ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗತ ವೈಭವ ಮರಳಲಿ’

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಯೋ ಹಾಲ್‌ ವಿಭಾಗದ ವಕೀಲರ ಸಂಘಕ್ಕೆ ತನ್ನದೇ ಆದ ಇತಿಹಾಸ, ವೈಭವ ಹಾಗೂ ಅಸ್ತಿತ್ವ ಇತ್ತು. ಆದರೆ ಆ ಗತ ವೈಭವ ಈಗ ಉಳಿದಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್‌.­ಮಂಜು­ನಾಥ್‌ ಬೇಸರ ವ್ಯಕ್ತಪಡಿಸಿದರು.

ಮೇಯೋ ಹಾಲ್‌ ವಿಭಾಗದಲ್ಲಿ ನವೀಕರಣಗೊಂಡ ವಕೀಲರ ಸಂಘದ ಸಭಾಂಗಣವನ್ನು ಬುಧವಾರ ಉದ್ಘಾ­ಟನೆ ಮಾಡಿ ಮಾತನಾಡಿದ ಅವರು,  ಆ ಗತ ವೈಭವವನ್ನು ಮರು ಸೃಷ್ಟಿ­ಸುವ ಜವಾಬ್ದಾರಿ ಯುವ ವಕೀಲರ ಮೇಲಿದೆ’ ಎಂದರು.

ಹಾಗೆಯೇ ಕೆಲಸದ ವೇಳೆ ಶಿಸ್ತನ್ನು ಕಾಪಾಡಿಕೊಳ್ಳ­ಲಾಗು­ತ್ತಿತ್ತು ಎಂದು ಹಳೇ ನೆನಪು ಮೆಲಕು ಹಾಕಿದರು.

ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಮುನಿಯಪ್ಪ ಮಾತ­ನಾಡಿ, ವಕೀಲರಿಗೆ ನೀಡುವ ಕಲ್ಯಾಣ ನಿಧಿ­ಹಾಗೂ ಪರಿಹಾರ ನಿಧಿ ಹೆಚ್ಚಿಸಲು ಪ್ರಯತ್ನ ನಡೆಸ­ಲಾಗುತ್ತಿದೆ. ಅದರಲ್ಲೂ 4 ಲಕ್ಷ ಇರುವ ಪರಿಹಾರ ನಿಧಿ 7 ಲಕ್ಷಕ್ಕೆ ಏರಿಸಲು ವಕೀಲರ ಪರಿಷತ್ತಿನ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಹಿರಿಯರು ಬಿಟ್ಟು ಹೋದ ಹೆಜ್ಜೆ ಗುರುತನ್ನು ಯುವ ವಕೀ­ಲರು ಪಾಲಿಸುವುದರ ಜೊತೆಗೆ ವೃತ್ತಿ ಗೌರವವನ್ನು ಕಾಪಾಡಬೇಕು ಎಂದು ಕಿವಿ ಮಾತು ಹೇಳಿದರು.

ಪ್ರಧಾನ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶೆ ರತ್ನಕಲಾ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌.­ಸುಬ್ಬಾರೆಡ್ಡಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT