ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸ್ಕೀಮಿನ ಇಡೀ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ರದ್ದು

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹೊಸ ಸ್ಕೀಮಿನ ಇಡೀ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ರದ್ದು
ಬೆಂಗಳೂರು, ಏ. 2 - ಕಳೆದ 22 ರಂದು ರಾಜ್ಯದಲ್ಲಿ ಆರಂಭವಾದ ಹೊಸ ಸ್ಕೀಮಿನ ಇಡೀ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
ಹೊಸದಾಗಿ ಪರೀಕ್ಷೆಗಳನ್ನು ಇನ್ನು ಸುಮಾರು ಒಂದು ತಿಂಗಳೊಳಗಾಗಿ ನಡೆಸಲಾಗುವುದೆಂದೂ ಸಭೆಗೆ ತಿಳಿಸಿದರು.

ಪ್ರಶ್ನೆ ಪತ್ರಿಕೆ ಕುರಿತು ಪುತ್ರಿಯ ವರದಿ
ಬೆಂಗಳೂರು, ಏ. 2 - ಪ್ರಶ್ನೆ ಪತ್ರಿಕೆಗಳು ಬಯಲಾಗಿವೆಯೆಂಬ ಕಾರಣದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ರದ್ದುಗೊಳಿಸುವ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರ ತೀರ್ಮಾನಕ್ಕೆ ಅನೇಕ ವರದಿಗಳು ಆಧಾರ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತಿರುವ ಅವರ ಪುತ್ರಿಯೂ `ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿವೆ' ಎಂದು ತಂದೆಗೆ ವರದಿ ಮಾಡಿದಳಂತೆ.

ಚಂದ್ರಗ್ರಹಕ್ಕೆ ರಷ್ಯದ ನಾಲ್ಕನೆ ರಾಕೆಟ್ ಪ್ರಯೋಗ
ಮಾಸ್ಕೊ, ಏ. 2 - ರಷ್ಯವು ಇಂದು ಚಂದ್ರಗ್ರಹದತ್ತ ತನ್ನ ನಾಲ್ಕನೆಯ ಸ್ವಯಂಚಾಲಿತ ರಾಕೆಟ್ ಅನ್ನು ಯಶಸ್ವಿಯಾಗಿ ಪ್ರಯೋಗಿಸಿತು.ಭೂಮಿಯ ಸುತ್ತ ತಿರುಗುವಂತೆ ಅಂತರಿಕ್ಷ ಪಥಕ್ಕೆ ಹಾರಿಸಿದ ಉಪಗ್ರಹವೊಂದರ ಮೂಲಕ ಈ ರಾಕೆಟ್ ಅನ್ನು ಚಂದ್ರಗ್ರಹಕ್ಕೆ ಹಾರಿಸಲಾಯಿತು.ರಾಕೆಟ್ ಮೂರೂವರೆ ದಿನಗಳಲ್ಲಿ ಚಂದ್ರಗ್ರಹವನ್ನು ಸಮೀಪಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT