ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಶಪರದೆ ಸೌಲಭ್ಯದ `ಇ ಟಚ್-ಪೆನ್'

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮೈಕ್ರೊಸಾಫ್ಟ್ ವಿಂಡೋಸ್-7 ನಿರ್ವಹಣಾ ವ್ಯವಸ್ಥೆಯ ಲ್ಯಾಪ್‌ಟಾಪ್, ನೋಟ್‌ಬುಕ್‌ಗಳನ್ನು `ಟಚ್‌ಸ್ಕ್ರೀನ್'(ಸ್ಪರ್ಶಪರದೆ) ದರ್ಜೆಗೇರಿಸುವ `ಇ ಟಚ್-ಪೆನ್' ಸಾಧನವನ್ನು ಬೆಂಗಳೂರಿನ `ಹೈಟೆಕ್ ಸಲ್ಯೂಷನ್ಸ್' ಕಂಪೆನಿ  ಅಭಿವೃದ್ಧಿಪಡಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನೂತನ ಸಾಧನ ಪರಿಚಯಿಸಿದ ಕಂಪೆನಿ `ಸಿಇಒ' ಸಿಲ್ವಸ್ಟರ್ ಪಿ.ಮೂರ್ತಿ, ವಿಶ್ವದಾದ್ಯಂತ `ವಿಂಡೋಸ್-7' ಬಳಸುವ 65 ಕೋಟಿ ಮಂದಿ ವಿಂಡೋಸ್-8ಕ್ಕೆ ಬದಲಿಸಿಕೊಳ್ಳಲು ಕಾಯುತ್ತಿದ್ದಾರೆ. ಆರು ಕೋಟಿ ಮಂದಿ ಆಗಲೇ ವಿಂಡೋಸ್-8ಕ್ಕೆ ಬದಲಾಗಿದ್ದಾರೆ. ವಿಂಡೋಸ್-8ರಲ್ಲಿನ `ಸ್ಪರ್ಶಪರದೆ' ರೀತಿ ಸೌಲಭ್ಯವನ್ನೇ `ಇ ಟಚ್-ಪೆನ್' ನೀಡಲಿದೆ ಎಂದರು.

ಹೆಚ್ಚು ಬರವಣಿಗೆ ವೃತ್ತಿಯವರಿಗೆ ನೆರವಾಗುವಂತಹ ಕೈಬರಹ ಗ್ರಹಿಕೆ ತಂತ್ರಾಂಶ, ವರ್ಣ ಚಿತ್ರರಚನೆ ಸೌಲಭ್ಯ `ಇ ಟಚ್-ಪೆನ್'ನಲ್ಲಿವೆ. ಬೆಲೆ ರೂ.3999. ಒಂದು ವರ್ಷದಲ್ಲಿ ಭಾರತದಲ್ಲಿ 50 ಸಾವಿರ ಸೇರಿದಂತೆ ಒಟ್ಟು 4 ಲಕ್ಷ ಇ ಟಚ್-ಪೆನ್ ಮಾರುವ ಗುರಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT