ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್: ದೀಪಿಕಾ ಪಳ್ಳಿಕಲ್ ರನ್ನರ್ ಅಪ್

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೃತ್ತಿ ಜೀವನದ ಆರನೇ ಡಬ್ಲ್ಯುಐಎಸ್‌ಪಿಎ ಸ್ಕ್ವಾಷ್ ಪ್ರಶಸ್ತಿ ಗೆಲ್ಲಬೇಕೆಂಬ ಭಾರತದ ದೀಪಿಕಾ ಪಳ್ಳಿಕಲ್ ಕನಸ ಭಗ್ನಗೊಂಡಿತು. ನ್ಯೂಯಾರ್ಕ್‌ನಲ್ಲಿ ನಡೆದ `ಟೂರ್ನಮೆಂಟ್ ಆಫ್ ಚಾಂಪಿಯನ್ಸ್~ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿದ ಅವರು `ರನ್ನರ್ ಅಪ್~ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಭಾರತದ ಯುವ ಸ್ಪರ್ಧಿಯನ್ನು 11-4, 11-3, 11-3 ರಲ್ಲಿ ಮಣಿಸಿದ ಹಾಲೆಂಡ್‌ನ ನತಾಲಿ ಗ್ರಿನ್ಹಾಮ್ ಚಾಂಪಿಯನ್ ಆದರು. ಏಳನೇ ಶ್ರೇಯಾಂಕದ ಪಡೆದಿದ್ದ ದೀಪಿಕಾ ಇಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದರು.

ಆದರೆ ಫೈನಲ್‌ನಲ್ಲಿ ಅನುಭವಿ ನತಾಲಿ ಅವರಿಗೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಅಲ್ಪ ಮಟ್ಟಿಗೆ ಪ್ರತಿರೋಧ ತೋರಿದ್ದು ಭಾರತದ ಆಟಗಾರ್ತಿಯ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT