ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರ ಚಿಕಿತ್ಸೆಗೆ ₨ 35 ಸಾವಿರ ಸಹಾಯಧನ’

Last Updated 4 ಡಿಸೆಂಬರ್ 2013, 8:55 IST
ಅಕ್ಷರ ಗಾತ್ರ

ಬಾಗಲಕೋಟೆ: ಅಂಗವಿಕಲರ ಚಿಕಿತ್ಸೆಗೆ ಸರ್ಕಾರ ₨ 35 ಸಾವಿರದ ವರೆಗೆ ಸಹಾಯಧನ ನೀಡುತ್ತಿದ್ದು, ಅಗತ್ಯವುಳ್ಳ ಅಂಗವಿಕಲರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗ ರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.

ಅಂಗವಿಕಲತೆ ಹೊಂದಿರುವ ಎಪಿಎಲ್ ಕಾರ್ಡ್‌ದಾರರಿಗೂ ಸರ್ಕಾ ರದ ಸೌಲಭ್ಯಗಳು ನೀಡಲಾಗುತ್ತಿದ್ದು,  ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸುವಲ್ಲಿ ಶ್ರಮಿಸುವುದರ ಜೊತೆಗೆ ಅವರನ್ನು ಮುಖ್ಯ ವಾಹಿನಿಗೆ ತರಬೇಕು ಎಂದರು.

ಅಂಗವಿಕಲರು ಜೀವನದಲ್ಲಿ ಜಿಗುಪ್ಸೆ ಗೊಳ್ಳದೇ ಸರ್ಕಾರ ನೀಡುವ ಸೌಲಭ್ಯ ಗಳನ್ನು ಪಡೆದುಕೊಂಡು ಯಶಸ್ವಿ ಜೀವನ ನಡೆಸಬೇಕು, ಅಂಗವಿಕಲರು ಜೀವನದಲ್ಲಿ ಏನೂ ಸಾಧಿಸಲು ಸಾಧ್ಯ ವಿಲ್ಲ ಎಂದು ಹಿಂಜರಿಯದೇ ಛಲ ಬೆಳೆಸಿ ಕೊಂಡು ಗುರಿ ಮುಟ್ಟಬೇಕು ಎಂದರು.
ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಅಡ ಗಿರುವ ಹಾಗೆ ಅಂಗವಿಕಲರು, ಕಿವುಡರು ಮತ್ತು ಮೂಕರಲ್ಲೂ ಒಂದಿಲ್ಲವೊಂದು ಶಕ್ತಿ ಇದ್ದು ಪ್ರಯತ್ನದಿಂದ ಫಲ ಪಡೆಯಬೇಕು ಎಂದು ಹೇಳಿದರು.

ಉದ್ಘಾಟನೆ: ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ವಿ.ಜೋಶಿ, ಅಂಗವಿಕಲರನ್ನು ತಿರಸ್ಕಾರ ಭಾವದಿಂದ ನೋಡದೇ ಪ್ರೀತಿ, ವಿಶ್ವಾಸದಿಂದ ಕಾಣ ಬೇಕು. ಇಲಾಖೆಗಳು ಕೊಡಮಾಡುವ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳ ಬೇಕು ಎಂದರು.

ವಿಡಿಯೋ ಪ್ರದರ್ಶನ: ಅಂಗವಿಕಲ ರಾಗಿಯೂ ಅಭೂತಪೂರ್ವ ಸಾಧನೆ ಮಾಡಿದ ಸಾಧಕರ ಸಾಧನೆಯ ಚಿತ್ರದ ತುಣುಕುಗಳನ್ನು ಪರದೆಯ ಮೇಲೆ ಬಿತ್ತರಿಸಲಾಯಿತು. 

ವೇಷಭೂಷಣ: ವಿವಿಧ ಶಾಲೆಯ ಅಂಧ ವಿದ್ಯಾರ್ಥಿಗಳು ಭಕ್ತ ಕನಕದಾಸ, ಸ್ವಾಮಿ ವಿವೇಕಾನಂದ ಮತ್ತು ಕನ್ನಡಾಂಬೆಯ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.

ವಿತರಣೆ: ಅಂಗವಿಕಲರಿಗೆ ತ್ರಿಚಕ್ರ ವಾಹನ, ವೀಲ್‌ ಚೇರ್ ಹಾಗೂ ಬಗಲ ಬಡಿಗೆಯನ್ನು ವಿತರಿಸಲಾಯಿತು.

ಸನ್ಮಾನ: ಅಂಗವಿಕಲರ ಅಭಿವೃದ್ಧಿ ಗಾಗಿ ಸೇವೆ ಸಲ್ಲಿಸಿದ ಎ.ಎಂ.ಮುಲ್ಲಾ, ಡಿ.ಆರ್.ಪೂಜಾರ, ಉಮಾ ಕಣಕೇರಿ, ಚಿದಾನಂದ ಉಳ್ಳಾಗಡ್ಡಿ, ಯಲ್ಲಪ್ಪ ಸದರಗೋಳ, ಮಲ್ಲಿಕಾರ್ಜುನ ಗಾಣ ಗೇರ ಹಾಗೂ ಶಿರಾಜಸಾಬ್‌ ಸಾವಳಗಿ ಅವರನ್ನು ಇಲಾಖೆ ವತಿಯಿಂದ ಸನ್ಮಾನಿ ಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಿರಿಜಾ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಪಾಟೀಲ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಆರ್.ಎನ್.ತಳವಾರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT