ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕೆ ಆಗ್ರಹಿಸಿ ದಲಿತ ಕುಟುಂಬಗಳ ಪ್ರತಿಭಟನೆ

Last Updated 17 ಜನವರಿ 2012, 6:00 IST
ಅಕ್ಷರ ಗಾತ್ರ

ಹಾಸನ: ಹಳೇಬೀಡು ಹೋಬಳಿ ಕಟ್ಟೆಸೋಮನಹಳ್ಳಿಯ ಸುಮಾರು 20 ದಲಿತ ಕುಟುಂಬಗಳು ಸೂರಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಸೋಮವಾರ ಈ ಕುಟುಂಬದವರು ತಮಗೆ ಹಕ್ಕುಪತ್ರ ನೀಡಬೇಕು ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

`ನಾವು ಸುಮಾರು 50ವರ್ಷಗಳಿಂದ ಗುಡಿಸಲಿನಲ್ಲಿ ವಾಸವಾಗಿದ್ದೇವೆ. ಸ್ವಂತ ನಿವೇಶನವಿಲ್ಲ, ನೀರು, ಚರಂಡಿ, ವಿದ್ಯುತ್ ಮುಂತಾದ ಮೂಲ ಸೌಲಭ್ಯಗಳೂ ಇಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಏನೂ ಉಪಯೋಗವಾ ಗಲಿಲ್ಲ ಎಂದು ಪ್ರತಿಭಟನಾಕಾರರು ನುಡಿದರು.

ಹಿಂದೆ ಈ ದಲಿತರು ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಅವರು ನ್ಯಾಯಾ ಲಯಕ್ಕೆ ಹೋದ ಪರಿಣಾಮ ಅವರು ಪಕ್ಕದ ಗುಂಡುತೋಪಿನಲ್ಲಿ ಗುಡಿಸಲು ಹಾಕಿ ಜೀವನ ಸಾಗಿಸಲು ಆರಂಭಿಸಿದ್ದರು. ಇಲ್ಲಿ ಹಾವು-ಹಲ್ಲಿ ಮತ್ತಿತರ ಪ್ರಾಣಿಗಳ ಕಾಟವನ್ನೂ ಸಹಿಸಬೇಕಾಗಿ ಬಂದಿದೆ. ನಾಲ್ಕು ತಿಂಗಳ ಹಿಂದೆ ಇಲ್ಲಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿಯನ್ನು ಭೇಟಿಮಾಡಿ ನಿವೇಶನ ನೀಡುವಂತೆ ಮನವಿ ಮಾಡಿದ್ದರು.

ಆದರೆ ಈವರೆಗೆ ಏನೂ ಆಗಿಲ್ಲ. ಶಾಸಕರು ಸಹ ಈ ಜನರ ನೆರವಿಗೆ ಬಂದಿಲ್ಲ. ಇಲ್ಲಿ ಕೊಳವೆ ಬಾವಿ ನಿರ್ಮಿಸುವಂತೆ ಜಿ.ಪಂ. ಎಂಜಿನಿಯರ್ ಅವರಿಗೆ ಶಾಸಕರು ಸೂಚನೆ ನೀಡಿದ್ದರೂ ಅದೂ ಜಾರಿಯಾಗಿಲ್ಲ. ಕನಿಷ್ಠ ಈಗ ವಾಸವಿರುವ ಗುಂಡು ತೋಪು ಜಮೀನನ್ನಾದರೂ ನಮಗೆ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಮಸ್ಯೆ ಪರಿಹಾರವಾಗುವವರೆಗೆ ಪ್ರತಿಭಟನೆ ಕೊನೆಗೊಳಿಸಬಾರದೆಂಬ ಉದ್ದೇಶವಿಟ್ಟು ದಲಿತ ಸಮುದಾಯ ದವರು ಸಾಮಾನು ಸರಂಜಾಮು ಹಾಗೂ ಮಕ್ಕಳು-ಮರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿ ದ್ದರು. ಮಧ್ಯಾಹ್ನ ಇಲ್ಲೇ ಊಟವನ್ನು ಮಾಡಿದರು. ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಕೆಲವು ಭರವಸೆ ಗಳನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸಿ ಊರಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT