ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀನಿಯರ್ ಮಹಿಳಾ ಹಾಕಿ : ಸೆಮಿಫೈನಲ್‌ಗೆ ಮುಂಬೈ, ಹರಿಯಾಣ

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈ ಹಾಗೂ ಹರಿಯಾಣ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆ ಆಶ್ರಯದ 56ನೇ ಐಎಚ್‌ಎಫ್ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದ್ದಾರೆ.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ 2-1 ಗೋಲುಗಳಿಂದ ಮಧ್ಯ ಪ್ರದೇಶ ತಂಡವನ್ನು ಮಣಿಸಿತು.

ಎಲ್ಲಾ ಗೋಲುಗಳು ವಿರಾಮಕ್ಕೆ ಮುನ್ನವೇ ಬಂದಿದ್ದವು. ಗೋಲಿನ ಖಾತೆ ತೆರೆದಿದ್ದು ಮಧ್ಯ ಪ್ರದೇಶ. ಈ ತಂಡದ ಆಟಗಾರ್ತಿ ಗಂಗಿ ಮುಂಡು 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಸರಿತಾ ಹನುಮಾನ್ ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ ತಂಡದವರು 5-4 ಗೋಲುಗಳಿಂದ ಮಧ್ಯಪ್ರದೇಶ ಅಕಾಡೆಮಿ ತಂಡವನ್ನು ಸೋಲಿಸಿದರು.

ಬುಧವಾರದ ಸೆಮಿಫೈನಲ್ ಪಂದ್ಯಗಳು: ಕರ್ನಾಟಕ-ಮುಂಬೈ (ಬೆಳಿಗ್ಗೆ 8.30ಕ್ಕೆ), ಭೋಪಾಲ್-ಹರಿಯಾಣ  (ಬೆಳಿಗ್ಗೆ 10.30ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT