ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಉತ್ಪಾದನೆ ಹೆಚ್ಚಳ ನಿರೀಕ್ಷೆ

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರಸಕ್ತ ಹತ್ತಿ ಫಸಲು ವರ್ಷದಲ್ಲಿ(ಅಕ್ಟೋಬರ್-ಸೆಪ್ಟೆಂಬರ್) 380 ಲಕ್ಷ ಬೇಲ್‌ಗಳಷ್ಟು (ಒಂದು ಬೆಲ್-170 ಕೆ.ಜಿ) ಹತ್ತಿ ಉತ್ಪಾದನೆ ನಿರೀಕ್ಷಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 11.7ರಷ್ಟು ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ಕೇಂದ್ರ ಜವಳಿ ಖಾತೆ ಸಚಿವ ಕೆ.ಸಾಂಬಶಿವರಾವ್ ಶುಕ್ರವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವರ್ಷ 340 ಲಕ್ಷ ಬೇಲ್ ಹತ್ತಿ ಉತ್ಪಾದನೆ ಆಗಿತ್ತು. ಇದರಲ್ಲಿ 100 ಲಕ್ಷ ಬೇಲ್ ಹತ್ತಿ ರಫ್ತು ಮಾಡಲಾಗಿತ್ತು. ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಇಳುವರಿ ಹೆಚ್ಚುವ ಸಾಧ್ಯತೆ ಇದೆ. ಗುಜರಾತ್‌ನಲ್ಲಿ ಒಟ್ಟಾರೆ ಉತ್ಪಾದನೆ ಶೇ 10ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಹತ್ತಿ ಸಂಸ್ಥೆ ಪ್ರಸಕ್ತ ವರ್ಷ 372 ಲಕ್ಷ ಬೇಲ್‌ಗಳಷ್ಟು ಹತ್ತಿ ಉತ್ಪಾದನೆ ಅಂದಾಜು ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ 356 ಕೆ.ಜಿ ತೂಕದ ಒಂದು ಬೇಲ್(ಹತ್ತಿ)ಗೆ ರೂ44,000 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT