ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೈನುಗಾರಿಕೆ ತರಬೇತಿ ಆಯೋಜಿಸಲು ಕ್ರಮ'

Last Updated 20 ಜುಲೈ 2013, 6:29 IST
ಅಕ್ಷರ ಗಾತ್ರ

ಯಳಂದೂರು: ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ಇನ್ನಷ್ಟು ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗುಂಬಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಅಧ್ಯಕ್ಷೆ ಸುರೇಖ ತಿಳಿಸಿದರು.

ಗುಂಬಳ್ಳಿ ಹಾಲು ಉತ್ಪಾಕರ ಮಹಿಳಾ ಸಹಕಾರ ಸಂಘ ಹಾಗೂ ಮೈಸೂರಿನ ಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆಯ ವತಿಯಿಂದ  ಗುಂಬಳ್ಳಿಯ ಗ್ರಾಮ ಪಂಚಾ ಯಿತಿ ಆವರಣದಲ್ಲಿ ಶುಕ್ರವಾರ ಏರ್ಪ ಡಿಸಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಹೈನುಗಾರಿಕೆ ತರಬೇತಿ ಆಯೋಜಿಸಿ ಗುಣಮಟ್ಟದ ಹಾಲು ಪೂರೈಸುವ ಕುರಿತು ಮಾಹಿತಿ ಒದಗಿಸಲಾಗುವುದು ಎಂದರು.

ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು.  ಕಣ್ಣಿನ ಪೊರೆ ಚಿಕಿತ್ಸೆ ಅಗತ್ಯ ಇರುವವರನ್ನು ಮೈಸೂರಿಗೆ ಕರೆದೊಯ್ಯಲಾಯಿತು.  ಗ್ರಾ.ಪಂ. ಸದಸ್ಯರಾದ ಸಿ. ಮಧು, ನಾಗಯ್ಯ, ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಡಾ. ಶರತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT