ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿ ಏಂಜೆಲ್ಸ್ ಶಾಲೆಗೆ ಸಮಗ್ರ ಪ್ರಶಸ್ತಿ

ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವಾರಾಂತ್ಯ ಕೂಟ: ಕಾವ್ಯಾ, ರೋಹಿತಾ, ಆಂಡ್ರಿಯಾ ಚಿನ್ನದ ಸಾಧನೆ
Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲಾ ತಂಡದವರು `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪು ಪ್ರಾಯೋಜಿತ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ  24ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್ ಕೂಟದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.

ಈ ಶಾಲಾ ತಂಡದವರು ನಾಲ್ಕು ವಾರಾಂತ್ಯ ಸ್ಪರ್ಧೆಗಳಿಂದ ಒಟ್ಟು 4590 ಪಾಯಿಂಟ್ಸ್ ಕಲೆಹಾಕಿ ಈ ಸಾಧನೆ ಮಾಡಿದರು. ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್ (2460 ಪಾಯಿಂಟ್) `ರನ್ನರ್ ಅಪ್' ಸ್ಥಾನ ಪಡೆಯಿತು. ಕೂಟದ ಅಂತಿಮ ವಾರ ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪಿ.ರೋಹಿತಾ ಚೌದರಿ, ಲೆಗೆಸಿ ಸ್ಕೂಲ್‌ನ ಆಂಡ್ರಿಯಾ ಪಿಂಟೊ ಹಾಗೂ ಕ್ಲಾರೆನ್ಸ್ ಹೈಸ್ಕೂಲ್‌ನ ಕಾವ್ಯಾ ಆ್ಯನಿ ಜೇಕಬ್ ಕ್ರಮವಾಗಿ 12 ಹಾಗೂ 15 ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದಲ್ಲಿ ತಲಾ ಎರಡು ಚಿನ್ನದ ಪದಕ ಗ್ದ್ದೆದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಕೂಟದಲ್ಲಿ ರೋಹಿತಾ ಟ್ರಿಪಲ್ ಜಂಪ್ ಮತ್ತು ಹೈಜಂಪ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಆಂಡ್ರಿಯಾ 100 ಮೀ. ಓಟ ಮತ್ತು ಲಾಂಗ್ ಜಂಪ್‌ನಲ್ಲಿ ಮೊದಲ ಸ್ಥಾನ ಪಡೆದರು.
15 ವರ್ಷ ವಯಸ್ಸಿನೊಳಗಿನ ವಿಭಾಗದಲ್ಲಿ ಕಾವ್ಯಾ ಲಾಂಗ್ ಜಂಪ್ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಸಾಧನೆ ಮಾಡಿದರು. ಸೇಂಟ್ ಯಶ್ ಪಬ್ಲಿಕ್ ಸ್ಕೂಲ್‌ನ ಎ.ಪದ್ಮಾವತಿ 800 ಮೀ. ಹಾಗೂ 1500 ಮೀ.ನಲ್ಲಿ ಅಗ್ರಸ್ಥಾನ ಗಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಸಹನಾ ಕುಮಾರಿ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 'ನನ್ನ ಶಾಲಾದಿನಗಳಲ್ಲಿ ಮಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂತಹ ಪ್ರೋತ್ಸಾಹ ಇರಲೇ ಇಲ್ಲ. ಇಲ್ಲಿ ನಾಲ್ಕು ವಾರಗಳ ಕಾಲ ಮಕ್ಕಳನ್ನು ಈ ಸ್ಪರ್ಧೆಗಳಿಗೆ ಕರೆ ತರುವ ಪೋಷಕರ ಉತ್ಸಾಹ ಕೂಡಾ ಶ್ಲಾಘನೀಯ'ಎಂದರು.

ಎಳವೆಯಲ್ಲಿ ತಮಗೆ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಸಿಕ್ಕಿದ್ದರೆ ತಾವು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿತ್ತೇನೋ ಎಂದೂ ಅವರು ನುಡಿದರು. ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಕಾಲು ಶತಮಾನದ ಪರಂಪರೆಯ ಬಗ್ಗೆ ಮಾತನಾಡಿದ ಕಾರ್ಯದರ್ಶಿ ಅನಂತರಾಜು, `ಈ ವರ್ಷ ನಗರದ ಬಹುತೇಕ ಎಲ್ಲಾ ಪ್ರಮುಖ ಶಾಲೆಗಳ ಆಯ್ದ ಸುಮಾರು 800ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಪಾಲ್ಗೊಂಡಿದ್ದರು' ಎಂದರು.

`ಮೊದಲ ವಾರದ ನಂತರ ಮೈದಾನದಲ್ಲಿ ಪ್ರದರ್ಶಿಸುತ್ತಿದ್ದ ಪಾಯಿಂಟ್ ಪಟ್ಟಿಯನ್ನು ಅತೀವ ಆಸಕ್ತಿಯಿಂದ ಗಮನಿಸುತ್ತಿದ್ದ ಮಕ್ಕಳು ತಮ್ಮ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲು ತೀವ್ರ ಪೈಪೋಟಿಗೆ ಇಳಿಯುತ್ತಿದ್ದುದು ಕಂಡು ಬಂದಿತು' ಎಂದು ಅವರು ಹೇಳಿದರು.ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಅಧ್ಯಕ್ಷ       ಕೆ.ಎನ್.ಶಾಂತಕುಮಾರ್ ಉಪಸ್ಥಿತರಿದ್ದರು.

ಬಾಲಕಿಯರ ವಿಭಾಗದ ಫಲಿತಾಂಶ ಇಂತಿದೆ.
12 ವರ್ಷದೊಳಗಿನವರು: 100 ಮೀ. ಓಟ: ಆಂಡ್ರಿಯ ಪಿಂಟೊ (ಲೆಗೆಸಿ ಸ್ಕೂಲ್; ಕಾಲ: 14.4ಸೆ.)-1, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಹೈಸ್ಕೂಲ್)-2, ಅಂಶುಲಾ ಪ್ರಸಾದ್ (ಬೆಥನಿ ಹೈಸ್ಕೂಲ್)-3; 800ಮೀ. ಓಟ: ಸಂಜನಾ ಎ. ಹೊಸಕೋಟೆ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್; 2 ನಿ.56.2 ಸೆ.)-1, ಜಿ.ತೇಜಸ್ವಿನಿ (ಔಟ್ರಿಚ್ ಇಂಟರ್‌ನ್ಯಾಶನಲ್ ಸ್ಕೂಲ್)-2, ಅಶ್ವಿನಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-3; 1,500ಮೀ. ಓಟ: ತೇಜಸ್ವಿನಿ (ಔಟ್ರಿಚ್ ಇಂಟರ್‌ನ್ಯಾಶನಲ್ ಸ್ಕೂಲ್; ಕಾಲ: 6ನಿ.14.2ಸೆ.)-1, ಸುಮೇದಾ ಪೂಜಾ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್-2, ಬಿ.ಅರ್ಶಿತಾ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3; 60 ಮೀ. ಹರ್ಡಲ್ಸ್: ಕೃತಿಕಾ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ; ಕಾಲ: 13.7ಸೆ.)-1, ಅಶ್ಲೇಶ್ ಹೊಳ್ಳಾ (ವಿದ್ಯಾನಿಕೇತನಾ ಸ್ಕೂಲ್)-2, ಎಸ್.ಸ್ವಾತಿ ಶರವಣ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3; ಲಾಂಗ್‌ಜಂಪ್: ಆಂಡ್ರಿಯಾ ಪಿಂಟೊ (ಲೆಗೆಸಿ ಸ್ಕೂಲು; ದೂರ: 4.11ಮೀ.)-1, ವಿ.ನಿಹಾರಿಕಾ (ಬೆಥನಿ ಹೈಸ್ಕೂಲ್)-2, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಬಾಲಕಿಯರ ಹೈಸ್ಕೂಲ್)-3; ಟ್ರಿಪಲ್ ಜಂಪ್: ಪಿ.ರೋಹಿತಾ ಚೌದರಿ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್; ದೂರ: 9.09ಮೀ.)-1, ವಿ.ನಿಹಾರಿಕಾ -2, ಸಂಜನಾ ಎ.ಹೊಸಕೋಟೆ-3; ಹೈಜಂಪ್: ಪಿ.ರೋಹಿತಾ ಚೌಧರಿ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್; ಎತ್ತರ: 1.13ಮೀ.)-1, ಎಸ್.ಭಾವನಾ (ಡೆಕ್ಕನ್ ಇಂಟರ್ ನ್ಯಾಶನಲ್ ಸ್ಕೂಲ್)-2, ಶ್ರುತಿ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3; ಷಾಟ್‌ಪಟ್: ಮೇಘಾರಾಮ ಪ್ರಿಯನ್ (ವಿದ್ಯಾನಿಕೇತನಾ ಸ್ಕೂಲ್; ದೂರ: 5.78ಮೀ.)-1, ಡಿ.ರಶ್ಮಿ (ಮಿತ್ರಾಲಯ ಬಾಲಕಿಯರ ಹೈಸ್ಕೂಲು)-2, ಫೈಜಾ ಫಹ್ಮಾನ್ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3.
15 ವರ್ಷದೊಳಗಿನವರು: 100 ಮೀ. ಓಟ: ಇಳಾ ಮಾನ್ಯ ನವೀನ್ (ಸೇಕ್ರೆಡ್ ಹಾರ್ಟ್ ಬಾಲಕಿಯರ ಹೈಸ್ಕೂಲ್; ಕಾಲ: 13.6 ಸೆ.)-1, ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್)-2, ಎಂ.ಬಿ.ಮುತ್ತಮ್ಮ (ಸೇಕ್ರೆಡ್ ಹಾರ್ಟ್ ಬಾಲಕಿಯರ ಹೈಸ್ಕೂಲ್)-3; 800ಮೀ. ಓಟ: ಎ.ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್; ಕಾಲ: 2 ನಿ.47.2ಸೆ.)-1, ಜೆಶ್ರಿತಾ ಕುಮಾರ್ (ಕೇಂದ್ರೀಯ ವಿದ್ಯಾಲಯ)-2, ತಾನೀಷಾ ಪಾಂಚಾಲ್ (ವಿದ್ಯಾನಿಕೇತನಾ ಸ್ಕೂಲ್)-3; 1,500ಮೀ. ಓಟ: ಎ.ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್; ಕಾಲ: 5 ನಿ.50.4ಸೆ.)-1, ಎಸ್.ನಿಖಿತಾ (ಆರ್.ಟಿ.ನಗರ ಪಬ್ಲಿಕ್ ಸ್ಕೂಲ್)-2, ತಾನಿಷಾ ಪಾಂಚಾಲ್ (ವಿದ್ಯಾನಿಕೇತನಾ ಸ್ಕೂಲ್)-3; 100ಮೀ. ಹರ್ಡಲ್ಸ್: ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲ್; ಕಾಲ: 18.3ಸೆ.)-1, ಟೂಮಿ ವೈಷ್ಣವಿ -2, ರೇಷ್ಮಾ ರಾಯ್ (ಇಬ್ಬರೂ ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್)-3; ಲಾಂಗ್‌ಜಂಪ್: ಕಾವ್ಯಾ ಆ್ಯನಿ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್; ದೂರ: 4.98 ಮೀ.)-1, ತಾನೀಷಾ ನಾಯ್ಕ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್)-2, ತಾನಿಷಾ (ಬೆಥನಿ ಹೈಸ್ಕೂಲ್)-3; ಟ್ರಿಪಲ್‌ಜಂಪ್: ಕಾವ್ಯಾ ಆ್ಯನಿ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್; ದೂರ: 10.19ಮೀ.)-1, ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲ್)-2, ತಾನಿಷಾ (ಬೆಥನಿ ಹೈಸ್ಕೂಲ್)-3; ಹೈಜಂಪ್: ಜಿ.ಅನ್ನಪೂರ್ಣ (ಸಿಎಂಆರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್; ಎತ್ತರ: 1.42 ಮೀ.)-1

, ಸಿ.ಧೃತಿ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-2, ಪಿ.ಪಿ. ಹರ್ಷಿಣಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್)-3; ಷಾಟ್‌ಪಟ್: ಸ್ಮಯಾನಾ ಕಾಮತ್ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್; ಕಾಲ: 8.41ಮೀ.)-1, ಅಲಿಯಾ ತನ್ವೀರ್ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್)-2, ಆರ್.ಸಹನಾ (ನಿರ್ಮಲ ರಾಣಿ ಆಂಗ್ಲ ಪ್ರಾಥಮಿಕ ಶಾಲೆ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT