ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಬೋನಿಗೆ ಬಿದ್ದ ಚಿರತೆ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಮಲ್ಲಿನಾಥಪುರ ಗ್ರಾಮದಲ್ಲಿ 12 ವರ್ಷದ ಹೆಣ್ಣು ಚಿರತೆಯೊಂದು ಮಂಗಳವಾರ ರಾತ್ರಿ ಸೆರೆ ಸಿಕ್ಕಿದೆ.

ಗ್ರಾಮದ ರೈತ ರಾಮಚಂದ್ರ ಅವರ ಜಮೀನಿನಲ್ಲಿ 15-20 ದಿನದಿಂದ ಕಾಣಿಸಿಕೊಂಡಿದ್ದ ಈ ಚಿರತೆಯನ್ನು ಬಂಧಿಸುವಂತೆ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ರಾಮಚಂದ್ರ ದೂರು ನೀಡಿದ್ದರು. ಅರಣ್ಯ ಇಲಾಖೆ ಗ್ರಾಮದಲ್ಲಿ ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನ ನಡೆಸಿತ್ತು. ಮಂಗಳವಾರ ರಾತ್ರಿ ಬೋನಿನಲ್ಲಿ ಇದ್ದ ಆಹಾರವನ್ನು ತಿನ್ನಲು ಬಂದಾಗ ಚಿರತೆ ಬೋನಿಗೆ ಬಿತ್ತು ಎಂದು ಎ.ಸಿ.ಎಫ್. ಬಸವರಾಜು ಬುಧವಾರ ತಿಳಿಸಿದರು.

ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿದ ನಂತರ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಿರುವ  ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ಅವರು ತಿಳಿಸಿದರು. ಬಿಳಿಕೆರೆ ಹೋಬಳಿಯ ಅರಬ್ಬಿ ತಿಟ್ಟು ಅರಣ್ಯದಲ್ಲಿ ಚಿರತೆ ವಂಶಾಭಿವೃದ್ಧಿಯಾಗಿದೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ಅರಣ್ಯದಂಚಿನ ಗ್ರಾಮಸ್ಥರು ಅರಬ್ಬಿ ತಿಟ್ಟು ಅರಣ್ಯ ಸುತ್ತಲೂ ಹಾಕಿರುವ ಚೈನ್ ಲಿಂಕ್ ಮಾದರಿಯ ಬೇಲಿಯನ್ನು ಕತ್ತರಿಸಿರುವುದರಿಂದ ವನ್ಯ ಮೃಗಗಳು ಗ್ರಾಮಗಳಿಗೆ ದಾಳಿ ಇಡುತ್ತಿದೆ. ಈ ಬಗ್ಗೆ ಅರಣ್ಯದಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT