ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ನಾಯಕತ್ವಗುಣ ಬೆಳೆಸಿ’

Last Updated 11 ಡಿಸೆಂಬರ್ 2013, 5:32 IST
ಅಕ್ಷರ ಗಾತ್ರ

ಕೊಲ್ಹಾರ: ‘ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿರುವ ವಿಶಿಷ್ಟ ಕಲಾಪ್ರಕಾರಗ ಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ಜಾರಿಗೆ ತಂದಿ ರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿಶಿಷ್ಟವಾಗಿದ್ದು’ ಎಂದು ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕಲ್ಲು ಸೊನ್ನದ ಹೇಳಿದರು.

ಕೊಲ್ಹಾರದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳೇ ದೇಶದ  ಆಸ್ತಿಯಾಗಿದ್ದು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಬೇಕಾದ ಅವಶ್ಯಕತೆ ಯಿದೆ ಎಂದು ತಿಳಿಸಿದರು.

ಶಿಕ್ಷಣ ಪಡೆಯುವ ಪ್ರತಿ ಮಗುವೂ ಒಂದಿಲ್ಲೊಂದು ವಿಶಿಷ್ಟವಾದ ಪ್ರತಿಭೆ ಯನ್ನು ಹೊಂದಿರುತ್ತದೆ. ಅದು ವಿಕಾಸಗೊಳ್ಳಲು ಪ್ರತಿಭಾ ಕಾರಂಜಿಗ ಳಂತಹ ಸಾಂಸ್ಕೃತಿಕ ಕಾರ್ಯ ಕ್ರಮಗಳ ಅಗತ್ಯ ಇದೆ ಎಂದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ  ರಾಮಣ್ಣ ಬಾಟಿ ಮಾತನಾಡಿ, ಅಕ್ಷರಗಳನ್ನು ಕಲಿಯುವುದೇ ಶಿಕ್ಷಣ ವಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಭಜಂತ್ರಿ ವಹಿಸಿದ್ದರು. ಮುಖ್ಯಅತಿಥಿ ಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಸುರೇಖಾ ಬರಗಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಕಮಲಾ ಬಾಯಿ ಮಾಕಾಳಿ, ಸಿಆರ್‌ಪಿ ಎಸ್‌.ವೈ.ಅರಸಗೊಂಡ, ಮುಖ್ಯಶಿಕ್ಷಕ ಕೆ.ಯು. ಗಿಡ್ಡಪ್ಪಗೋಳ ಉಪಸ್ಥಿತರಿ ದ್ದರು. ಶ್ರುತಿ ಮಠಪತಿ ಪ್ರಾರ್ಥಿಸಿದರು. ಕೆ.ಯು.ಗಿಡ್ಡಪ್ಪಗೋಳ ಸ್ವಾಗತಿಸಿದರು. ನಾಗರಾಜ ಬನಸೋಡೆ ನಿರೂಪಿಸಿ ದರು.ಬಿ.ಎಸ್.ಹಾವಳಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT