ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧದಲ್ಲಿ ಸಮಿತಿಗಳ ಸಭೆ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ವಿವಿಧ ಸಮಿತಿಗಳ ಸಭೆ ತಿಂಗಳಿ­ಗೊಮ್ಮೆ ಬೆಳಗಾವಿಯ ಸುವರ್ಣ­ಸೌಧದಲ್ಲಿ ನಡೆಯಲಿದೆ. ಈ ಕುರಿತು ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಈಗಾಗಲೇ ಸುವರ್ಣಸೌಧ ನಿರ್ಮಿಸ­­ಲಾಗಿದೆ.  ಅಲ್ಲಿ ಅಧಿವೇಶನ ನಡೆಸುವುದರಿಂದ ಆಗುವ ಖರ್ಚು – ವೆಚ್ಚದ ಬಗ್ಗೆ ಈಗ ಮಾತನಾಡುವುದ­ರಿಂದ ಪ್ರಯೋಜನವಿಲ್ಲ. ಆ ಕಟ್ಟಡ­ವನ್ನು ಯಾವ ರೀತಿ ಸದುಪಯೋಗ­ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಬೇಕು ಅಷ್ಟೆ. ಒಂದೆರಡು ಇಲಾಖೆ­ಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಒಪ್ಪಿದ್ದಾರೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. 40 ದಿನ ಬೆಂಗ­ಳೂರಿ­ನಲ್ಲಿ ಹಾಗೂ 20 ದಿನ ಬೆಳ­ಗಾವಿ­ಯಲ್ಲಿ ಕಲಾಪ ನಡೆಸುವುದು ಸೂಕ್ತ ಎಂದು ಸಲಹೆ ಮಾಡ­ಲಾಗಿದೆ. ವರ್ಷಕ್ಕೆ ಎರಡು ಬಾರಿ ಬೆಳಗಾವಿ­ಯಲ್ಲಿ ಅಧಿವೇಶನ ನಡೆ­ಸಲು ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದರು.
ಐದು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಾಸಕರಿಗೆ, ಶಾಸಕರ ದಿನಾಚರಣೆ ಸಂದರ್ಭದಲ್ಲಿ ‘ಉತ್ತಮ ಸಂಸ­ದೀಯ ಪಟು’ ಪ್ರಶಸ್ತಿ ನೀಡಬೇಕು ಎಂಬ ಚಿಂತನೆ ಇದೆ ಎಂದರು.

ತಮ್ಮನ್ನು ಕಾಗದದ ಹುಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.­ಈಶ್ವರಪ್ಪ ಮಾಡಿರುವ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ‘ಉತ್ತರ ನೀಡುವುದು ನನಗೂ ಗೊತ್ತು. ಆದರೆ, ಸ್ಪೀಕರ್‌ ಸ್ಥಾನದಲ್ಲಿ ಇರುವುದರಿಂದ ಮಾತ­ನಾಡುವುದು ಸರಿಯಲ್ಲ. ಅವರಿಂದ ಕಲಿಯುವುದು ಏನೂ ಇಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT