ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ಗೆ ಅಗ್ರಸ್ಥಾನ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಬುಡಾಪೆಸ್ಟ್ (ಪಿಟಿಐ/ ರಾಯಿಟರ್ಸ್‌): ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಭಾನುವಾರ ನಡೆದ ಹಂಗರಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ ಗೆದ್ದುಕೊಂಡರು.

ಬ್ರಿಟನ್‌ನ ಚಾಲಕನಿಗೆ ಪ್ರಸಕ್ತ ಋತುವಿನಲ್ಲಿ ದೊರೆತ ಮೊದಲ ಗೆಲುವು ಇದಾಗಿದೆ. `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸಿದ್ದ ಹ್ಯಾಮ್ಟಿಲನ್ 70 ಲ್ಯಾಪ್‌ಗಳ ಸ್ಪರ್ಧೆ (ಒಟ್ಟು 306 ಕಿ.ಮೀ ದೂರ) ಪೂರೈಸಲು ಒಂದು ಗಂಟೆ 42 ನಿಮಿಷ 29 ಸೆಕೆಂಡ್‌ಗಳನ್ನು ತೆಗೆದುಕೊಂಡರು.

ಇದಕ್ಕಿಂತ 11 ಸೆಕೆಂಡ್‌ಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡ ರೆನಾಲ್ಟ್ ತಂಡದ ಕಿಮಿ ರೈಕೊನೆನ್ ಎರಡನೇ ಸ್ಥಾನ ಪಡೆದರು. ವಿಶ್ವಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಹ್ಯಾಮಿಲ್ಟನ್‌ಗೆ ವೃತ್ತಿಜೀವನದಲ್ಲಿ ದೊರೆತ 22ನೇ ಗೆಲುವು ಇದು.

ಪ್ರಸಕ್ತ ಋತುವಿನ 10 ರೇಸ್‌ಗಳು ಕೊನೆಗೊಂಡಿದ್ದು, ರೆಡ್‌ಬುಲ್ ತಂಡದ ವೆಟೆಲ್ 172 ಪಾಯಿಂಟ್‌ಗಳೊಂದಿಗೆ ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಲೋಟಸ್ ತಂಡದ ಕಿಮಿ ರೈಕೊನೆನ್ (134) ಮತ್ತು ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ (133) ಬಳಿಕದ ಸ್ಥಾನಗಳಲ್ಲಿದ್ದಾರೆ.
ಫೋರ್ಸ್ ಇಂಡಿಯಾಕ್ಕೆ ನಿರಾಸೆ: ಸಹಾರಾ ಫೋರ್ಸ್ ಇಂಡಿಯಾ ತಂಡ ಈ ರೇಸ್‌ನಲ್ಲಿ ಪಾಯಿಂಟ್ ಗೆಲ್ಲುವಲ್ಲಿ ವಿಫಲವಾಯಿತು. ಈ ತಂಡದ ಪೌಲ್ ಡಿ ರೆಸ್ಟಾ ಅವರು 18ನೇ ಸ್ಥಾನ ಪಡೆದರು. ಇನ್ನೊಬ್ಬ ಚಾಲಕ ಅಡ್ರಿಯಾನ್ ಸುಟಿಲ್ ರೇಸ್ ಪೂರ್ಣಗೊಳಿಸುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT