ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಷ್ಠುರ ಬದುಕು ಸಾಗಿಸಿದ ಆದರ್ಶಜೀವಿ’

ಸರ್‌ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ n ಮಹಾನ್‌ ಸಾಧನೆಗಳ ಸ್ಮರಣೆ
Last Updated 16 ಸೆಪ್ಟೆಂಬರ್ 2013, 9:52 IST
ಅಕ್ಷರ ಗಾತ್ರ

ರಾಮನಗರ: ‘ವಿಶ್ವೇಶ್ವರಯ್ಯ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಸ್ಮರಣೆ ಮಾಡುವುದಕ್ಕಿಂತ, ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಮತ್ತು ಸೈದ್ಧಾಂತಿಕ ನಿಲು ವುಗಳನ್ನು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಕೃಷ್ಣೇಗೌಡ ತಿಳಿಸಿದರು.

ನಗರದ ಜಾನಪದ ಲೋಕದ ಸಭಾಂಗಣದಲ್ಲಿ ಸ್ನೇಹಕೂಟ ಭಾನು ವಾರ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರ ಯ್ಯನವರ ಜನ್ಮದಿನಾಚರಣೆಯಲ್ಲಿ  ಅ ವರು ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ನೂರಾರು ಸಂಸ್ಥಾನಗಳು ಭಾರತದಲ್ಲಿದ್ದವು. ಅವು ಗಳಲ್ಲಿ ಮೈಸೂರು ಸಂಸ್ಥಾನ ಮಾತ್ರ ಹೆಚ್ಚು ವೈಭವೋಪೇತವಾಗಿತ್ತು.  ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದ ಸಮಯದಲ್ಲಿ ಮೈಸೂರು ಸಂಸ್ಥಾನ ವನ್ನು ವಿಶ್ವಮಟ್ಟದಲ್ಲಿ ಗುರ್ತಿಸುವ ರೀತಿಯಲ್ಲಿ ಕೆಲಸ ಮಾಡಿದರು. ರಾಜ್ಯ ದಲ್ಲಿ ಕಾಗದ ಕಾರ್ಖಾನೆ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮಾರ್ಜಕ ಕಾರ್ಖಾನೆ ಸೇರಿದಂತೆ ದೇಶೀಯ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಉದ್ಯಮಗಳನ್ನು ಸ್ಥಾಪಿ ಸುವ ಮೂಲಕ ಮೈಸೂರಿನ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗು ವಂತೆ ಮಾಡಿದರು. ಕೆೇವಲ ಭಾರತ ಮಾತ್ರವಲ್ಲದೆ ವಿದೇಶ ಗಳಲ್ಲಿಯೂ ತಮ್ಮ ತಂತ್ರಜ್ಞಾನದ ಮೂಲಕ ವಿಶ್ವೇ ಶ್ವರಯ್ಯ ಹೆಸರು ಪಡೆದಿದ್ದರು ಎಂದು ಸ್ಮರಿಸಿದರು.

‘ನೇರ ನುಡಿ ಮತ್ತು ನ್ಯಾಯಪರತೆಗೆ ಹೆಸರು ಪಡೆದ ಸರ್ಎಂವಿ ಅವರು ನಿಷ್ಠೂರ ವಾದಿಯೂ ಆಗಿದ್ದರು. ಭಾರತ ರತ್ನ ನೀಡುವ ಬಗ್ಗೆ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವ ರು ಪತ್ರ ಬರೆದ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರು, ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಹಾಗಿದ್ದ ಪಕ್ಷದಲ್ಲಿ ಅಥವಾ ಸರ್ಕಾರದ ಪರವಾ ಗಿಯೇ ನಾನು ಕೆಲಸ ಮಾಡಬೇಕು ಎಂಬಂತಹ ಸನ್ನಿವೇಶದಲ್ಲಿ ನನಗೆ ಭಾರ ತ ರತ್ನ ನೀಡುವುದಾದರೆ ಅದು ಬೇಡ ಎಂದು ದಿಟ್ಟತನದಿಂದ ಹೇಳುವ ಮೂಲಕ ತಮ್ಮ ನಿಷ್ಠೂರವಾದ ಪ್ರದ  ರ್ಶಿಸಿದ್ದರು’ ಎಂದರು.

ಸಮಾರಂಭ ಉದ್ಘಾಟಿಸಿದ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇ ಗೌಡ ಮಾತನಾಡಿ, ವಿಶ್ವೇಶ್ವರಯ್ಯ ಅವರ ಆದರ್ಶ ಮತ್ತು ಶ್ರದ್ಧೆ ಇಂದಿನ ಯುವ ಎಂಜಿನಿಯರ್‌ಗಳಿಗೆ ಮಾದರಿ ಯಾಗಬೇಕು ಎಂದರು.

ಇದೇ ವೇಳೆ ಬಿ.ಆರ್. ಪ್ರಾಜೆಕ್ಟ್‌ ಸ ಹಾಯಕ ಕಾರ್ಯಪಾಲಕ ಎಂಜಿ ನಿಯರ್‌  ಹೊಸಹಳ್ಳಿ ದಾಳೆಗೌಡ ಅವ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ನೇಹ ಕೂಟ ಅಧ್ಯಕ್ಷ ಎಚ್.ಪಿ. ನಂಜೇಗೌಡ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸಂಘದ ಗೌರವಾಧ್ಯಕ್ಷ ವೈ.ಎಸ್.ಹನುಮೇಗೌಡ, ಉಪಾಧ್ಯಕ್ಷ ಎಚ್.ಶಿವರಾಮಯ್ಯ, ಪ್ರಧಾನ ಕಾರ್ಯದಶರ್ಿ ಪಾದ್ರಳ್ಳಿ ರಾಜು, ಸಹ ಕಾರ್ಯದರ್ಶಿ ಸಿ.ಮಹೇಶ್, ಖಜಾಂಚಿ ರಾಮಣ್ಣ, ಸಂಚಾಲಕ ಸಿ.ಎ. ಶಾಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗೇಗೌಡ, ಉಪನ್ಯಾಸಕಿ ಸುಪ್ರಿಯಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT