ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 2-9-1963

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೊಕಾರೊ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ನೆರವೀಯಲು ಸಿದ್ಧ
ನವದೆಹಲಿ, ಸೆ. 1- ಭಾರತದ ತ್ವರಿತ ಗತಿಯ ಆರ್ಥಿಕ ಪ್ರಗತಿಗೆ ಅತಿ ಮುಖ್ಯವೆನಿಸಿರುವ ಬೊಕಾರೊ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಸಹಾಯ ಮಾಡಲು ತಾನು ಸಿದ್ಧವೆಂದು ರಷ್ಯ ಖಾಸಗಿಯಾಗಿ ತಿಳಿಸಿರುವುದಾಗಿ ಗೊತ್ತಾಗಿದೆ.

ಈ ಯೋಜನೆಗೆ ಅಮೆರಿಕ ನೆರವು ನೀಡುವ ಸಂಭವ ತೀರಾ ಕಡಿಮೆಯೆಂದು ವಾಷಿಂಗ್ಟನ್ನಿನಿಂದ ಬಂದ ಇತ್ತೀಚಿನ ವರದಿಗಳಿಂದ ಸ್ಪಷ್ಟಪಟ್ಟನಂತರ ರಷ್ಯದಿಂದ ಈ ಹೊಸ ಸೂಚನೆಗಳು ಬಂದಿವೆ.

ರಹಸ್ಯ ಒಪ್ಪಂದದ ವಿವರಗಳನ್ನು ರಷ್ಯ ನೀಡಿತೆಂದು ಚೀಣ ಆರೋಪ
ಪೀಕಿಂಗ್, ಸೆ. 1- ಅಣ್ವಸ್ತ್ರಗಳ ವಿಷಯದಲ್ಲಿ ರಷ್ಯ ಮತ್ತು ಚೀಣಗಳ ನಡುವೆ ಆಗಿದ್ದ ರಹಸ್ಯ ಒಪ್ಪಂದವೊಂದರ ಇರವನ್ನು ಚೀಣವು ಬಯಲು ಮಾಡುವುದಕ್ಕೆ ಬಹು ಹಿಂದೆಯೇ ರಷ್ಯವು ಅದರ ವಿವರಗಳನ್ನು ಅಮೆರಿಕಕ್ಕೆ ನೀಡಿತೆಂದು ಚೀಣವು ಇಂದು ಆಪಾದಿಸಿತು.

ಕಮ್ಯುನಿಸ್ಟ್ ರಾಷ್ಟ್ರಗಳ ರಕ್ಷಣೆಗಳನ್ನು ಕುರಿತ ರಹಸ್ಯ ದಾಖಲೆಗಳನ್ನು ಚೀಣವು ಪ್ರಕಟಿಸಿತೆಂದು ಆಪಾದಿಸಿ ರಷ್ಯವು ಆಗಸ್ಟ್ 21 ರಂದು ನೀಡಿದ ಹೇಳಿಕೆಗೆ ಕೋಪದಿಂದ ಚೀಣಿ ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ. ಆಪಾದನೆಯನ್ನು ಮಾಡಿದರೆಂದು ನವಚೀಣ ವಾರ್ತಾ ಸಂಸ್ಥೆ ತಿಳಿಸಿದೆ.

ರಷ್ಯವು ಎಚ್ಚರಗೇಡಿತನದಿಂದ ಕ್ಯೂಬಕ್ಕೆ ರಾಕೆಟ್‌ಗಳನ್ನು ಒದಗಿಸಿ ದುಸ್ಸಾಹಸವನ್ನು ನಡೆಸಿತೆಂದೂ ಅವುಗಳನ್ನು ವಾಪಸು ಪಡೆದು ಶರಣಾಗತವಾಯಿತೆಂದೂ ಆ ವಕ್ತಾರರು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT