ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್ ಸೇನೆಯಿಂದ ಗುಂಡು: 4 ಸಾವು ವಿಶ್ವಸಂಸ್ಥೆ ಹೆಲಿಕಾಪ್ಟರ್ ಪತನ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್):  ದಕ್ಷಿಣ ಸುಡಾನ್ ಸೇನೆಯು ಶಾಂತಿ ಪಾಲನಾ ಕಾರ್ಯಕ್ಕಾಗಿ ವಿಶ್ವಸಂಸ್ಥೆ ನಿಯೋಜಿಸಿದ್ದ ರಷ್ಯಾದ ಹೆಲಿಕಾಪ್ಟರ್‌ವೊಂದನ್ನು ಗುಂಡಿಕ್ಕಿ ಹೊಡೆದುರುಳಿಸಿದ ಪರಿಣಾಮ ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಎಂಐ-8 ಹೆಸರಿನ ಈ ಹೆಲಿಕಾಪ್ಟರ್ ದಕ್ಷಿಣ ಸುಡಾನ್‌ನ ಪೂರ್ವ ಜಂಗ್ಲಿ ರಾಜ್ಯದಲ್ಲಿ ಶಾಂತಿ ಪಾಲನಾ ಕಾರ್ಯದಲ್ಲಿ ತೊಡಗಿತ್ತು. 
`ಪೂರ್ವ ಜಂಗ್ಲಿಯ ಲಿಕ್ವಾಂಗೋಲ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಈ ಘಟನೆ ನಡೆದಿದೆ' ಎಂದು ದಕ್ಷಿಣ ಸುಡಾನ್ ಸೇನೆ ಒಪ್ಪಿಕೊಂಡಿದ್ದಾಗಿ ವಿಶ್ವಸಂಸ್ಥೆಯ ಉಪ ವಕ್ತಾರ ಡೆಲ್ ಬೇ ಹೇಳಿದ್ದಾರೆ.

`ಶತ್ರು ಪಡೆಗೆ ಸೇರಿದ ಹೆಲಿಕಾಪ್ಟರ್ ಎಂದು ತಪ್ಪಾಗಿ ಭಾವಿಸಿ ಅದನ್ನು ಹೊಡೆದುರುಳಿಸಲಾಗಿದೆ' ಎಂದು ದಕ್ಷಿಣ ಸುಡಾನ್ ಸೇನಾ ವಕ್ತಾರರು ತಿಳಿಸಿದ್ದಾರೆ.
`ಈ ಘಟನೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ' ಎಂದು ದಕ್ಷಿಣ ಸುಡಾನ್‌ನ ಮಾಹಿತಿ ಸಚಿವರು ಹೇಳಿದ್ದಾರೆ.

ವಿಶ್ವಸಂಸ್ಥೆ ಖಂಡನೆ: ಈ ಕೃತ್ಯವನ್ನು ಖಂಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಶೀಘ್ರವೇ ವಿಸ್ತೃತ ತನಿಖೆ ನಡೆಸುವಂತೆ ಸುಡಾನ್ ಸರ್ಕಾರವನ್ನು ಆಗ್ರಹಿಸಿದೆ. `ಹೆಲಿಕಾಪ್ಟರ್ ಹೊಡೆದುರುಳಿಸಿದವರನ್ನು ಶಿಕ್ಷೆಗೊಳಪಡಿಸಬೇಕು' ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಒತ್ತಾಯಿಸಿದ್ದಾರೆ.ಮೃತರ ಕುಟುಂಬಗಳಿಗೆ ಭದ್ರತಾ ಮಂಡಳಿ ಸದಸ್ಯರು ಸಾಂತ್ವನ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT