ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಂತ್ರಿಕ ಮಾಹಿತಿ ರೈತರು ಬಳಸಿಕೊಳ್ಳಿ’

Last Updated 14 ಡಿಸೆಂಬರ್ 2013, 6:51 IST
ಅಕ್ಷರ ಗಾತ್ರ

ಕೆರೆಮನೆ (ಎನ್.ಆರ್.ಪುರ): ಆತ್ಮ­ಯೋಜನೆ­ಯಡಿ ನಡೆಸಲಾಗುತ್ತಿ­ರುವ ರೈತಕ್ಷೇತ್ರಪಾಠ ಶಾಲೆಯಲ್ಲಿ ನೀಡಿದ ತಾಂತ್ರಿಕ ಮಾಹಿತಿಯನ್ನು ರೈತರು ತಮ್ಮ ಸಸ್ಯಕ್ಷೇತ್ರದಲ್ಲಿ ಅವಳವಡಿಸಿಕೊಳ್ಳ­ಬೇ­ಕೆಂದು ಕೃಷಿ ಇಲಾಖೆಯ ಆತ್ಮ ಯೋಜ­ನೆಯ ವಿಷಯ ತಜ್ಞೆ ವೀಣಾ ತಿಳಿಸಿದರು.

ತಾಲ್ಲೂಕಿನ ಕಾನೂರು ಗ್ರಾಮ ಪಂಚಾ­ಯಿತಿ ವ್ಯಾಪ್ತಿಯ ಕೆರೆಮನೆ ನಿವಾಸಿ ಪ್ರಶಾಂತ್ ಅವರ ಸಸ್ಯ ಕ್ಷೇತ್ರ­ದಲ್ಲಿ ಶುಕ್ರವಾರ ಕೃಷಿ ಇಲಾಖೆಯ ಆತ್ಮಯೋಜನೆಯಡಿ ಹಮ್ಮಿ­ಕೊಳ್ಳ­ಲಾಗಿದ್ದ ಭತ್ತದ ಕ್ಷೇತ್ರೋತ್ಸವ ಕಾರ್ಯ­ಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈ ಭಾಗದಲ್ಲಿ ಆತ್ಮ ಯೋಜನೆಯಡಿ 5 ರೈತ ಕ್ಷೇತ್ರ ಪಾಠ ಶಾಲೆ ನಡೆಸ­ಲಾಗಿದೆ. ಈ ಕ್ಷೇತ್ರ ಪಾಠಶಾಲೆಯಲ್ಲಿ ನೀಡಿದ ಪ್ರಾತ್ಯಕ್ಷಿಕೆ ಹಾಗೂ ವೈಜ್ಞಾನಿಕ ಮಾಹಿತಿ ದಾನಿ ರೈತರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ರೈತರು ಇಂತಹ ತಾಂತ್ರಿಕತೆಯನ್ನು  ಅಳವಡಿಸಿ ಕೊಂಡು ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸ ಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕ ವೈ.ಎಸ್.­ಮಂಜುನಾಥ್ ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ಮೊದಲೇ ಆರಂಭ­ವಾಗಿದ್ದರೆ ಅನುಕೂಲ­ವಾಗುತ್ತಿತ್ತು.ಇದು ತಡವಾಗಿ ಆರಂಭವಾಗಿ ರುವುದರಿಂದ ರೈತರು ಬೇರೆ ಕಡೆ ಭತ್ತ ಮಾರಾಟ ಮಾಡಿದ್ದಾರೆ. ಕೃಷಿ ಇಲಾಖೆಯ ಕಾರ್ಯ­ಕ್ರಮಗಳನ್ನು ಎಲ್ಲರೂ ಸದು­ಪಯೋಗಪಡಿಸಿ ಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಅವರು ರೈತ ಕ್ಷೇತ್ರ ಪಾಠ ಶಾಲೆಯ ಬಗ್ಗೆ, ಗ್ರಾಮದಲ್ಲಿ ತೆಗೆದು ಕೊಂಡಿದ್ದ ಪ್ರಾತ್ಯಕ್ಷಿಕೆ ಬಗ್ಗೆ ಹಾಗೂ ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡುವ ಮಾಹಿತಿಯನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯ ಬೇಕೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT