ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದ ಜ್ಯೋತಿ ಯಾತ್ರೆಗೆ ಅದ್ದೂರಿ ಸ್ವಾಗತ

Last Updated 10 ಜನವರಿ 2012, 10:40 IST
ಅಕ್ಷರ ಗಾತ್ರ

ಬಾಗಲಕೋಟೆ: ಸ್ವಾಮಿ ವಿವೇಕಾ ನಂದರ 150ನೇ ಜಯಂತಿ ಅಂಗವಾಗಿ ಬೀದರ್‌ನಿಂದ ಹೋರಟಿರುವ ಸ್ವಾಮಿ ವಿವೇಕಾನಂದ ಜ್ಯೋತಿ ಯಾತ್ರೆಯು ಸೋಮವಾರ ಸಂಜೆ ನಗರಕ್ಕೆ ಆಗಮಿಸಿತು.

ರಾಮಕೃಷ್ಣ ಮಠ ಮತ್ತು ಮಿಶನ್‌ನ ರಾಜ್ಯದ ಯುವ ಸಮೂಹದಲ್ಲಿ ವಿವೇಕಾನಂದ ಜೀವನ-ಸಂದೇಶದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿರುವ ಸ್ವಾಮಿ ವಿವೇಕಾನಂದ ಜ್ಯೋತಿ ಯಾತ್ರೆಯು ನವನಗರದ ಎ.ಪಿ.ಎಂ.ಸಿ ಕ್ರಾಸ್ ಬಳಿ ಆಗಮಿಸು ತ್ತಿದ್ದಂತೆ ಜನಪ್ರತಿನಿಧಿಗಳು, ಗಣ್ಯರು ಯುವಕರು ಹೂಹಾರ ಹಾಕಿ, ಪೂರ್ಣಕುಂಬ ಮತ್ತು ವಾದ್ಯ ಮೇಳದೊಂದಿಗೆ ಸ್ವಾಗತಿಸಿದರು.

ಬಳಿಕ ಜ್ಯೋತಿ ಯಾತ್ರೆಯು ಎಪಿಎಂಸಿ ಕ್ರಾಸ್, ಎಲ್‌ಐಸಿ ಸರ್ಕಲ್, ಎಸ್.ಬಿ.ಐ, ಸರ್ಕಾರಿ ಜಿಲ್ಲಾ ಆಸ್ಪತ್ರೆ, ಎಂಜಿನಿಯರಿಂಗ್ ಕಾಲೇಜ್ ಸರ್ಕಲ್, ಎಂಜಿನಿಯರಿಂಗ್ ಕಾಲೇಜ್ ಮುಖ್ಯ ರಸ್ತೆ, ವಿ.ಆರ್.ಎಲ್.ಕಚೇರಿ, ಮಹಾ ರಾಜ ಹೋಟೆಲ್, ರೇಲ್ವೆ ನಿಲ್ದಾಣ ರಸ್ತೆ, ಬಸ್‌ನಿಲ್ದಾಣ ಮಾರ್ಗದಲ್ಲಿ ಸಂಚರಿಸಿ ವೀರಭದ್ರೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿತು. ಬಳಿಕ ಸತ್ಸಂಗ ಕಾರ್ಯಕ್ರಮ ನಡೆಯಿತು.

ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾ ಯಣಸಾ ಭಾಂಡಗೆ, ರಾಮಕೃಷ್ಣ ಮಠದ ನಿರ್ಭಯಾನಂದಜೀ, ರಾಘ ವೇಶಾನಂದಜೀ, ಯಾತ್ರೆಯ ಸ್ವಾಗತ ಸಮಿತಿ ಉಪಾಧ್ಯಕ್ಷ ಬಸವಪ್ರಭು ಸರನಾಡಗೌಡ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT