ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲ್ ಆಫ್ ಫೇಮ್ಗೆ ಗಾವಸ್ಕರ್

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ `ಹಾಲ್ ಆಫ್ ಫೇಮ್~ಗೆ ಗುರುವಾರ ಸೇರ್ಪಡೆಗೊಂಡರು.

ಇಲ್ಲಿ ನಡೆದ ಸಮಾರಂಭದಲ್ಲಿ ಗಾವಸ್ಕರ್ ಅವರು ತಮ್ಮದೇ ದೇಶದ ಇನ್ನೊಬ್ಬ ಮಾಜಿ ನಾಯಕ ಕಪಿಲ್ ದೇವ್ ಅವರಿಂದ `ಹಾಲ್ ಆಫ್ ಫೇಮ್~ ಮಾನ್ಯತಾ ಕ್ಯಾಪ್ ಅನ್ನು ಸ್ವೀಕರಿಸಿದರು. 2009ರಲ್ಲಿ ಆರಂಭಗೊಂಡ ಹಾಲ್ ಆಫ್ ಫೇಮ್‌ನಲ್ಲಿ ಒಟ್ಟಾರೆ 72 ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಾರೆಗಳಿದ್ದಾರೆ. ಕಪಿಲ್ ಈ ಮೊದಲೇ ಇದನ್ನು ಸೇರಿದ್ದರು.

`ಇದೊಂದು ದೊಡ್ಡ ಗೌರವ. ದೀರ್ಘ ಕಾಲದಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಪಳಗಿದವರೇ ಇದರಲ್ಲಿ ಸೇರಿಸುವುದಕ್ಕೆ ಯಾರು ಅರ್ಹರೆಂದು ನಿರ್ಧರಿಸುತ್ತಾರೆ. ಕೆಲವು ಕಾಲದಿಂದ ಸೇರ್ಪಡೆ ಪ್ರಕ್ರಿಯೆ ನಡೆಯುವುದಕ್ಕೆ ಕಾಲ ಕೂಡಿಬಂದಿರಲಿಲ್ಲ. ಅಂತಿಮವಾಗಿ ನಾನೂ ಈ ಗುಂಪಿನಲ್ಲಿ ಸೇರಿಕೊಂಡಿದ್ದೇನೆ~ ಎಂದು ಗಾವಸ್ಕರ್ ಪ್ರತಿಕ್ರಿಯಿಸಿದರು.

`ಆಯ್ದ ಕೆಲವರು ಮಾತ್ರ ಇದರಲ್ಲಿದ್ದಾರೆ. ಆದ್ದರಿಂದ ಮಹತ್ವ ಹೆಚ್ಚು. ವಿಶೇಷ ಎನ್ನುವ ಅನುಭವವನ್ನೂ ನೀಡುತ್ತದೆ~ ಎಂದ ಅವರು `ಈಗ ಅಧಿಕೃತವಾಗಿ ನಾನು ಹಾಲ್ ಆಫ್ ಫೇಮ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಅದೇ ಹೆಮ್ಮೆ~ ಎಂದರು.

ಕಪಿಲ್ ಅವರಿಂದ ಕ್ಯಾಪ್ ಸ್ವೀಕರಿಸಿದ್ದೂ ಸ್ಮರಣೀಯ ಕ್ಷಣವೆಂದ ಸುನಿಲ್ `ನಾನು ದಶಕದಷ್ಟು ಕಾಲ ಅವರೊಂದಿಗೆ ಆಡಿದ್ದೇನೆ. ನಾನು ಕೂಡ ಅವರನ್ನು ಭಾರತದ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಪರಿಗಣಿಸುತ್ತೇನೆ. ಅವರಿಂದಲೇ ಕ್ಯಾಪ್ ಪಡೆಯುವ ಸೌಭಾಗ್ಯ ನನ್ನದಾಯಿತು. ದೇಶಕ್ಕಾಗಿ ಆಡುತ್ತಿದ್ದ ಸಮಯದಲ್ಲಿ ನಾನು ಮತ್ತು ಕಪಿಲ್ ಅನೇಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇವು~ ಎಂದು   ತಿಳಿಸಿದರು.

`ದೇಶಕ್ಕಾಗಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಂದರ್ಭವನ್ನಂತೂ ಎಂದೂ ಮರೆಯಲಾಗದು. ಲಾರ್ಡ್ಸ್ ನಲ್ಲಿ ಆಗ ನಮ್ಮ ತಂಡದ ನಾಯಕ ಟ್ರೋಫಿ ಎತ್ತಿ ಹಿಡಿದಾಗಿನ ಚಿತ್ರವು ಸದಾ ನೆನಪಿನಲ್ಲಿ ಗಟ್ಟಿಯಾಗಿದೆ~ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT