ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ ಮೇಲೆ ತಣ್ಣೀರು ಬಟ್ಟೆ!

Last Updated 31 ಮೇ 2012, 18:50 IST
ಅಕ್ಷರ ಗಾತ್ರ

ಬೆಂಗಳೂರು:  ಭಾರತ್ ಬಂದ್‌ನಿಂದ ನೇರ ಪರಿಣಾಮ ಉಂಟಾಗಿದ್ದು ಕೂಲಿ ಕಾರ್ಮಿಕರ ಮೇಲೆ. ದಿನವೂ ಕೂಲಿ ಮಾಡಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದ ಜನರಿಗೆ ಗುರುವಾರ ಯಾವ ಕೂಲಿಯೂ ದೊರಕದೆ ಹೊಟ್ಟೆಗೆ ತಣ್ಣೀರು ಬಟ್ಟೆ ಬೀಳುವಂತಾಯಿತು.

ಮೆಜೆಸ್ಟಿಕ್, ಗಾಂಧಿನಗರ, ಆನಂದರಾವ್ ವೃತ್ತಗಳಲ್ಲಿ ಕೂಲಿ ಕೇಳಿಕೊಂಡು ಬಂದಿದ್ದ ಜನಗಳಿಗೆ ಇಂದು ಕೂಲಿಯು ದೊರಕದೆ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ಸಿಟಿ ನಿಲ್ದಾಣದಲ್ಲಿ ಯಾವ ಕೆಲಸವಿಲ್ಲದೆ `ಇವತ್ತಿನ ದಿನದ ಕಥೆ ಏನಪ್ಪ~ ಎಂದು ತಲೆ ಮೇಲೆ ಕೈಹೊ3್ತು ಕುಳಿತ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.

ನಗರದ ಎಲ್ಲ ಬಸ್ಸು ನಿಲ್ದಾಣಗಳಲ್ಲಿ ಕಚೇರಿ ಅಥವಾ ಇನ್ನಿತರೆ ಕಾರ್ಯಗಳಿಗೆಂದು ಬೆಳಿಗ್ಗೆ 7 ಗಂಟೆಗೆ ಬಸ್ಸು ನಿಲ್ದಾಣಗಳಲ್ಲಿ ಕಾಯುತ್ತಿದ್ದರು. ಬೆಳಿಗ್ಗೆ 9 ಗಂಟೆಯಾದರೂ ಬಸ್ಸು ಬಂದಿರಲಿಲ್ಲ. ಇನ್ನು ಬಸ್ಸು ಬರುವುದಿಲ್ಲವೆಂದು ಖಾತ್ರಿ ಮಾಡಿಕೊಂಡು ಕಚೇರಿಗೆ ರಜೆ ಹಾಕಿದರಾಯಿತು ಎಂದು ಮಾತನಾಡಿಕೊಳ್ಳುತ್ತ ಮನೆಯ ದಾರಿ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT