ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರು ಉಂಡರೆ ಬಲಾಢ್ಯರಿಗೆ ಅಸಹನೆ’

Last Updated 4 ಏಪ್ರಿಲ್ 2014, 6:30 IST
ಅಕ್ಷರ ಗಾತ್ರ

ಚಿಂಚೋಳಿ: ‘ಬಡವರು ಊಟಕ್ಕೋ ಇಲ್ಲವೋ ಚಿಕಿತ್ಸೆಗಾಗಿಯೋ ಆಭರಣ ಒತ್ತೆಯಿಟ್ಟು ಸಾಲ ಮಾಡಿದಾಗ, ಇಂದಿರಾ ಗಾಂಧಿ ಋಣ ಪರಿಹಾರ ಕಾಯ್ದೆ ಜಾರಿ ಮಾಡಿ ಒತ್ತೆಯಿಟ್ಟ ವಡವೆ, ವಸ್ತು ಬಿಡಿಸಿಕೊಟ್ಟರು. ಬಡವ­ರ ಹಸಿವು ನೀಗಿಸಲು ಸಿದ್ದರಾ­ಮಯ್ಯನ­ವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿ, ವಿವಿಧ ನಿಗಮಗಳಲ್ಲಿನ ಬಡ­ವರ ಸಾಲ ಮನ್ನಾ ಮಾಡಿದರು’ ಎಂದು ವಿಧಾನ ಸಭೆಯ ಮಾಜಿ ಸ್ಪೀಕರ್‌ ಹಾಗೂ ಶಾಸಕ ರಮೇಶಕುಮಾರ ಹೇಳಿದರು.

ಅವರು ಇಲ್ಲಿನ ವೀರೇಂದ್ರ ಪಾಟೀಲ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆ­ಸ್‌ ಅಭ್ಯರ್ಥಿ ಎನ್‌.ಧರ್ಮಸಿಂಗ್‌ ಪರ ಚುನಾ­ವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾತನಾಡಿದರು.

‘ಅಂದು ಬಡವರನ್ನು ಋಣ­ಮುಕ್ತ­ರಾಗಿ ಮಾಡಿದ ಇಂದಿರಾ ಗಾಂಧಿ­-ಯನ್ನು ವಿರೋಧಿಸಿದವರೇ ಇಂದು ಬಡವರು ಹೊಟ್ಟೆ ತುಂಬಾ ಉಣ್ಣು­ವು­ದನ್ನು ಸಹಿಸಲು ಆಗದ ಬಲಾಢ್ಯರು, ಸಿದ್ದರಾಮಯ್ಯ ಸೋಮಾರಿಗಳ ರಾಜ್ಯ ಮಾಡಲು ಹೊರಟಿದ್ದಾರೆ’ ಎನ್ನುತ್ತಿ­ದ್ದಾರೆ. ಇದು ‘ಕುದುರೆ ಹುರುಳಿ ತಿಂದ­ರೆ ಕತ್ತೆಗೆ ಹೊಟ್ಟೆನೋವು’ ಎಂಬಂ­ತಾಗಿದೆ ಎಂದು ವ್ಯಂಗ್ಯವಾಡಿದರು.

ಶಾಸಕ ಡಾ. ಉಮೇಶ ಜಾಧವ್‌ , ಮಾಜಿ ಸಚಿವ ವೈಜನಾಥ ಪಾಟೀಲ, ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ, ಬಿ. ನಾರಾಯಣರಾವ್‌, ಖಾಜಿ ಅರ್ಷದ್‌ ಅಲಿ, ವಿಧಾನ ಪರಿ­ಷತ್‌ ಸದಸ್ಯ ಅಲ್ಲಮಪ್ರಭು ಪಾಟೀಲ, ಕೆ.ಎಂ ಬಾರಿ, ರೇವಣಸಿದ್ದಪ್ ಸಾತ­ನೂರು ಮಾತನಾಡಿದರು.

ಭೀಮರಾವ್‌ ಟಿ.ಟಿ, ಬಸಯ್ಯ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಶಿವ­ಕುಮಾರ ಕೊಳ್ಳೂರು, ಡಾ. ವಿಕ್ರಂ ಪಾಟೀಲ, ಸುರೇಶ ಸಜ್ಜನ್‌, ಜಗದೇವ ಗುತ್ತೇದಾರ, ಶಾಮರಾವ್‌ ರಾಠ­ೋಡ್‌, ಇಲಿಯಾಸ್‌ ಸೇಠ ಬಾಗವಾನ್‌, ರವಿ­ರಾಜ ಕೊರವಿ, ದೀಪ­ಕ­ನಾಗ್‌ ಪುಣ್ಯಶೆ­ಟ್ಟಿ, ಲಕ್ಷ್ಮಣ ಆವುಂಟಿ, ಜಗದೀಶಸಿಂಗ್‌ ಠಾಕೂರು, ಜಗನ್ನಾಥ ಈದಲಾಯಿ, ಬಸ­ವಣ್ಣ ಪಾಟೀಲ, ರಾಮ­ಚಂದ್ರ ಜಾಧವ್‌, ಅರುಣ ಪವಾ­ರ್‌,ಚಂದ್ರ­ಶೇಖರ ಗುತ್ತೇ-­ದಾರ, ಝರಣಪ್ಪ ಚಿಂಚೋಳಿ, ಮಧು­ಸೂದನ­ರೆಡ್ಡಿ, ರಾಮ­­­­ಶೆಟ್ಟಿ ಪವಾರ್‌, ಬಸವ­ರಾಜ ಪಾಟೀಲ ಹೇರೂರು, ಕಮಲಾ­ಬಾಯಿ ಹೇರೂ­ರು, ಸವಿತಾ ಸಜ್ಜನ­ಶೆಟ್ಟಿ, ಜಯಶ್ರೀ ಸಜ್ಜನಶೆಟ್ಟಿ, ವೀರಮ್ಮಾ ಸಂಗಯ್ಯಸ್ವಾಮಿ, ಉಮಾ ಪಾಟೀಲ, ಡಾ. ತುಕಾರಾಮ ಪವಾರ್‌, ಸಿ.ಬಿ.­ಪಾಟೀಲ ಓಕಳಿ ಇದ್ದರು.

ಹಲವಾರು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ ಸೇರಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಜಮಾದಾರ ಸ್ವಾಗತಿ­ಸಿದರು.­ಬಸವರಾಜ ಪಾಟೀಲ ಹೇರೂ­ರು ನಿರೂಪಿಸಿದರು. ರಸೂಲ್‌ ಇನಾಂ­ದಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT