ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಹಿವಾಟಿಗೆ ಜುನೊ

ಅಕ್ಷರ ಗಾತ್ರ

ಜುನೊ.... ಜುನೊ ಮೊನೆಟಾ.. ರೋಮನ್ನರ `ಹಣಕಾಸು ದೇವ     ತೆ~. ಅಂದರೆ ಹಿಂದೂ ಪುರಾಣದ ಕುಬೇರ ಇದ್ದಂತೆ~!

`ಇಂಗ್ಲಿಷ್‌ನ `ಮನಿ~ (Money) ಎಂಬ ಪದವೂ ರೋಮ್‌ನ `ಮೊನೆಟಾ~ ಪದದಿಂದಲೇ ಉತ್ಪತ್ತಿಯಾಗಿದೆ~.

ರೋಮನ್ನರ ಆ ಧನದೇವತೆಯೇ ಹೊಸ ರೂಪದಲ್ಲಿ ಇಂದು ಅವತರಿಸಿದ್ದಾಳೆ! ಮೊಬೈಲ್ ಅಪ್ಲಿಕೇಷನ್ ರೂಪದಲ್ಲಿ... ಅದುವೇ `ಜುನೊ~...
...ಹೇಳುತ್ತಲೇ ಇದ್ದರು ಸೌರಭ್ ಶ್ರೀವಾಸ್ತವ್.

ಇವರು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಕ್ಸ್‌ಫರ್ಡ್ ಟವರ್‌ನಲ್ಲಿರುವ `3ಪಿ ಟೆಕ್ನಾಲಜೀಸ್ ಪ್ರೈ.ಲಿ.~(3ಪಿಟಿಪಿಎಲ್)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

`ಜುನೊ~ ಅಪ್ಲಿಕೇಷನ್ ಯಾವುದೇ ಸಂಸ್ಥೆ, ವ್ಯಕ್ತಿಯು ಪ್ರವಾಸದಲ್ಲಿದ್ದಾಗಲೂ ತನ್ನ ಹಣಕಾಸು ವಹಿವಾಟು ನಿರ್ವಹಿಸಲು ನೆರವಾಗಲೆಂದೇ ಅಭಿವೃದ್ಧಿಪಡಿಸಲಾಗಿರುವ ಸರಳ ತಂತ್ರಾಂಶವನ್ನೊಳಗೊಂಡ ಸೌಲಭ್ಯ ಇದು.

ಈ ಅಪ್ಲಿಕೇಷನ್ ಸರಳವಾದುದೇ ಆದರೂ, ಇದರ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಿಡಿದ ಸಮಯ ಮಾತ್ರ ಬರೋಬ್ಬರಿ ನಾಲ್ಕು ವರ್ಷ.  ನಮ್ಮ 15 ಮಂದಿಯ ತಂಡದ ಕನಸು ಜೂನ್ 15ರಂದು ನನಸಾಯಿತು. ಜುನೊ ನಮ್ಮ ಕಂಪೆನಿಯ ಮೊದಲ ಉತ್ಪನ್ನ ಎಂದು ಮುಖದ ತುಂಬಾ ನಗೆ ಅರಳಿಸುತ್ತಾರೆ   ಸೌರಭ್.

ವಾಣಿಜ್ಯೋದ್ಯಮಿಗಳು, ಕಾರ್ಪೊರೇಟ್ ವಲಯದವರು, ವರ್ತಕರು, ಕೈಗಾರಿಕೋದ್ಯಮಿಗಳು, ಹಣಕಾಸು ಕ್ಷೇತ್ರದವರು ಎಲ್ಲೇ ಇದ್ದರೂ, ಯಾವಾಗ ಬೇಕಾದರೂ ತಮ್ಮ ಕಚೇರಿಯ ವಾಣಿಜ್ಯ ವಹಿವಾಟು, ಕಡತ ಪರಿಶೀಲನೆ, ಪರಿಷ್ಕರಣೆ ಮಾಡಲು `ಜುನೊ~ ಮೊಬೈಲ್ ಅಪ್ಲಿಕೇಷನ್ ನೆರವಾಗಲಿದೆ. ಕಚೇರಿಯೊಡನೆ ಅಥವಾ ನಿಮ್ಮ ಪರ್ಸನಲ್ ಕಂಪ್ಯೂಟರ್ ಜತೆಗೆ ಸಂಪರ್ಕ ಸಾಧಿಸಲು ನೆರವಾಗುವ ಹೊಸ ನಿಸ್ತಂತು ಸಾಧನ ಸಹಕರಿಸಲಿದೆ.  

ಅದಕ್ಕಾಗಿ ಮಾಡಬೇಕಾಗಿದ್ದಿಷ್ಟೆ. ಆಪಲ್, ಬ್ಲ್ಯಾಕ್‌ಬೆರ‌್ರಿ ಮತ್ತು ಅಂಡ್ರಾಯ್ಡ ಆಪರೇಟಿಂಗ್ ಸಿಸ್ಟೆಂ ಇರುವ ಮೊಬೈಲ್ ಫೋನ್‌ಗೆ  `3ಪಿಟಿಪಿಎಲ್~ನ (www.3ptec.com or sms to 5667786) ಜುನೊ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು(ಪ್ರಾಯೋಗಿಕವಾಗಿ ಮೊದಲ 30 ದಿನ ಉಚಿತ ಬಳಕೆ. ನಂತರ ಖರೀದಿಸಿ ಅಳವಡಿಸಿಕೊಳ್ಳಲು ರೂ. 2700. ವರ್ಷಕ್ಕೆ ರೂ. 900 ಶುಲ್ಕ).

ಜತೆಗೆ ‘Tally.Net id.’ ಹೊಂದಿರಬೇಕು. ಆಗ `ಟ್ಯಾಲಿ~ ತಂತ್ರಾಂಶ ಆಧರಿಸಿದ ಎಲ್ಲ ವಾಣಿಜ್ಯ ವಹಿವಾಟು ಕೆಲಸಗಳನ್ನೂ ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ನಿರ್ವಹಿಸಬಹುದು. ಹಾಗೆಂದು ಇದನ್ನು ಬಳಸಲು ನೀವೇನೂ ಟ್ಯಾಲಿ ನುರಿತವರೇ ಆಗಿರಬೇಕಿಲ್ಲ. ಇದು ಬಳಸಲು ಬಹಳ ಸುಲಭವಾದುದು ಎನ್ನುತ್ತಾರೆ ಸೌರಭ್.

ಇಷ್ಟಾದರೆ, ನಿಮ್ಮ ಗೋದಾಮಿನಲ್ಲಿನ ಸರಕುಗಳ ಸ್ಥಿತಿಗತಿ, ಖರೀದಿ-    ಮಾರಾಟದ ಲೆಕ್ಕಾಚಾರ, ಬ್ಯಾಂಕ್ ಖಾತೆಯ ವಹಿವಾಟು, ತಮ್ಮ ಪ್ರಮುಖ 25 ಗ್ರಾಹಕರೊಂದಿಗಿನ ವ್ಯಾಪಾರದ ಲೆಕ್ಕಾಚಾರಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿಂದಲಾದರೂ ನೀವು ಬಯಸಿದ ಕ್ಷಣವೇ ಪರಿಶೀಲಿಸಬಹುದು, ಪರಿಷ್ಕರಿಸಬಹುದು. ಕಚೇರಿಯ ಸಿಬ್ಬಂದಿಗೆ, ಗ್ರಾಹಕರಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಕಡತಗಳನ್ನೂ ಕಳುಹಿಸಬಹುದು. ಹಾಗಾಗಿಯೇ ಇದನ್ನು `ಎನಿವೇರ್-ಎನಿಟೈಂ ಅಕ್ಸೆಸ್~ ಎಂದು ಕರೆದಿದೆ `3ಪಿಟಿಪಿಎಲ್~ ಕಂಪೆನಿ.

`ಜುನೊ~ದಲ್ಲಿರುವ ಟ್ಯಾಲಿ ಇನ್‌ಸ್ಟಲೇಷನ್, ಮಲ್ಟಿಪಲ್ ರಿಪೋರ್ಟ್ಸ್, ಡ್ಯಾಷ್‌ಬೋರ್ಡ್ ಮತ್ತು ಗ್ರಾಫ್ ಸೌಲಭ್ಯಗಳು ಕಂಪೆನಿ ಸಿಬ್ಬಂದಿಗಳಿಗೆ ಹಲವು ಬಗೆಯಲ್ಲಿ ನೆರವಾಗುತ್ತವೆ.

ಕಚೇರಿಯಲ್ಲಿ ಸಭೆ ನಡೆಸುವಾಗ ಅಥವಾ ಪ್ರೆಸೆಂಟೇಷನ್ ಸಂದರ್ಭದಲ್ಲಿ ತುರ್ತಾಗಿ ಕಂಪೆನಿಯ ಲೆಕ್ಕಾಚಾರದ ವಿವಿಧ ಅಂಶಗಳನ್ನು ಕುರಿತು ಪ್ರಾತ್ಯಕ್ಷಿಕೆ ನೀಡಲು, ಅಂಕಿ-ಅಂಶಗಳನ್ನು ಪ್ರದರ್ಶಿಸಲು ನೆರವಿಗೆ ಬರುತ್ತದೆ.

ನಿಮ್ಮ ಕಂಪೆನಿಯ ಸದ್ಯದ ಸ್ಥಿತಿಯನ್ನು ಸಂಪೂರ್ಣವಾಗಿ ತಿಳಿಯಲು `ಜುನೊ~ದ ಡ್ಯಾಷ್‌ಬೋರ್ಡ್ ವ್ಯೆ ಅಪಿಕ್ಲೇಷನ್ ನೆರವಾಗುತ್ತದೆ. ಅಲ್ಲದೆ, ಪ್ರಮುಖ ಅಂಕಿ-ಅಂಶಗಳ ಪ್ರದರ್ಶನಕ್ಕೆ ಗ್ರಾಫಿಕಲ್ ರೆಪ್ರೆಸೆಂಟೇಷನ್‌ಗೆ, ಒಂದೇ ಕ್ಲಿಕ್‌ನಲ್ಲಿ ಹಲವು ದಿನಾಂಕಗಳ ಕಡತಗಳನ್ನು ಶೋಧಿಸಿ ವೀಕ್ಷಿಸಲು, ವಿಶ್ಲೇಷಣಾತ್ಮಕ ಅಂಶಗಳೊಂದಿಗೆ ಸಂಸ್ಥೆಯ ಗರಿಷ್ಠ ಲಾಭ ತರುವ ಸರಕುಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ಪಡೆಯಲು, ಆಗ್ಗಿಂದ್ದಾಗ್ಗೆ ಬದಲಾಗುತ್ತಲೇ ಇರುವ ಕಂಪೆನಿಯ ಸರಕುಗಳ ಸಂಗ್ರಹದ ಯಥಾವತ್ ಪಟ್ಟಿಯನ್ನು ಪಡೆಯಲು, ಬ್ಯಾಂಕ್ ಖಾತೆ ಶಿಲ್ಕು, ಗ್ರಾಹಕರಿಂದ ಬರಬೇಕಾದ ಬಾಕಿ ಬಾಬ್ತು, ಕಂಪೆನಿ ಪಾವತಿಸಬೇಕಾಗಿರುವ ಮೊತ್ತ ಮೊದಲಾದ ಹತ್ತಾರು ಹಣಕಾಸು ಕೆಲಸಗಳನ್ನೂ ಬೆರಳು ತುದಿಯ ಸ್ಪರ್ಶದಿಂದಲೇ ಕ್ಷಣಮಾತ್ರದಲ್ಲಿ ವೀಕ್ಷಿಸಿ ನಿರ್ವಹಿಸಬಹುದಾಗಿದೆ. 

 2008ರಲ್ಲಿ ಆರಂಭಗೊಂಡ `3ಪಿಟಿಪಿಎಲ್~ 15 ಮಂದಿ ಕನಸುಗಾರ ಯುವಜನರ ಪುಟ್ಟ ಕಂಪೆನಿಯಾಗಿದೆ ಈಗ `ಜುನೊ~ಗೆ ಅಪ್ಲಿಕೇಷನ್‌ಗೆ ಪೇಟೆಂಟ್ ಸಹ ಪಡೆದುಕೊಂಡಿದೆ ಎನ್ನುತ್ತಾ ಹರ್ಷ ವ್ಯಕ್ತಪಡಿಸುತ್ತಾರೆ ಸೌರಭ್ ಶ್ರೀವಾಸ್ತವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT