ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೃತ್ತಿ ವೇತನ ನೌಕರರ ಜನ್ಮಸಿದ್ದ ಹಕ್ಕು; ಭಿಕ್ಷೆಯಲ್ಲ’

Last Updated 18 ಡಿಸೆಂಬರ್ 2013, 4:34 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ ಮಂಗಳವಾರ ರಾಷ್ಟ್ರೀಯ ನಿವೃತ್ತರ ದಿನವನ್ನು  ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹುಡ್ಕೋ ಕಾಲೊನಿಯ ಸಚ್ಚಿದಾನಂದ ಮಠದ ಸಭಾಂಗಣದಲ್ಲಿ ಆಚರಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ. ಗಾಣಿಗೇರ  ವಹಿಸಿದ್ದರು. ನೆಲ್ಸನ್ ಮಂಡೇಲಾ ಹಾಗೂ ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ ನಿಧನಕ್ಕೆ   ಸಂತಾಪ ಸೂಚಿಸಲಾಯಿತು.

ಕಾರ್ಯದರ್ಶಿ ರಾಜಶೇಖರ ಕರಡಿ ಮಾತನಾಡಿ, ನಿವೃತ್ತಿ ವೇತನ  ನೌಕರರ ಜನ್ಮಸಿದ್ದ ಹಕ್ಕು, ಅದು ಭಿಕ್ಷೆಯಲ್ಲ ಎಂದರು.
ಕೆ.ಐ. ಕುರುಗೋಡ, ಎಸ್. ವಾಯ್. ಯಾಳಗಿ, ಜಿ.ಎಂ. ಯಾನಮಶೆಟ್ಟಿ ಮಾತನಾಡಿ, ನಿವೃತ್ತರ ಸಮಸ್ಯೆಗಳನ್ನು ಗಟ್ಟಿ ಮನಸ್ಸಿನಿಂದ ಪರಿಹರಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿ.ಎಸ್. ನಾಯ್ಕರ, ಎಂ.ಎಸ್. ಚಿನ್ನೂರ, ಐ.ಕೆ. ಬಲೂಚಿಗಿ ಮಾತ ನಾಡಿದರು.
ಎಸ್.ಸಿ. ಗಾಣಿಗೇರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನಿವೃತ್ತರು ಮಕ್ಕಳಿಂದ ವಂಚಿತರಾಗಿ ಜೀವನ ಸಾಗಿಸುವುದು ಕಷ್ಟವಾಗಿದೆ. ಆದ್ದರಿಂದ ದಂಪತಿಗಳು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂದರು.

ಸಭೆಯಲ್ಲಿ ಎಸ್.ಐ. ಹೊನ್ನಗುಡಿ, ಎಂ.ಆಯ್. ಕಮ್ಮಾರ, ಬಿ.ಬಿ. ಭಾವಿಕಟ್ಟಿ, ಎಚ್.ಎಂ. ಮಡಿವಾಳರ, ಎಚ್.ಬಿ. ದೊಡ್ಡಮನಿ, ಎಸ್.ಬಿ. ಬೊಮ್ಮಸಾಗರ, ಎಚ್. ಎಸ್. ಪಾಟೀಲ, ಪಿ.ಟಿ. ನಾರಾಯಣಪೂರ, ಐ.ಬಿ. ಮರಿಬಸಣ್ಣವರ, ಎಂ.ಎಚ್. ಕುಲಕರ್ಣಿ, ಎಸ್.ಬಿ. ಹೊನ್ನಳ್ಳಿ, ವಾಸುಮಾಮಾ ಟೀಕಂದಾರ, ಬಿ.ಎಂ. ಶೆಲವಡಿ, ಆರ್.ವಿ. ಶಿದ್ಲಿಂಗ್, ಬಿ.ಎ. ವಸ್ತ್ರದ, ಆರ್.ಎಚ್. ಹಾಗೂ ಜಿ.ಎಂ. ಅಳವಂಡಿ, ಬಿ.ಬಿ. ಗೊಡಕೆ, ಎಸ್.ಬಿ. ದುಮ್ಮಾಳ, ಜಿ.ಜೆ. ಮುಲ್ಲಾ, ಎಸ್.ಆರ್. ಜಕ್ಕಲಿ ಹಾಜರಿದ್ದರು.

ಬಿ.ಬಿ. ಹೂಗಾರ ಸ್ವಾಗತಿಸಿದರು,  ರಾಜಶೇಖರ ಹಿರೇಮಠ ವಂದಿಸಿದರು. ಜಿ.ಪಿ. ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT