ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಕುಂದಾಪುರ, ಕುಮಟಾದಲ್ಲಿ 9 ಸೆಂ.ಮೀ ಮಳೆಯಾಗಿದೆ. ಮೂಡುಬಿದಿರೆ, ಮಂಗಳೂರು ವಿಮಾನ ನಿಲ್ದಾಣ 7, ಕುಂದಾಪುರ, ಸುಬ್ರಹ್ಮಣ್ಯ, ಭಾಗಮಂಡಲ 6, ಕೋಟ, ಕಾರ್ಕಳ 5, ಮೂಲ್ಕಿ, ಬಂಟ್ವಾಳ, ಪುತ್ತೂರು, ಉಪ್ಪನಂಗಡಿ, ಭಟ್ಕಳ, ಹಿರೇಕೆರೂರು, ಪೊನ್ನಂಪೇಟೆ, ವೀರಾಜಪೇಟೆ 4, ಪಣಂಬೂರು, ಧರ್ಮಸ್ಥಳ, ಸುಳ್ಯ, ಕಾರವಾರ, ಬನವಾಸಿ, ಬಸವಕಲ್ಯಾಣ, ಮುಂಡರಗಿ, ನಾಪೋಕ್ಲು, ತುಮಕೂರು, ಬುಕ್ಕಾಪಟ್ಟಣ 3, ಮಾಣಿ, ಬೆಳ್ತಂಗಡಿ, ಹೊನ್ನಾವರ,ನೀಲಕುಂದ, ಮಡಿಕೇರಿ, ಲಿಂಗನಮಕ್ಕಿ, ಆಗುಂಬೆ, ಕೊಟ್ಟಿಗೆಹಾರ, ಕಡೂರು, ಕೃಷ್ಣರಾಜಸಾಗರ, ಬಂಗಾರಪೇಟೆ, ಗೋಪಾಲನಗರ, ಚಿಕ್ಕನಹಳ್ಳಿ, ಚನ್ನಪಟ್ಟಣ 2, ಕೊಲ್ಲೂರು, ಗೋಕರ್ಣ, ಶಿರಸಿ, ಸಿದ್ದಾಪುರ, ಹುಮನಾಬಾದ್, ಗುಬ್ಬಿ, ಹುಲಿಯೂರುದುರ್ಗ, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT