ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೊಸ ಬ್ಯಾಂಕ್ ಆರಂಭ ಸುಲಭವಲ್ಲ'

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಹೊಸ ಬ್ಯಾಂಕ್ ಆರಂಭ ಈ ಬಾರಿ ಅಷ್ಟು ಸುಲಭವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಮಂಗಳವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, 1993-94ರಲ್ಲಿ ಹೊಸದಾಗಿ ಬ್ಯಾಂಕ್ ಸ್ಥಾಪಿಸುವುದು ಕಷ್ಟದ್ದಾಗಿರಲಿಲ್ಲ. ಈಗ ಬ್ಯಾಂಕ್ ಸಂಸ್ಥಾಪನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಪೆನಿಗಳು, ಹಣಕಾಸು ಸೇವಾ ಕ್ಷೇತ್ರದ ಸಂಸ್ಥೆಗಳು ಆಸಕ್ತಿ ವಹಿಸಿ ಸಾಲುಗಟ್ಟಿರುವುದರಿಂದ ಆ ಕೆಲಸ ಸರಳವಾಗಿರದು ಎಂದರು.

ಖಾಸಗಿ ಬ್ಯಾಂಕ್‌ಗಳೂ ಸರ್ಕಾರಿ ಬ್ಯಾಂಕ್‌ಗಳಂತೆಯೇ `ಆದ್ಯತಾ ವಲಯ'ಕ್ಕೆ ನಿಗದಿತ ಪ್ರಮಾಣದಲ್ಲಿ ಸಾಲ ನೀಡಲೇಬೇಕಿದೆ. ಅಲ್ಲದೆ, ಬ್ಯಾಂಕಿಂಗ್ ಚಟುವಟಿಕೆಯಿಂದ ದೂರವಾಗಿರುವ ಗ್ರಾಮೀಣ ಭಾಗದಲ್ಲಿ ಶೇ 25ರಷ್ಟು ಶಾಖೆ ತೆರೆಯಬೇಕಿದೆ. 2ದಶಕ ಹಿಂದಿನ ಪರಿಸ್ಥಿತಿ ಈಗಿಲ್ಲ. ಹೊಸದಾಗಿ ಬ್ಯಾಂಕ್ ಆರಂಭಿಸುವುದು ಸಲೀಸು ಕೆಲಸವಾಗಿ ಇರದು ಎಂದು ಗಮನ ಸೆಳೆದರು.

1990ರ ದಶಕದಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಐಡಿಬಿಐ ಸೇರಿದಂತೆ 10 ಖಾಸಗಿ ಸಂಸ್ಥೆಗಳಿಗೆ ಬ್ಯಾಂಕಿಂಗ್ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗಿತ್ತು. 2002-03ರಲ್ಲಿ ಎರಡು ಖಾಸಗಿ ಬ್ಯಾಂಕ್ ಆರಂಭಕ್ಕೆ ಅವಕಾಶ ನೀಡಿದ್ದೇ ಕೊನೆ. ನಂತರದಲ್ಲಿ ಈಗಷ್ಟೇ ಹೊಸ ಬ್ಯಾಂಕ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ ಎಂದು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT