ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಶ್ರೀಗಳ ಸೇವೆ ಸ್ಮರಣೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಿರುಗುಪ್ಪ: ವೀರಶೈವ ಸಮಾಜಕ್ಕೆ ಮರುಜನ್ಮ ನೀಡಿದ ಲಿಂಗೈಕ್ಯ ಹಾನಗಲ್ ಕುಮಾರ ಮಹಾಶಿವಯೋಗಿಗಳು ಪ್ರತಿಯೊಬ್ಬರಿಗೂ ಪೂಜನೀಯರಾಗಿದ್ದಾರೆ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಕುಮಾರ ದೇವರು ನುಡಿದರು.

ಇಲ್ಲಿಯ  ಅಭಯಾಂಜಿನೇಯ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.

`ಶಿವಯೋಗಿಗಳು ದಿವ್ಯವಾದ ಬದುಕನ್ನು ಈ ಸಮಾಜಕ್ಕೆ ನೀಡಿದ್ದಾರೆ. ಅವರು ಬರೀ ಸ್ವಾಮೀಜಿಯಾಗಿ ಬಾಳಲಿಲ್ಲ, ಬದಲಿಗೆ ಶಿವಜ್ಞಾನಿಯಾಗಿ, ಶಿವಕವಿಯಾಗಿ, ಶಿವಯೋಗಿಯಾಗಿ ಬಾಳಿದರು. ಕ್ರಿಯಾಕರ್ತರಾಗಿ, ಕೀರ್ತಿವಂತರಾಗಿ ಬದುಕಿದರು~ ಎಂದರು.

ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿದ ಯುಗಪ್ರವರ್ತಕರ, ದಾರ್ಶನಿಕರ ಜಯಂತಿ, ಪುಣ್ಯಸ್ಮರಣೆ, ಧರ್ಮ ಸಭೆಗಳನ್ನು ನಡೆಸುವುದರಿಂದ ಸಮಾಜದಲ್ಲಿ ಏಕತೆ ಮತ್ತು ಸಮಾನತೆಯ ಜಾಗೃತಿ ಮೂಡುತ್ತದೆ ಎಂದರು.

ಹಾನಗಲ್ ಸ್ವಾಮೀಜಿಯವರು ಗುರು-ವಿರಕ್ತರನ್ನು ಸಮನಾಗಿ ಕಂಡಂತಹ ಮಹಾನ್ ಪುರುಷರು, ಮಾನವನ ಜೀವನದ ಸಾರ್ಥಕತೆಗೆ ಶರಣರು ಮಾಡಿದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳು, ಆದರ್ಶಗಳು ನಮ್ಮೆಲ್ಲರಿಗೆ ದಾರಿದೀಪಗಳಾಗಿವೆ ಎಂದು ಬಸವಭೂಷಣ ಶ್ರೀಗಳು ನೆನೆದರು.

ಸಿರುಗುಪ್ಪದಲ್ಲಿ ಶ್ರೀಗಳ ಪುಣ್ಯಸ್ಮರಣೆಯನ್ನು ಆಯೋಜಿಸಿರುವುದು ಸಮಾಜಕ್ಕೆ ಚೈತನ್ಯ ತಂದಿದೆ ಎಂದು ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎನ್.ಜಿ.ಬಸವರಾಜಪ್ಪ,  ಆರ್.ಜೆ.ಪಂಪನಗೌಡ, ಎಂ.ಆರ್.ಬಸವನಗೌಡ, ಶಿವಾರೆಡ್ಡಿಗೌಡ, ಸಿದ್ಧರಾಮನಗೌಡ, ದೊಡ್ಡ ವೀರನಗೌಡ, ಯು.ಅಮರೇಶಪ್ಪ, ಚನ್ನವೀರಸ್ವಾಮಿ, ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT