ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ದಶಮಾನೋತ್ಸವ

Last Updated 10 ಜನವರಿ 2014, 19:52 IST
ಅಕ್ಷರ ಗಾತ್ರ

ನೆಲಮಂಗಲ: ‘ಸುಮಾರು 55 ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಹಿಂದುಳಿದ ಜಾತಿಗಳ ಒಕ್ಕೂಟವನ್ನು ಕಟ್ಟಲಾಗಿದೆ. ಮೀಸಲಾತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡು­ವಲ್ಲಿ ಒಕ್ಕೂಟ ಹೋರಾಡುತ್ತಿದೆ’ ಎಂದು ಮಾಜಿ ಸಚಿವ ಎಚ್‌.ಎಂ.­ರೇವಣ್ಣ ತಿಳಿಸಿದರು.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮಾದಾವರದಲ್ಲಿ ಭಾನು­ವಾರ ಹಮ್ಮಿ­ಕೊಂಡಿರುವ ದಶಮಾ­ನೋತ್ಸವ ಸಮಾ­ರಂಭದ ಪೂರ್ವ­ಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು. ‘ಅಹಿಂದ ವರ್ಗಗಳ ಸಮಾ­ವೇಶ­ವನ್ನು ದೊಡ್ಡಮಟ್ಟದಲ್ಲಿ ಆಯೋ­ಜಿಸಲು ಎಲ್ಲ ತಯಾರಿ  ನಡೆಸಲಾಗಿದೆ’ ಎಂದರು.

ಒಕ್ಕೂಟದ ಅಧ್ಯಕ್ಷ ಎಸ್‌.­ಸಿದ್ದಗಂಗಯ್ಯ ಮಾತನಾಡಿ , ‘ಅತಿ ಸಣ್ಣ ವರ್ಗಗಳನ್ನು ಒಗ್ಗೂಡಿಸಿ ಅವರ ಕುಲಕಸುಬುಗಳಿಗೆ ಪುನಶ್ಚೇತನ ನೀಡುವ ಕಾರ್ಯಕ್ಕೆ ಸಮಾವೇಶದ ಮೂಲಕ ಚಾಲನೆ ನೀಡಲಾಗುವುದು’ ಎಂದರು.

ಒಕ್ಕೂಟದ ಉಪಾಧ್ಯಕ್ಷ ಸುರೇಶ್‌ ಎಂ.­ಲಾತೂರ್‌, ‘ಸುಮಾರು 5 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊ­ಳ್ಳುವ ನಿರೀಕ್ಷೆ ಇದೆ. 2 ಲಕ್ಷ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗುವುದು. ವಸತಿ ಮತ್ತು ಊಟದವ್ಯವಸ್ಥೆ ಮಾಡಲಾ­ಗುವುದು’ ಎಂದರು.

ಮಾಜಿ ಸಚಿವ ಕುಮಾರ್‌ ಬಂಗಾರಪ್ಪ, ಮಾಜಿ ಸಭಾಪತಿ ವಿ.ಆರ್‌.­ಸುದರ್ಶನ್‌, ಮಾಜಿ ಶಾಸಕ ನೆ.ಲ.­ನರೇಂದ್ರ­ಬಾಬು, ಗೌರವ ಅಧ್ಯಕ್ಷ ಎನ್‌.ವಿ.­ ನರಸಿಂಹಯ್ಯ, ಕಾರ್ಯಾ­ಧ್ಯಕ್ಷ ಡಾ.ಬಿ.ಕೆ. ರವಿ, ಪ್ರಧಾನ ಕಾರ್ಯದರ್ಶಿ ಎಸ್‌.ಜಿ.ಕಾಳೇಗೌಡ, ಪುರಸಭಾ ಸದಸ್ಯ ಶಿವಕುಮಾರ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT