ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ ಕಚೇರಿಗೆ ಮುತ್ತಿಗೆ

Last Updated 9 ಅಕ್ಟೋಬರ್ 2012, 10:35 IST
ಅಕ್ಷರ ಗಾತ್ರ

ಯಲ್ಲಾಪುರ: ರಾಜ್ಯದ ಬಿಜೆಪಿ ಸರ್ಕಾರರ ವಿರುದ್ಧ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿಯ ಹೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಸಮರ್ಪಕ ವಿದ್ಯುತ್ ಪೂರೈಕೆ, ಕೆ.ಎಸ್.ಆರ್.ಟಿ.ಸಿ ಅವ್ಯವಸ್ಥೆ, ಬಸ್ ದರ ಏರಿಕೆ, ಪಡಿತರ ಚೀಟಿ ಮುಂತಾದ ದಾಖಲೆಪತ್ರಗಳ ಪೂರೈಕೆಯ ವಿಳಂಬ, ಅಸಮರ್ಪಕ ಪುಸ್ತಕಗಳ ಪೂರೈಕೆ ಅರಣ್ಯ ಅತಿಕ್ರಮಣ ಒಕ್ಕಲೆಬ್ಬಿಸುವ ಕೆಲಸ ಸರ್ಕಾರ ಕೈ ಬಿಡಬೇಕು ಎಂದು ಆರೋಪಿಸಿದರು.

ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.
ಎಇಇ ನಾರಾಯಣ ನರ್ತಿ ಸಿಬ್ಬಂದಿ ಕೊರತೆ ಹಾಗೂ ವಿದ್ಯುತ್ ಕಂಬ ಇನ್ನಿತರ ಸಾಮಗ್ರಿ ಕೊರತೆಯಿಂದಾಗಿ ಗ್ರಾಮೀಣ ಹಾಗೂ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯದಲ್ಲಿ ಸಮಸ್ಯೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ  ಪ್ರಯತ್ನಿಸಲಾಗುವುದು  ಎಂದು ಪ್ರತಿಭಟನಾಕಾರರಿಗೆ ಹೇಳಿದರು.

ಧುರೀಣರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ,  ಶಿವರಾಮ ಹೆಬ್ಬಾರ,  ಪ್ರಮೋದ ಹೆಗಡೆ, ಪ್ರೇಮಾನಂದ ನಾಯಕ, ಲಾರೆನ್ಸ್ ಸಿದ್ದಿ, ಉಲ್ಲಾಸ ಶಾನಭಾಗ, ನಜೀರ್ ಸಾಬ್, ಬಿಸಿಸಿ ಅಧ್ಯಕ್ಷ ಡಿ.ಎನ್.ಗಾಂವ್ಕರ್  ಮಾತನಾಡಿದರು.

ಎಂ.ಆರ್. ಹೆಗಡೆ ತಾರೆಹಳ್ಳಿ, ವರದಾ ಹೆಗಡೆ, ಆರ್.ಜಿ. ಹೆಗಡೆ ಬೆದೆಹಕ್ಲು, ಪುಷ್ಪಾ ನಾಯ್ಕ, ಟಿ.ಸಿ.ಗಾಂವಕರ್, ಆರ್.ಜಿ.ಹೆಗಡೆ, ಸುನಂದಾ ದಾಸ, ನರಸಿಂಹ ನಾಯ್ಕ, ವಿ.ಶರ್ಮಾ ಭಟ್ಟ,  ಆರ್.ಎಸ್.ಭಟ್, ಡಿ.ಟಿ.ಹೆಗಡೆ, ತಿಮ್ಮಣ್ಣ ಭಾಗವತ, ವಾಸುದೇವ ಮಾಪ್ಸೇಕರ್, ಸೂರ್ಯನಾರಾಯಣ ಮಾಳಕೊಪ್ಪ, ಶಿವರಾಮ ಮಡಿವಾಳ, ಆನಂದರಾಯ ಗೋಳಸಂಗಿ, ಮಂಜುನಾಥ ರಾಯ್ಕರ್, ನಿತಿನ್ ರಾಯ್ಕರ, ಸೀತಾರಾಮ ನಾಯ್ಕ, ಪುಠ್ಠು ಗೌಡ, ಸದಾನಂದ ಭಟ್ಟ ಮಲವಳ್ಳಿ, ವಿಶ್ವನಾಥ ಘಟ್ಟಿ, ಗೀತಾ ಸಿದ್ದಿ, ನಾಗರಾಜ ಅಂಕೋಲೇಕರ   ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT