ಸಮೂಹ ಸಂಘದ ಉಪಾಧ್ಯಕ್ಷ ಶಿವರಾಮ,          ಕೃಷಿ  ಕೂಲಿಕಾರ್ಮಿಕ ಸಂಘದ ಎನ್. ಕುಮಾರ್, ಯುವ ಜಾಗೃತಿ ವೇದಿಕೆ ಅಧ್ಯಕ್ಷ ಜಲಾಲಿ ಬಾಷಾ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಗುರುಸಿದ್ದಪ್ಪ, ಕರವೇ. ಅಧ್ಯಕ್ಷ ಮಲ್ಲಿಕಾರ್ಜುನ, ಲಕ್ಷ್ಮಣ, ಜಹಾಂಗೀರ್ ಬಾಷಾ. ಉದಯ ಕ್ರೀಡಾ ಸಂಘದ ಅಧ್ಯಕ್ಷ ಉಮೇಶ ಉಪಸ್ಥಿತರಿದ್ದರು.  

ಕವಿ ಮಂಜಣ್ಣ ನಿರೂಪಿಸಿದರು. ವಿ.ನಾಗರಾಜ್ ಸ್ವಾಗತಿಸಿದರು. ಶಿಕ್ಷಕ ಎಸ್‌ಎನ್. ಪಂಪಾಪತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT