ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ ಅಥಣಿ ವಿಭಾಗದ ಸಿಬ್ಬಂದಿ ಸಾಮೂಹಿಕ ರಜೆ?

Last Updated 24 ಡಿಸೆಂಬರ್ 2013, 9:48 IST
ಅಕ್ಷರ ಗಾತ್ರ

ಅಥಣಿ: ಲೈನಮನ್, ಮೀಟರ್‌ ರೀಡರ್, ಶಾಖಾಧಿ­ಕಾರಿ ಮತ್ತು ಲೆಕ್ಕಪತ್ರ ವಿಭಾಗದ ನೌಕರರು ಸೇರಿ ಒಟ್ಟು 42 ಜನ ಹೆಸ್ಕಾಂ ಅಥಣಿ ವಿಭಾಗದ ಸಿಬ್ಬಂದಿ ಸೋಮವಾರ ಏಕಕಾಲಕ್ಕೆ ಸಾಮೂಹಿಕ­ವಾಗಿ ರಜೆ ಮೇಲೆ ತೆರಳಿರುವುದರಿಂದ ದಿನನಿತ್ಯದ ಆಡಳಿತದಲ್ಲಿ ಸಮಸ್ಯೆಗೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿ­ಯರ್‌ ನಾಯಿಕ, ತಮ್ಮ ಅಧೀನ ಬರುವ ಇಬ್ಬರು ಶಾಖಾಧಿಕಾರಿಗಳು ಮಾತ್ರ ವೈಯಕ್ತಿಕ ಕಾರಣ­ಗಳಿಂದ ರಜೆ ಮೇಲೆ ತೆರಳಿದ್ದಾರೆಂದು ತಿಳಿಸಿದರು.

ಇನ್ನು ಉಳಿದ 40 ಜನ ಸಿಬ್ಬಂದಿ ಆಯಾ ಶಾಖಾಧಿ­ಕಾರಿಗಳ ಅನುಮತಿಯ ಮೇರೆಗೆ ರಜೆಯ ಮೇಲೆ ತೆರಳಿರಬಹುದಾದರೂ ಆ ಬಗ್ಗೆ  ತಮಗೆ ಖಚಿತ ಮಾಹಿತಿ ಇಲ್ಲ, ಸ್ಪಷ್ಟ ಮಾಹಿತಿ ಮಂಗಳವಾ­ರದ ಹೊತ್ತಿಗೆ ನೀಡುವುದಾಗಿ ಅವರು ತಿಳಿಸಿದರು.

ಇಷ್ಟೊಂದು ಜನ ಸಿಬ್ಬಂದಿ ಏಕಕಾಲಕ್ಕೆ ಒಂದು ವಿಭಾಗದಲ್ಲಿ ಗೈರು ಹಾಜರಾಗಿದ್ದರೂ ದೈನಂದಿನ ವ್ಯವಸ್ಥೆಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆಯಾ­ಗಿಲ್ಲ, ಕೆಲಸದ ಒತ್ತಡ ನೋಡಿಕೊಂಡು ಸಿಬ್ಬಂದಿಗೆ ಆಯಾ ಶಾಖಾಧಿಕಾರಿಗಳು ರಜೆ ಮಂಜೂರು ಮಾಡುವ ಅವಕಾಶವಿರುವುದರಿಂದ ಇದು ಸಾಮೂ­ಹಿಕ ರಜೆ ನಿಯಮ ಉಲ್ಲಂಘನೆ ಅಲ್ಲವೆಂದರು.

ಅಷ್ಟಕ್ಕೂ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿರುವ ಸಿಬ್ಬಂದಿ ಮೇಲಾಧಿಕಾರಿಗಳಿಗೆ ವೈಯಕ್ತಿಕ ಕಾರಣದ ನೆಪ ಹೇಳಿದ್ದರೂ ಕೂಡ  ವಾಸ್ತವದಲ್ಲಿ ಇವರೆಲ್ಲ ಸೇರಿಕೊಂಡು ಬ್ಯಾಕ್‌ಲಾಗ್ ಹುದ್ದೆಗಳಿಗೆ ಬಡ್ತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು  ಖಾಸಗಿ ಬಸ್‌ವೊಂದರ ಮೂಲಕ ಬೆಂಗಳೂರಿಗೆ ನಿನ್ನೆಯಷ್ಟೇ ತೆರಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT