ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೃದಯ ಬಡಿತ' ಆಲಿಸಲು ಆ್ಯಪ್

ಮೊಬೈಲ್ ಮ್ಯಾಜಿಕ್
Last Updated 6 ಸೆಪ್ಟೆಂಬರ್ 2013, 6:37 IST
ಅಕ್ಷರ ಗಾತ್ರ

`ಪ್ರೀತಿ' ಎನ್ನುವುದು ಪ್ರವಾಹದ ಸೆಳೆತ
ಮೇರೆ ಮೀರಿ ಹರಿಯುವುದೇ ಅದರ ತುಡಿತ
ನೀರೊಳಗೆ ವೀಣೆ ಮಿಡಿದಂತೆ ಅದರ ಹೃದಯ ಬಡಿತ....


ಪ್ರೀತಿ, ಪ್ರೇಮದ ವಿಷಯದಲ್ಲಿ `ಹೃದಯ'ಕ್ಕೆ ಪವಿತ್ರ ಸ್ಥಾನ. ಹೃದಯ ಗೆದ್ದು, ಕದ್ದು ಒಡಮೂಡುವ ಪ್ರೀತಿಯಲ್ಲಿ `ಹೃದಯ ಬಡಿತ' ಎನ್ನುವುದು ಪ್ರೇಮಿಗಳ ಪಾಲಿಗೆ ಬರೀ ಶಬ್ದವಲ್ಲ. ನಿಶಬ್ಧ ಸೀಳಿಬರುವ ಉತ್ಕಟ ಪ್ರೇಮದ ಮಿಡಿತ.

ಅದನ್ನು ಕೇಳಬೇಕೆನ್ನುವುದೇ ಪ್ರತಿ ಪ್ರೇಮಿಯ ತುಡಿತ. ಈ ತುಡಿತವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದವರಿಗೆಂದೇ ಲಂಡನ್ ಸಂಶೋಧಕರು ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದ ದೂರ ಉಳಿದು ಸದಾ ಕಾಯುತ್ತಾ, ಸುತ್ತಲಿರುವ ಲೋಕ ಮರೆತು ವಿರಹದುರಿಯಲ್ಲಿ ಬೆಯುವ ಪ್ರೇಮಿಗಳು ಪರಸ್ಪರ ಹೃದಯದ ಬಡಿತ ಆಲಿಸಲು ಅನುಕೂಲವಾಗುವಂತೆ ಹೊಸ ಅಪ್ಲಿಕೇಷನ್‌ವೊಂದನ್ನು ಈ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ನೋಡಲು ಥೇಟ್ ಮಣಿಕಟ್ಟಿಗೆ ಕಟ್ಟಿಕೊಳ್ಳುವ ಬ್ಯಾಂಡ್‌ನಂತಿರುವ Pillow Talk ಎಂಬ ಸಾಧನಕ್ಕೆ  ದೂರದಲ್ಲಿರುವ ಪ್ರೇಮಿಯ ಹೃದಯ ಬಡಿತ ಆಲಿಸುವ ಅಪ್ಲಿಕೇಷನ್ ಸಂಯೋಜನೆಗೊಳಿಸಲಾಗಿದೆ. ಈ ಸಾಧನವನ್ನು ಲಂಡನ್‌ನ ಲಿಟಲ್ ರಾಯಿಟ್ ಕಂಪೆನಿ ವಿನ್ಯಾಸಗೊಳಿಸಿದೆ.

ಈ ಬ್ಯಾಂಡ್ ಧರಿಸಿದವರ ಹೃದಯ ಬಡಿತ ಬ್ಲೂಟೂತ್ ಮೂಲಕ ಹರಿದು ಬರಲಿದ್ದು, ದೂರದಲ್ಲಿರುವ ಅವರ ಪ್ರೀತಿಪಾತ್ರರು ಐಫೋನ್ ಆಪರೇಟಿಂಗ್ ಸಿಸ್ಟಂ (ಐಒಎಸ್) ಅಥವಾ ಆ್ಯಂಡ್ರಾಯ್ಡ ಆ್ಯಪ್ ಮೂಲಕ ಆಲಿಸಬಹುದಾಗಿದೆ.

ಈ ಆ್ಯಪ್ ಅನ್ನು ಹೊಂದಿರುವವರು Pillow Talk  ಸಾಧನ ಹೊಂದಿರುವ ತಮ್ಮ ಸಂಗಾತಿಯನ್ನು ಸಂಪರ್ಕಿಸಿದಾಗ ಪರಸ್ಪರರ ಹೃದಯ ಬಡಿತ ಕೇಳಿ ಆನಂದಿಸಬಹುದು.

ಹೆಡ್‌ಪೋನ್ ಅಥವಾ ಪಿಲ್ಲೋ ಸ್ಪೀಕರ್ ಹಾಕಿಕೊಂಡು ಹಾಸಿಗೆ ಮೇಲೆ ಮಲಗಿದ ವೇಳೆ ದೂರದ ಸ್ಥಳದಲ್ಲಿರುವ ತನ್ನ ಪ್ರೇಮಿಯ ಹೃದಯ ಬಡಿತವನ್ನು ನಿಕಟವಾಗಿ ಆಲಿಸುವ ಆ ಅನುಭೂತಿ ನಿಜಕ್ಕೂ ಪರಸ್ಪರರಲ್ಲಿ ರೋಮಾಂಚನ ಉಂಟುಮಾಡುತ್ತದೆ ಎನ್ನುತ್ತಾರೆ ಸಂಶೋಧಕರು.

ಜಗತ್ತಿನ ಗಮನ ಸೆಳೆದಿರುವ ಈ ವಿಭಿನ್ನ ಪ್ರಯೋಗವನ್ನು ಯೂಟ್ಯೂಬ್‌ನಲ್ಲಿ ಈಗಾಗಲೇ 7.50 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಎನ್ನುತ್ತದೆ ಲಿಟಲ್ ರಾಯಿಟ್ ಕಂಪೆನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT