ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ವೈದ್ಯರ ಕೊರತೆ, ರೋಗಿಗಳ ಪರದಾಟ

Last Updated 4 ಜುಲೈ 2013, 5:44 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚು ಇದೆ. ಇದರ ಪರಿಣಾಮ ರೋಗಿಗಳಿಗೆ ಸಕಾಲಕ್ಕೆ ವೈದ್ಯರ ಸೇವೆ ಸಿಗುವುದು ಕಷ್ಟಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯು ಆರಂಭವಾಗಿ ಅನೇಕ ವರ್ಷಗಳು ಕಳೆದಿವೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ 11 ಜನ ವೈದ್ಯರ ಅಗತ್ಯವಿದೆ. ಆದರೆ, ಕೇವಲ 4  ವೈದ್ಯರು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟ್ಯಂತರ ಹಣ ಖರ್ಚು ಮಾಡಿ ಸ್ಥಾಪಿಸಿರುವ ನೂತನ ಸಾರ್ವಜನಿಕ ಆಸ್ಪತ್ರೆ ನೆಪಮಾತ್ರಕ್ಕೆ ಇರುವಂತಾಗಿದೆ. ಇಲ್ಲಿ ಯಾವುದೇ ತುರ್ತು ಚಿಕಿತ್ಸಾ ಸಾಧನಗಳ ಲಭ್ಯತೆ ಇಲ್ಲದೇ ಸಣ್ಣ-ಪುಟ್ಟ ಅಪಘಾತ ಹಾಗೂ ರೋಗಗಳಿಗೂ ಬಡ ರೋಗಿಗಳು ದೂರದ ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಹೋಗುವಂತಹ ಸ್ಥಿತಿ ಒದಗಿದೆ ಎಂದು ನೊಂದ ಅನೇಕ ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಅಗತ್ಯ ವೈದ್ಯರ ನೇಮಕಾತಿ ಜತೆಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯ ಸೌಲಭ್ಯ, ಒಳರೋಗಿಗಳ ವಿಭಾಗ, ಪ್ರಯೋಗಾಲಯ, ತುರ್ತು ಚಿಕಿತ್ಸಾ ಘಟಕ, ಔಷಧಿ ದಾಸ್ತಾನು, ಹೆರಿಗೆ ವಾರ್ಡ್ ಹಾಗೂ  ಅಗತ್ಯ  ತುರ್ತು ಸೇವಾ ಯಂತ್ರೋಪಕರಣಗಳನ್ನು ಒದಗಿಸಿ, ರೋಗಿಗಳ ಹಿತ ಕಾಪಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT