ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈನ ಧರ್ಮದಿಂದ ಸಮಾಜ ಸಶಕ್ತ’

Last Updated 22 ಸೆಪ್ಟೆಂಬರ್ 2013, 19:50 IST
ಅಕ್ಷರ ಗಾತ್ರ

ನೆಲಮಂಗಲ: ‘ಭಾರತವು ಋಷಿ ಮುನಿಗಳ ಪರಂಪರೆ ಹೊಂದಿದೆ. ಜೈನ ಧರ್ಮವು ಈಗಲೂ ಅದನ್ನು ಪಾಲಿಸಿ ಕೊಂಡು ಬರುತ್ತಿದೆ. ಅರಿಸ್ಟಾಟಲ್‌ ಕೂಡ ಜೈನ ಧರ್ಮವನ್ನು ಹಾಡಿ ಹೊಗಳಿ ದ್ದಾನೆ’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ತಿಳಿಸಿದರು.

ಇಲ್ಲಿಗೆ ಸಮೀಪದ ಅಡಕಿಮಾರನಹಳ್ಳಿ ಯಲ್ಲಿ ಭಿಕ್ಷು ಧಾಮ ಟ್ರಸ್ಟ್‌ನ ಭಿಕ್ಷು ಭಾರತಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ‘ತುಲಸಿ ಸಭಾಗರ್‌’ ಆಧ್ಯಾತ್ಮಿಕ ಭವನ ಉದ್ಘಾಟಿಸಿ ಮಾತನಾಡಿದರು.

‘ಜಾತಿ, ಧರ್ಮ ಭೇದವಿಲ್ಲದೆ ಅಹಿಂಸೆ, ಕಲ್ಯಾಣ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜೈನ ಧರ್ಮ ಸಮಾಜವನ್ನು ಸಶಕ್ತಗೊಳಿಸುತ್ತಿದೆ’ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ಅಂಗವಿಕಲರಿಗೆ ಸೈಕಲ್‌ ಮತ್ತು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಅಧ್ಯಕ್ಷತೆ ವಹಿಸಿದ್ದರು.

ಕೋಲ್ಕತ್ತಾ ಜೈನ್‌ ಸಭಾದ ಅಧ್ಯಕ್ಷ ಹೀರಾಲಾಲ್‌ ಮಾಲೂ, ಟ್ರಸ್ಟ್‌ನ ಧರ್ಮಿಚಂದ್‌ ಧೋಕಾ, ನರೇಂದ್ರ ಕುಮಾರ್‌ ರಾಯ್‌ ಸೊನಿ, ಲಲಿತ್‌ ಜೈನ್‌ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT