ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಡೆ ಸ್ನಾನ ಮೌಢ್ಯದ ಪರಮಾವಧಿ’

Last Updated 20 ಡಿಸೆಂಬರ್ 2013, 6:27 IST
ಅಕ್ಷರ ಗಾತ್ರ

ಕೋಲಾರ:  ಮೂಢನಂಬಿಕೆ ತೊರೆದರೆ ಮಾತ್ರ ಯಾವುದೇ ಸಮಾಜದ ಅಭಿ­ವೃದ್ಧಿ ಸಾಧ್ಯ  ಸಾಧ್ಯ ಎಂದು ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್ ಹೇಳಿದರು. 

ನಗರದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯು ಡಾ.ಬಿ,ಆರ್.­ಅಂಬೇಡ್ಕರ್ ಪರಿನಿರ್ವಾಣದ ಪ್ರಯುಕ್ತ ನಂಬಿಕೆ ಮತ್ತು ಮೂಢನಂಬಿಕೆ ಕುರಿತು ಏರ್ಪಡಿಸಿದ್ದ ಚಿಂತನಾ ಗೋಷ್ಠಿ  ಉದ್ಘಾಟಿಸಿ ಮಾತನಾಡಿದರು.

ನಿಧಿ ಆಸೆ ಗೋಸ್ಕರ ಮಕ್ಕಳನ್ನು ಬಲಿ­ಕೊಡುವುದು, ಬ್ರಾಹ್ಮಣರು ಉಂಡೆದ್ದ ಎಲೆಗಳ ಮೇಲೆ ಉರುಳಾಡಿ ಪುಣ್ಯಕ್ಕಾಗಿ ಹಪಹಪಿಸುವುದು ಮೂಢನಂಬಿಕೆಯ ಪರಮಾವಧಿ ಎಂದರು.

ಇಂದಿಗೂ ಹಳ್ಳಿಗಳಲ್ಲಿ ನಿಧಿ ಇದೆ ಎಂದು ಮಕ್ಕಳನ್ನೇ ಬಲಿಕೊಡುವುದು ನಡೆ­ಯುತ್ತಿದೆ. ಈ ರೀತಿ  ಕಂದಾಚಾರ­ಗಳು ಮತ್ತು ಎಲ್ಲ ಜಾತಿ ಧರ್ಮಗಳಲ್ಲಿ­ರುವ ಮಾನವ ವಿರೋಧಿ ಮೂಢ­ನಂಬಿಕೆ ಕಿತ್ತೊಗೆಯ­ಬೇಕು. ಮೂಢ­­ನಂಬಿಕೆಗಳ ವಿರುದ್ಧ ಎಲ್ಲೋ ಮೆಟ್ರೋ ನಗರಗಳಲ್ಲಿ ಕುಳಿತು ಚರ್ಚೆ ಮಾಡುವು­ದಕ್ಕಿಂತ ಗ್ರಾಮೀಣ ಪ್ರದೇಶ­ಗಳ ಜನರ ನಡುವೆ ಚರ್ಚಿಸಿ ಸಾಧಕ -ಭಾದಕಗಳನ್ನು ತಿಳಿಯಬೇಕಾಗಿದೆ ಎಂದರು.

ಮೂಢನಂಬಿಕೆಗಳ ವಿರುದ್ಧ ರಚಿಸಿ­ರುವ ಕರಡು ವಿಧೇಯಕವು ಕಂದಾ­ಚಾರಗಳಿಂದ ಜನಸಮುದಾಯ­ವನ್ನು ವಿಮೋಚನೆ ಮತ್ತು ಬೆಳಕಿನಡೆಗೆ ಕೊಂಡೊಯ್ಯತ್ತದೆ ಎಂದು ತಿಳಿಯ­ಬೇಕು. ಪ್ರಕೃತಿಗೆ ವಿರುದ್ಧವಾದ ಹಾಗೂ ಸಹಜಕ್ಕೆ ದೂರವಾದ ನಂಬಿಕೆಗಳನ್ನು ಕಿತ್ತೊಗೆಯಬೇಕು ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ. ಕಾಯ್ದೆ­ಯನ್ನು ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಮೂಢನಂಬಿಕೆ ವಿರುದ್ಧದ ಹೋರಾಟ ಸುಮಾರು ಶತಮಾನ­ಗಳದ್ದಾಗಿದ್ದು, ವೈದಿಕ ಧರ್ಮ ತನ್ನ ಶ್ರೇಷ್ಠತೆಯನ್ನು ಹೇರುವ ಸಲುವಾಗಿ ಶ್ರಮ ಶಕ್ತಿ ಸಮುದಾಯಗಳಲ್ಲಿ ಮೂಢ­ನಂಬಿಕೆಗಳನ್ನು ಬಿತ್ತಿ, ಎಲ್ಲಾ ರೀತಿ­ಯಲ್ಲೂ ಶೋಷಣೆಗೆ ಒಳಪಡಿಸಿದ ಪರಿ­ಣಾಮ ಸಮಾಜದಲ್ಲಿ ದೊಡ್ಡ ಪ್ರಮಾಣ­ದಲ್ಲಿ ಅಸಮಾನತೆ ಮತ್ತು ಬಡತನ ಬೆಳೆದು ನಿಂತಿದೆ ಎಂದರು.

ನಂಬಿಕೆಯೇ ಮುಖ್ಯ. ಮೂಢನಂಬಿಕೆ­ಗಳಲ್ಲ.  ಮೂಢನಂಬಿಕೆಗಳಿಗೆ ಬಲಿ­ಯಾಗು­­ತ್ತಿ­­ರುವುದು ಅನಕ್ಷರಸ್ಥರು ಮತ್ತು ಕೆಳವರ್ಗದ ಜನ ಮಾತ್ರ. ಮೂಢ­ನಂಬಿಕೆಗಳ ವಿರುದ್ಧ ಆಂದೋ­ಲನ­ವನ್ನು ರೂಪಿಸುತ್ತಿರುವ ನಿಡುಮಾ­ಮಿಡಿ ಸ್ವಾಮೀಜಿ ವಿರುದ್ಧ ದ್ವೇಷದಿಂದ ಟೀಕೆ ಮಾಡುವವರು ತಪ್ಪು ಹೇಳಿಕೆ­ಗಳನ್ನು ನೀಡಿದರೆ, ಬೆದರಿಕೆಗಳನ್ನು ಹಾಕಿ­ದರೆ ದಲಿತ ಸಂಘಟನೆಗಳು ಒಂದಾಗಿ ಹಳ್ಳಿಹಳ್ಳಿಯಿಂದ ದೊಣ್ಣೆಗಳನ್ನು ಹಿಡಿದು ಸ್ವಾಮೀಜಿ ರಕ್ಷಣೆಗೆ ನಿಲ್ಲಬೇಕು ಎಂದರು.

ವಿಭಾಗೀಯ ಸಂಚಾಲಕ ಎ.ಮಂಜು­ನಾಥ್, ಬೆಂಗ­ಳೂರು ಜಿಲ್ಲಾ ಸಂಚಾಲಕ ಐ.ಆರ್.­ನಾರಾಯಣಸ್ವಾಮಿ, ಹಿರೇಕ­ರಪನಹಳ್ಳಿ ಯಲ್ಲಪ್ಪ, ದೊಡ್ಡ­ಮಲೆ ರವಿ ಕುಮಾರ್, ಮಾರ್ಜೇನಹಳ್ಳಿ ಮುನಿ­ಸ್ವಾಮಿ, ವಿಜಿ ಕುಮಾರ್, ಮಹಿಳಾ ಅಧ್ಯಕ್ಷೆ ಉಮಾ, ನಾಗ, ಯಲ್ಲಪ್ಪ, ಮುನಿರಾಜು, ಸಿ.ವಿ.ನಾಗರಾಜ್,  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT