ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್: ನೋಕಿಯ ಪ್ಯೂರ್‌ವ್ಯೆ 808

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಇದು ಮೊಬೈಲ್ ಫೋನ್‌ಗಳ ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಯುಗ ಎನ್ನಬಹುದೇ?
`ಅನುಮಾನವೇ ಬೇಡ~ ಎನ್ನುತ್ತವೆ ವಾರಕ್ಕೊಂದು ಹೊಸ ಬಗೆಯಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುವ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿಗಳು.

ಕಳೆದ ತಿಂಗಳು ಎಚ್‌ಟಿಸಿ ಕಂಪೆನಿ `ಎಚ್‌ಟಿಸಿ ಒನ್~ ಎಂಬ ಸ್ಮಾರ್ಟ್‌ಫೋನ್(ರೂ 42999) ಬಿಡುಗಡೆ ಮಾಡಿತ್ತು. ಎರಡನೇ ವಾರದಲ್ಲಿ ಸೋನಿ ಎರಿಕ್‌ಸನ್ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿತ್ತು.

ಮೇ ಮಾಸಾಂತ್ಯದಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪೆನಿ ಅತಿವಿಶಿಷ್ಟ ಶೈಲಿಯ, ಮೊಬೈಲ್ ತನ್ನ ಮಾಲೀಕನ ಮುಖದ ಭಾವನೆಗಳಿಗೆ, ಧ್ವನಿಗೆ ಸ್ಪಂದಿಸುವಂತಹ `ಗ್ಯಾಲಕ್ಸಿ-ಎಸ್3~ ಸ್ಮಾರ್ಟ್‌ಫೋನ್(ರೂ43180) ಬಿಡುಗಡೆ ಮಾಡಿತ್ತು.

ಇಷ್ಟೆಲ್ಲ ಆಗುವಾಗ ತಾನು ಸುಮ್ಮನೇ ಇರುವುದು ಸರಿಯಲ್ಲ ಎನ್ನುವಂತೆ ಫಿನ್‌ಲೆಂಡ್ ಮೂಲದ `ನೋಕಿಯ~ ಕಂಪೆನಿ ತಮಿಳುನಾಡಿನಲ್ಲಿ ಜೂನ್ ಮೊದಲ ವಾರ ಸುದ್ದಿಗೋಷ್ಠಿ ನಡೆಸಿ `ಸದ್ಯದಲ್ಲಿಯೇ ವಿಶೇಷ ಅಂಶವುಳ್ಳ ಹೊಸ ಸ್ಮಾರ್ಟ್‌ಫೋನ್~ ಹೊರತರಲಿರುವುದಾಗಿ ಘೋಷಿಸಿತ್ತು. ಅದಕ್ಕೆ ತಕ್ಕಂತೆ ಜೂನ್ 13ರಂದು ನವದೆಹಲಿಯಲ್ಲಿ `ಪ್ಯೂರ್ ವ್ಯೆ 808~ ಎಂಬ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ(ರೂ 33,899).

ನೋಕಿಯ `ಪ್ಯೂರ್‌ವ್ಯೆ 808~ ವಿಶೇಷವೇನೆಂದರೆ ಅದರಲ್ಲಿನ 41 ಮೆಗಾಪಿಕ್ಸೆಲ್ ಸೆನ್ಸರ್ ಕ್ಯಾಮೆರಾ!ಇದಕ್ಕೂ ಮುನ್ನ ನೋಕಿಯದಿಂದ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಮೊಬೈಲ್ ಹ್ಯಾಂಡ್‌ಸೆಟ್ ಎನ್8 ಸರಣಿಯಲ್ಲಿ ಮಾರುಕಟ್ಟೆಗೆ ಬಂದಿತ್ತು.

`ನೋಕಿಯ ಮೊಬೈಲ್ ಹ್ಯಾಂಡ್‌ಸೆಟ್‌ಗಳೆಂದರೆ ಅದರ ಕ್ಯಾಮೆರಾ ಮತ್ತು ಅದರಲ್ಲಿ ಪ್ರದರ್ಶಿತವಾಗುವ ಫೋಟೊಗಳಿಂದಲೇ ಹೆಸರಾಗಿದೆ~ ಎನ್ನುವ ನೋಕಿಯ ಇಂಡಿಯ ನಿರ್ದೇಶಕ ವಿಪುಲ್ ಮೆಹ್ರೋತ್ರ, `ಈ ಹೊಸ ಸ್ಮಾರ್ಟ್‌ಫೋನ್ ಪ್ಯೂರ್‌ವ್ಯೆ 808 ಮಾದರಿಯಂತೂ ವಿಶಿಷ್ಟ ಶಕ್ತಿಯ ಕ್ಯಾಮೆರಾದಿಂದಲೇ ಗುರುತಿಸಿಕೊಳ್ಳಲಿದೆ.

ಸದ್ಯ ಭಾರತದಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ 5 ಮೆಗಾಪಿಕ್ಸೆಲ್‌ನಿಂದ ಗರಿಷ್ಠ 12 ಮೆಗಾಪಿಕ್ಸೆಲ್ ಕ್ಯಾಮೆರಾ ಮಾತ್ರ ಇವೆ. ಆದರೆ, ನಾವೀಗ `ಡೊಲ್ಬಿ ಲ್ಯಾಬರೋಟರೀಸ್~ ಮತ್ತು `ಕಾರ್ಲ್ ಜ್ಯೂಯಿಸ್~ ಕಂಪೆನಿಗಳ ಸಹಯೋಗದಲ್ಲಿ ವಿಶ್ವದಲ್ಲಿಯೇ ಅತಿಶಕ್ತಿಶಾಲಿ ಕ್ಯಾಮೆರಾ ಒಳಗೊಂಡ ಮೊಬೈಲ್ ಫೋನ್ ತಯಾರಿಸಿದ್ದೇವೆ~ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಆದರೆ ಮರುಕ್ಷಣವೇ, `ಹಾಗೆಂದು ಈ ಸ್ಮಾರ್ಟ್‌ಫೋನ್‌ನಲ್ಲಿನ ಕ್ಯಾಮೆರಾ ಸಾಮರ್ಥ್ಯವನ್ನು ನೈಜ ಕ್ಯಾಮೆರಾಗಳ ಜತೆ ಹೋಲಿಕೆ ಮಾಡಲಾಗದು. ಶಕ್ತಿಶಾಲಿ ಡಿಜಿಟಲ್ ಕ್ಯಾಮೆರಾಗಳಿಗೆ ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಸ್ಪರ್ಧಿಯಲ್ಲ~ ಎಂಬ ಜಾಣತನದ ಮಾತನ್ನೂ ಆಡುತ್ತಾರೆ.

ನೋಕಿಯ ಕಂಪೆನಿಯ ಮೊಬೈಲ್ ಹ್ಯಾಂಡ್‌ಸೆಟ್ ಸಂಶೋಧನೆ ಮತ್ತು ಅಭಿವೃದ್ಧಿ (ಆರ್   ಅಂಡ್ ಡಿ) ವಿಭಾಗ `ಪ್ಯೂರ್‌ವ್ಯೆ 808 ಸ್ಮಾರ್ಟ್‌ಫೋನ್ ಮಾದರಿ ಅಭಿವೃದ್ಧಿಪಡಿಸಲು 5 ವಷಗಳವರೆಗೂ ಶ್ರಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT