ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾಗೆ ಆಮಂತ್ರಣ ನೀಡಿದ ವರುಣ್

Last Updated 16 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಬಿಜೆಪಿ ಸಂಸದ ವರುಣ್ ಗಾಂಧಿ ಬುಧವಾರ ಯುಪಿಎ ಅಧ್ಯಕ್ಷೆಯೂ ಆಗಿರುವ ತಮ್ಮ ದೊಡ್ಡಮ್ಮ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿಯೇ ಬುಧವಾರ ಭೇಟಿ ಮಾಡಿ ತನ್ನ ವಿವಾಹದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಿದರು.

ಬಿಜೆಪಿ ಸಂಸದೆ ಮೇನಕಾ ಗಾಂಧಿ ಪುತ್ರ ವರುಣ್ (30) ವಿವಾಹ ಮುಂದಿನ ತಿಂಗಳು ನಿಗದಿಯಾಗಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸೋನಿಯಾ ನಿವಾಸದಲ್ಲಿ ಕಳೆದ ವರುಣ್ ಅಲ್ಲಿಯೇ ಮಧ್ಯಾಹ್ನದ ಭೋಜನ ಸವಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಾರ್ಚ್ 6ರಂದು  ಗ್ರಾಫಿಕ್ ವಿನ್ಯಾಸಗಾರ್ತಿ ಪಶ್ಚಿಮ ಬಂಗಾಳದ ಯಾಮಿನಿ ರಾಯ್ ಅವರನ್ನು ವಿವಾಹ ಆಗಲಿದ್ದಾರೆ. ವಿವಾಹದ ಆರತಕ್ಷತೆ ದೆಹಲಿ ಮತ್ತು ವರುಣ್ ಪ್ರತಿನಿಧಿಸುವ ಪಿಲಿಬಿಟ್‌ನಲ್ಲಿಯೂ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT