ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಸಿಗಾಗಿ ಸುದ್ದಿ’ ಅಪರಾಧ

Last Updated 21 ಡಿಸೆಂಬರ್ 2013, 11:15 IST
ಅಕ್ಷರ ಗಾತ್ರ

ತಿರುವನಂತಪುರಂ(ಪಿಟಿಐ): ಕಾಸಿಗಾಗಿ ಸುದ್ದಿ ಪ್ರಕಟಣೆ ಅಥವಾ ಪ್ರಸಾರ ಮಾಡುವುದು ಚುನಾವಣಾ ಪ್ರಕ್ರಿಯೆ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿ, ಕಾಸಿಗಾಗಿ ಸುದ್ದಿ ಮಾಡುವುದನ್ನು ಅಪರಾಧ ಎಂದು ಪರಿಗಣಿಸುವಂತೆ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಹೇಳಿದ್ದಾರೆ.

‘ಚುನಾವಣೆಯಲ್ಲಿ ಸುಧಾರಣೆ’ ಕುರಿತ ವಿಚಾರ ಸಂಕಿರಣದಲ್ಲಿ ಶನಿವಾರ ಮಾತನಾಡಿದ ಸಂಪತ್, ಭ್ರಷ್ಟಾಚಾರ ಕಾಸಿಗಾಗಿ ಸುದ್ದಿಯ ಜತೆ ತಳುಕು ಹಾಕಿಕೊಂಡಿದ್ದು, ಮಾಧ್ಯಮಗಳು ಪ್ರತಿಯೊಬ್ಬರ ಮೇಲೆ ಪ್ರಭಾವ ಬೀರುತ್ತವೆ. ಇವು ಜನರ ಮೇಲೆ ಪರಿಣಾಮ ಉಂಟುಮಾಡುವ ಮೂಲಕ ಚುನಾವಣಾ ಪ್ರಕ್ರಿಯೆ ಮೇಲೆ ವ್ಯಾಪಕ ಹಾನಿ ಉಂಟು ಮಾಡುತ್ತವೆ ಎಂದು ನಿಲುವು ವ್ಯಕ್ತಪಡಿಸಿದರು.

‘ಮತ್ತೊಬ್ಬರನ್ನು ತೃಪ್ತಿಪಡಿಸಲು ಹಾಗೂ ತಾವು ಫಲವನ್ನು ಅನುಭವಿಸಲು ಕಾಸಿಗಾಗಿ ಸುದ್ದಿ ಮಾಡುವುದು ಅಪರಾಧ’ ಎಂದು ಅವರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT